ಟಯರ್ ಆಯ್ಕೆಯಲ್ಲಿ ನಿರ್ಲಕ್ಷ್ಯ ಬೇಡ- ಇಲ್ಲಿದೆ ಭಾರತದ ಟಾಪ್ 5 ಟಯರ್

By Web Desk  |  First Published Dec 11, 2018, 5:10 PM IST

ನಿಮ್ಮ ವಾಹನಕ್ಕೆ ಯಾವ ಟಯರ್ ಬಳಸುತ್ತಿದ್ದೀರಾ? ಟಯರ್ ವಿಚಾರದಲ್ಲಿ ಹೆಚ್ಚು ಗಮನಹರಿಸುವುದು ಸೂಕ್ತ. ಭಾರತದ ಮಾರುಕಟ್ಟೆಯಲ್ಲಿರುವ ಟಾಪ್ 5 ಟಯರ್ ಪಟ್ಟಿ ನೀಡಲಾಗಿದೆ.


ಬೆಂಗಳೂರು(ಡಿ.11): ಕಾರು ಅಥವಾ ಬೈಕ್ ನಿಮ್ಮ ವಾಹನ ಯಾವುದೇ ಆಗಿರಲಿ, ವಾಹನದ ಟಯರ್ ಅಷ್ಟೇ ಮುಖ್ಯ. ಹೀಗಾಗಿ ಟಯರ್ ಬದಲಾಯಿಸುವ ವೇಳೆ ನಿರ್ಲಕ್ಷ್ಯ ಸಲ್ಲದು. ಕಡಿಮೆ ಬೆಲೆ, ಬಳಸಿದ ಟಯರ್‌ಗಳು ಯಾವುದೇ ಕ್ಷಣದಲ್ಲೂ ನಿಮ್ಮ ಪ್ರಯಾಣವನ್ನ ಮೊಟಕುಗೊಳಿಸಬಹುದು. ಇಷ್ಟೇ ಅಲ್ಲ ಕಾರಿನ ಮೇಲೂ ಪರಿಣಾಮ ಬೀರಬಹುದು.

ಇದನ್ನೂ ಓದಿ: ಸಿಗ್ನಲ್ ಜಂಪ್- ರದ್ದಾಗಲಿದೆ 900 ಮಂದಿಯ ಡ್ರೈವಿಂಗ್ ಲೈಸೆನ್ಸ್!

Latest Videos

ಟಯರ್ ಆಯ್ಕೆ ಮಾಡುವಾಗ ಎಚ್ಚರವಾಗಿರೋದು ಉತ್ತಮ. ಭಾರತದ ಮಾರುಕಟ್ಟೆಯಲ್ಲಿರು ಅತ್ಯತ್ತಮ ಟಯರ್‌ಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಹೀಗಾಗಿ ಮುಂದೆ ನಿಮ್ಮ ವಾಹನದ ಟಯರ್ ಬದಲಾಯಿಸುವಾಗ ಈ ಪಟ್ಟಿ ನೆರವಾಗಲಿದೆ.

ಇದನ್ನೂ ಓದಿ: 2019 ರಿಂದ ಆಟೋ ರಿಕ್ಷಾಗೆ ಹೊಸ ನೀತಿ- ಸಂಕಷ್ಟದಲ್ಲಿ ಮಾಲೀಕರು!

1 MRF
ಭಾರತದ ಅತೀ ದೊಡ್ಡ ಟಯರ್ ಕಂಪೆನಿ MRF(ಮದ್ರಾಸ್ ರಬ್ಬರ್ ಫ್ಯಾಕ್ಟರಿ) ಮುಖ್ಯ ಕಚೇರಿ ಚೆನ್ನೈನಲ್ಲಿದೆ. 1946ರಲ್ಲಿ ಆರಂಭವಾದ ಎಂಆರ್‌ಎಫ್ ಕಂಪೆನಿ ಎಲ್ಲಾ ವಾಹನಗಳ ಟಯರ್ ತಯಾರಿಕಾ ಕಂಪನಿಯಾಗಿ ಹೆಸರುಗಳಿಸಿದೆ. ಇದರ ಬೆಲೆ 950 ರೂಪಾಯಿಂದ 28,000 ರೂಪಾಯಿವರೆಗಿದೆ. ಭಾರತದ ರಸ್ತೆಗಳಿಗೆ ಅನುಗುಣವಾಗಿರುವ MRF ಟಯರ್ಸ್ ಗರಿಷ್ಠ ಮಾರಾಟ ದಾಖಲೆ ಹೊಂದಿದೆ. MRF ಟಯರ್ ಕೂಡ ಉತ್ತಮ ಆಯ್ಕೆಯಾಗಿದೆ.

2 ಬ್ರಿಡ್ಜ್‌ಸ್ಟೋನ್
ಜಪಾನ್ ಮೂಲದ ಬ್ರಿಡ್ಜ್‌ಸ್ಟೋನ್ ಟಯರ್‌ಗಳು ವಿಶ್ವದೆಲ್ಲಡೆ ಹೆಚ್ಚು ಬಳಕೆಯಾಗುತ್ತಿರುವ ಟಯರ್. 1931ರಲ್ಲಿ ಆರಂಭವಾದ ಈ ಬ್ರಿಡ್ಜ್‌ಸ್ಟೋನ್ ಕಂಪೆನಿ, 24 ದೇಶಗಳಲ್ಲಿ 141 ನಿರ್ಮಾಣ ಘಟಕಗಳನ್ನ ಹೊಂದಿದೆ. ಈ ಟಯರಿನ ಬೆಲೆ 2,100 ರೂಪಾಯಿಂದ 28,335 ರೂಪಾಯಿ ವರೆಗಿದೆ. ಭಾರತದಲ್ಲಿ ಬ್ರಿಡ್ಜ್‌ಸ್ಟೋನ್ ಟಯರ್ ಹೆಚ್ಚು ಬಳಕೆಯಾಗುತ್ತಿದೆ. 

3 ಅಪೋಲೋ
ವಿಶ್ವ ಟಯರ್ ಕಂಪೆನಿಗಳ ಪೈಕಿ 17ನೇ ಸ್ಥಾನ ಪಡೆದಿರುವ ಅಪೊಲೋ ಕೂಡ ಭಾರತದ ಕಂಪೆನಿ. ಅಪೋಲೋ ಮುಖ್ಯ ಕಚೇರಿ ಹರಿಯಾಣದಲ್ಲಿದೆ. 1976ರಲ್ಲಿ ಆರಂಭವಾದ ಆಪೋಲೋ ಟಯರ್ ಕಂಪೆನಿ ಭಾರತ ಮಾತ್ರವಲ್ಲ ಯುರೋಪ್ ಮಾರುಕಟ್ಟೆಯಲ್ಲೂ ಅಪೋಲೋ ಟಯರ್ ಹೆಚ್ಚು ಬಳಕೆಯಲ್ಲಿದೆ.  ಅಪೋಲೋ ಟಯರ್ ಕೂಡ ಉತ್ತಮ ಆಯ್ಕೆಯಾಗಿದೆ. 

4 CEAT
ಮುಂಬೈ ಮೂಲದ ಸಿಎಟ್ ಟಯರ್ ಕಂಪೆನಿ 1958ರಲ್ಲಿ ಆರಂಭಗೊಂಡಿತು. ಭಾರತದಲ್ಲಿ 6 ಟಯರ್ ನಿರ್ಮಾಣ ಘಟಕ ಹೊಂದಿರುವ ಸಿಎಟ್ ಟಯರ್ ಕಂಪೆನಿ ಪ್ರತಿ ದಿನ 1,00,000 ಟಯರ್ ಉತ್ಪಾದಿಸುತ್ತಿದೆ. 

5 ಜೆಕೆ ಟಯರ್
ದೆಹಲಿ ಮೂಲದ ಜೆಕೆ ಟಯರ್ಸ್ 1974ರಲ್ಲಿ ಆರಂಭಗೊಂಡಿತು. 4 ವೀಲ್ಹ್ಸ್ ಟಯರ್‌ಗಳು ಮಾತ್ರ ಲಭ್ಯವಿದೆ. 80 ದೇಶಗಳಲ್ಲಿ ಜೆಕೆ ಟಯರ್ ಮಾರುಕಟ್ಟೆ ಹೊಂದಿದೆ. ಭಾರತದಲ್ಲಿ ಮೈಸೂರು, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಜೆಕೆ ಟಯರ್ ನಿರ್ಮಾಣ ಘಟಕ ಹೊಂದಿಗೆ. ಜೆಕೆ ಕೂಡ ಉತ್ತಮ ಆಯ್ಕೆಯಾಗಿದೆ.

click me!