ಎಲೆಕ್ಟ್ರಿಕ್ ಬೈಕ್ ಅಥವಾ ಕಾರ ಖರೀದಿ ಜನ ಸಾಮಾನ್ಯರಿಗೆ ಕಷ್ಟ. ಕಾರಣ ಎಲೆಕ್ಟ್ರಿಕ್ ವಾಹನಗಳು ದುಬಾರಿಯಾಗಿದೆ. ಕೇಂದ್ರ ಸರ್ಕಾರದ ವಿಶೇಷ ಅನುದಾನಡಿಯೂ ಬೆಲೆ ಮಾತ್ರ ಕೈಗೆಟುಕುವಂತಿಲ್ಲ. ಆದರೆ ಕೇವಲ 7 ಸಾವಿರ ರೂಪಾಯಿಗೆ ಎಲೆಕ್ಟ್ರಿಕ್ ಬೈಕ್ ಲಭ್ಯವಿದೆ. ಇಲ್ಲಿದೆ ನೂತನ ಎಲೆಕ್ಟ್ರಿಕ್ ಬೈಕ್ ವಿವರ.
ಹರ್ಯಾಣ(ಆ.03): ಭಾರತದಲ್ಲೀಗ ಎಲೆಕ್ಟ್ರಿಕ್ ವಾಹನದತ್ತ ಎಲ್ಲರ ಚಿತ್ತ ನೆಟ್ಟಿದೆ. ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಕ್ಕೆ ವಿಶೇಷ ಅನುದಾನ ನೀಡಿದೆ. ಆದರೆ ಭಾರತದಲ್ಲಿ ಬಿಡುಗಡೆಯಾಗಿರುವ ಹಾಗೂ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ವಾಹನಗಳು ಕೈಗೆಟುಕವ ದರದಲ್ಲಿಲ್ಲ. ಎಲೆಕ್ಟ್ರಿಕ್ ಸಣ್ಣ ಕಾರಿನ ಸರಾಸರಿ ಬೆಲೆ 10 ಲಕ್ಷ ರೂಪಾಯಿಗೆ ಹೆಚ್ಚು. ಇನ್ನು ಸ್ಕೂಟರ್ ಅಥವಾ ಬೈಕ್ ಯಾವುದಾದರೂ ಸರಾಸರಿ ಬೆಲೆ 1 ಲಕ್ಷ ರೂಪಾಯಿ. ಹೀಗಾಗಿ ಜನಸಾಮಾನ್ಯರಿಗೆ ಎಲೆಕ್ಟ್ರಿಕ್ ವಾಹನ ದುಬಾರಿಯಾಗಿದೆ. ಇದೀಗ ಹರ್ಯಾಣದಲ್ಲಿ ಹೀರೋ ಸ್ಪ್ಲೆಂಡರ್ ಹಾಗೂ ಬಜಾಜ್ ಡಿಸ್ಕವರ್ ಬೈಕ್‌ನ್ನು ಕೇವಲ 7,000 ರೂಪಾಯಿಗೆ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಲಾಗಿದೆ.
ಇದನ್ನೂ ಓದಿ: 2 ದಶಕಗಳಲ್ಲೇ ಇದು ಗರಿಷ್ಠ; ಜುಲೈನಲ್ಲಿ ಪಾತಾಳಕ್ಕೆ ಕುಸಿದ ವಾಹನ ಮಾರಾಟ!
undefined
BLDC ಮೋಟಾರ್ ಸಹಾಯದಿಂದ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರವರ್ತಿಸಲಾಗಿದೆ. ಪೆಟ್ರೋಲ್ ಎಂಜಿನ್ ತೆಗೆದು BLDC ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಬಳಿಕ ಬ್ಯಾಟರಿ ಅಳವಡಿಸಿ, ಎಲೆಕ್ಟ್ರಿಕ್ ಕಂಟ್ರೋಲರ್ ಮೂಲಕ ಎಲ್ಲವನ್ನೂ ನಿಯಂತ್ರಿಸಲಾಗಿದೆ. ಸರಳ ವಿಧಾನದಲ್ಲಿ ಎಲೆಕ್ಟ್ರಿಕ್ ಬೈಕ್ ರೆಡಿ ಮಾಡಲಾಗಿದೆ.
ಇದನ್ನೂ ಓದಿ: ಎದರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ; ಇಲ್ಲಿದೆ ನೂತನ ದರ ಪಟ್ಟಿ!
ಸಾಮಾನ್ಯ ಪ್ಲಗ್ ಸಾಕೆಟ್ ಮೂಲಕ ಬ್ಯಾಟರಿ ಚಾರ್ಜ್ ಮಾಡಬಹುದು. ವಿಶೇಷ ಅಂದರೆ 3 ಗೇರ್ ನೀಡಲಾಗಿದೆ. ನಾರ್ಮಲ್, ಸ್ಪೋರ್ಟ್ ಹಾಗೂ ಟರ್ಬೋ ಗೇರ್ ಮೂಲಕ ಈ ಬೈಕ್ ವೇಗ ಪಡೆದುಕೊಳ್ಳಲಿದೆ. ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಲು ಒಟ್ಟು ಖರ್ಚು 7,000 ರೂಪಾಯಿ.