ಮಹೀಂದ್ರ ಥಾರ್‌ಗೆ ಪೈಪೋಟಿ- ಫೋರ್ಸ್ ಗುರ್ಖಾ 2.2 ಬಿಡುಗಡೆ!

Published : Dec 11, 2018, 03:58 PM IST
ಮಹೀಂದ್ರ ಥಾರ್‌ಗೆ ಪೈಪೋಟಿ-  ಫೋರ್ಸ್ ಗುರ್ಖಾ 2.2 ಬಿಡುಗಡೆ!

ಸಾರಾಂಶ

ಭಾರತದಲ್ಲಿ ಹೆಚ್ಚು ಸದ್ದು ಮಾಡಿರುವ ಮಹೀಂದ್ರ ಥಾರ್‌ಗೆ ಇದೀಗ ಪೈಪೋಟಿ ನೀಡಲು ಫೋರ್ಸ್ ಕಂಪೆನಿ ಗುರ್ಖಾ 2.2 ಜೀಪ್ ಬಿಡುಗಡೆ ಮಾಡಿದೆ. ನೂತನ ವಾಹನದ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ.

ಬೆಂಗಳೂರು(ಡಿ.11): ಜೀಪ್ ವಿಭಾಗದಲ್ಲಿ ಮಹೀಂದ್ರ ಥಾರ್ ಭಾರತದಲ್ಲಿ ಹೆಚ್ಚು ಸದ್ದು ಮಾಡಿದೆ. ಇದೀಗ ಥಾರ್‌ಗೆ ಪೈಪೋಟಿ ನೀಡಲು ಫೋರ್ಸ್ ನೂತನ ಜೀಪ್ ಬಿಡುಗಡೆ ಮಾಡಿದೆ. ಗುರ್ಖಾ 2.2 SUV ಬಿಡುಗಡೆ ಮಾಡಿದೆ. ನೂತನ ಗುರ್ಖಾ ಮಹೀಂದ್ರ ಥಾರ್ ಜೀಪ್‌ಗಿಂತ ಹೆಚ್ಚು ಬಲಿಷ್ಠವಾಗಿದೆ.

ಫೋರ್ಸ್ ಗುರ್ಖಾ 2.2 ಜೀಪ್ ವಾಹನ 2.2 ಲೀಟರ್ ಎಂಜಿನ್ ಹೊಂದಿದೆ. 140 bhp ಪವರ್ ಹಾಗೂ 321 nm ಪೀಕ್ ಟಾರ್ಕ್ ಹೊಂದಿದೆ. 5 ಸ್ವೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿರುವ ಫೋರ್ಸ್ ಗುರ್ಖಾ ಬೆಲೆ 12.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಫೋರ್ಸ್ ಗುರ್ಖಾ ಬೆಲೆ ಮಹೀಂದ್ರ ಥಾರ್‌ಗಿಂತ ಹೆಚ್ಚು. ಥಾರ್ CRDe ಬೆಲೆ 9.37 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಬೆಲೆ ಹೊರತು ಪಡಿಸಿದರೆ ಹೆಚ್ಚು ಬಲಿಷ್ಠ ಹಾಗೂ ಶಕ್ತಿಯುತ ಎಂಜಿನ್‌ಗಾಗಿ ಫೋರ್ಸ್ ಗುರ್ಖಾ ಉತ್ತಮ ಆಯ್ಕೆ.

PREV
click me!

Recommended Stories

ಮೊದಲ ಕಾರಿನ ಮೇಲೆ ವಿಶೇಷ ಮೋಹ, ರೋಲ್ಸ್ ರಾಯ್ಸ್ ಕಾರಿದ್ರೂ ಹಳೆ ಮಾರುತಿ 800 ಮರುಖರೀದಿಸಿದ ಉದ್ಯಮಿ
ಟ್ರಾಫಿಕ್ ದಂಡ ಇನ್ನೂ ಕಟ್ವಿಲ್ವಾ? ಹೀಗೆ ಭಾರತದಲ್ಲಿ ಬಾಕಿ ಉಳಿದಿರುವ ಮೊತ್ತ 39000 ಕೋಟಿ ರೂ