
ಬೆಂಗಳೂರು(ಅ.18): ನಿಸಾನ್ ಸಂಸ್ಥೆಯ ನೂತನ SUV ನಿಸಾನ್ ಕಿಕ್ಸ್ ಅನಾವರಣಗೊಂಡಿದೆ. ವಿಶೇಷವಾಗಿ ಭಾರತದಲ್ಲೇ ನಿರ್ಮಾಣವಾಗಿರುವ ನಿಸಾನ್ ಕಿಕ್ಸ್, ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ತಯಾರಿಸಲಾಗಿದೆ.
ಹ್ಯುಂಡೈ ಕ್ರೆಟಾ, ರೆನಾಲ್ಟ್ ಕ್ಯಾಪ್ಚರ್ಗೆ ಪೈಪೋಟಿ ನೀಡಲಿರುವ ನೂತನ ನಿಸಾನ್ ಕಿಕ್ಸ್ ಹಲವು ವಿಶೇಷತೆಗಳನ್ನೊಳಗೊಂಡಿದೆ. ಮುಂಭಾಗದಲ್ಲಿ ವಿ ಶೇಪ್ ಗ್ರಿಲ್, ಲಾರ್ಜ್ ಹೆಡ್‌ಲ್ಯಾಂಪ್ಸ್, ಚೈನ್ ಸ್ಪಾಯಿಲರ್, ಇನ್ನೂ LED ಫಾಗ್‌ಲ್ಯಾಂಪ್ಸ್, ಟ್ವಿನ್ ಫೈವ್ ಸ್ಪೋಕ್ ಅಲೋಯ್ ವೀಲ್ಹ್ ಅಳವಡಿಸಲಾಗಿದೆ.
ಪೆಟ್ರೋಲ್ ಹಾಗೂ ಡೀಸೆಲ್ ವೆರಿಯೆಂಟ್‌ಗಳಲ್ಲಿ ನಿಸಾನ್ ಕಿಕ್ಸ್ ಲಭ್ಯವಿದೆ. ಪೆಟ್ರೋಲ್ 1.6 ಲೀಟರ್ 4 ಸಿಲಿಂಡರ್ ಇಂಜಿನ್ 103 ಬಿಹೆಚ್‌ಪಿ ಪವರ್ ಉತ್ವಾದಿಸಲಿದೆ. 1.5 ಲೀಟರ್ ಡೀಸೆಲ್ ಇಂಜಿನ್ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಮ್ಯಾನ್ಯುಯೆಲ್ ಹಾಗೂ AMT ಟ್ರಾನ್ಸ್‌ಮಿಶನ್ ಲಭ್ಯವಿದೆ. 2019ರ ಜನವರಿಯಲ್ಲಿ ನೂತನ ನಿಸಾನ್ ಕಿಕ್ಸ್ ಕಾರು ಬಿಡುಗಡೆಯಾಗಲಿದೆ. 10-15 ಲಕ್ಷ ರೂಪಾಯಿ ಬೆಲೆ ಅಂದಾಜಿಸಲಾಗಿದೆ.