ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ 1 ಲಕ್ಷ ರೂಪಾಯಿ ಡಿಸ್ಕೌಂಟ್!

Published : Dec 11, 2018, 07:03 PM IST
ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ 1 ಲಕ್ಷ ರೂಪಾಯಿ ಡಿಸ್ಕೌಂಟ್!

ಸಾರಾಂಶ

ರಾಯಲ್ ಎನ್‌ಫೀಲ್ಡ್ ಬೈಕ್‌ನಿಂದ ಪೈಪೋಟಿ, ವರ್ಷಾಂತ್ಯದ ಸೇಲ್ ಕ್ಲೀಯರೆನ್ಸ್‌ಗಾಗಿ ಹಾರ್ಲೆ ಡೇವಿಡ್ಸನ್ ಭರ್ಜರಿ ಆಫರ್ ಘೋಷಿಸಿದೆ. ಹಾರ್ಲೆ ಡೇವಿಡ್ಸನ್‌ನ 2 ಬೈಕ್‌ಗಳಿಗೆ ಬಂಪರ್ ಆಫರ್ ನೀಡಲಾಗಿದೆ. ಆಫರ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.  

ನವದೆಹಲಿ(ಡಿ.11): ಹಾರ್ಲೆ ಡೇವಿಡ್ಸನ್ ಬೈಕ್ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಹಾರ್ಲೆ ಸ್ಟ್ರೀಟ್ 750 ಹಾಗೂ ಹಾರ್ಲೆ ಸ್ಟ್ರೀಟ್ ರಾಡ್ ಬೈಕ್ ಮೇಲೆ ಗರಿಷ್ಠ 1 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಈ ಮೂಲಕ 2018ರ ವರ್ಷಾಂತ್ಯದಲ್ಲಿ ಹಾರ್ಲೆ ಬೈಕ್ ಖರೀದಿಸುವ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ.

ಇದನ್ನೂ ಓದಿ: ಟಯರ್ ಆಯ್ಕೆಯಲ್ಲಿ ನಿರ್ಲಕ್ಷ್ಯ ಬೇಡ- ಇಲ್ಲಿದೆ ಭಾರತದ ಟಾಪ್ 5 ಟಯರ್

ಹಾರ್ಲೆ ಡಿಸ್ಕೌಂಟ್ ಆಫರ್ ಡಿಸೆಂಬರ್ 31, 2018ಕ್ಕೆ ಅಂತ್ಯವಾಗಲಿದೆ.  ವರ್ಷಾಂತ್ಯದಲ್ಲಿ ಸ್ಟಾಕ್ ಕ್ಲೀಯರ್ ಮಾಡಲು ಹಾರ್ಲೆ ವಿಶೇಷ ಆಫರ್ ನೀಡಿದೆ.   ಹಾರ್ಲೆ ಸ್ಟ್ರೀಟ್ 750 ಬೆಲೆ 4.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇನ್ನು ಹಾರ್ಲೆ ಸ್ಟ್ರೀಟ್ ರಾಡ್ ಬೈಕ್ ಬೆಲೆ  5.50 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). 

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ದಿ ಗ್ರೇಟ್ ಖಲಿ ಜಾಲಿ ರೈಡ್!

ಈಗಾಗಲೇ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ ಹಾಗೂ ಕಾಂಟಿನೆಂಟಲ್ ಜಿಟಿ 650 ಬಿಡುಗಡೆ ಮಾಡಿದೆ. ಹೀಗಾಗಿ ಈ ಬೈಕ್‌ಗಳಿಗೆ ಪೈಪೋಟಿ ನೀಡುವುದರ ಜೊತೆಗೆ ವರ್ಷಾಂತ್ಯದ ಆಫರ್ ಘೋಷಿಸಿದೆ. ಹಾರ್ಲೆ ಸ್ಟ್ರೀಟ್ 750 ಹಾಗೂ ಹಾರ್ಲೆ ಸ್ಟ್ರೀಟ್ ರಾಡ್  ಬೈಕ್ 749 ಸಿಸಿ, ವಿ ಟ್ವಿನ್ ಎಂಜಿನ್ ಹೊಂದಿದೆ. 

ಇದನ್ನೂ ಓದಿ: 20 ವರ್ಷ ರಾಜನಂತೆ ಮೆರೆದ ಸುಜುಕಿ ಹಯಬುಸಾ ಬೈಕ್ ವಿದಾಯ!

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ