ಜನರ ಮನವಿಗೆ ಸ್ಪಂದಿಸಿದ ಗುಜರಾತ್ ಸರ್ಕಾರ/ ಟ್ರಾಫಿಕ್ ನಿಯಮದ ದಂಡಗಳನ್ನು ಅರ್ಧಕ್ಕಿಂತ ಕಡಿಮೆ ಮಾಡಿದ ವಿಜಯ್ ರೂಪಾನಿ/ ಕರ್ನಾಟಕದಲ್ಲಿ ಯಾವಾಗ?
ಗಾಂಧಿನಗರ[ಸೆ. 10] ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆ ಸಾರ್ವಜನಿಕರಿಂದ ಇಡೀ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಗುಜರಾತ್ ಸರ್ಕಾರ ದಂಡದ ಪ್ರಮಾಣ ತಗ್ಗಿಸುವ ತೀರ್ಮಾನ ತೆಗೆದುಕೊಂಡಿದೆ.
ಗುಜರಾತ್ ಸಿಎಂ ವಿಜಯ್ ರೂಪಾನಿ ಈ ಬಗ್ಗೆ ಮಾಹಿತಿ ನೀಡಿದ್ದು, ಹೊಸ ಕಾಯ್ದೆಯಲ್ಲಿ ವಿಧಿಸುತ್ತಿರುವ ದಂಡದ ಮೊತ್ತ ಗರಿಷ್ಠ ಪ್ರಮಾಣದಲ್ಲಿರುವುದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
undefined
6 ಟ್ರಾಫಿಕ್ ನಿಯಮ; ತಿಳಿದುಕೊಳ್ಳಿ ದಂಡ ಕಟ್ಟೋ ಮುನ್ನ!
ಹೊಸ ನಿಯಮ ಮತ್ತು ಗುಜರಾತ್ ದಂಡದ ವಿವರ
ಹೆಲ್ಮೆಟ್ ಹಾಕದಿದ್ದರೆ- 1000 ಗುಜರಾತ್- 500
ಸೀಟ್ ಬೆಲ್ಟ್ ಹಾಕದಿದ್ದರೆ- 1000 ಗುಜರಾತ್ 500
ಲೈಸನ್ಸ್ ಇಲ್ಲದಿದ್ದರೆ- 5000- ಗುಜರಾತ್ 2000
ಇನ್ನು ಆದರೆ ಲೈಸನ್ಸ್, ಆರ್ ಸಿ, ವಿಮೆ ಮೊದಲ ಬಾರಿಗೆ ಇಲ್ಲದಿದ್ದರೆ 500 ರೂ. ದಂಡ ವಿಧಿಸಿದರೆ, 2ನೇ ಬಾರಿಗೆ ಈ ಮೊತ್ತ ಕೇಂದ್ರ ಸರ್ಕಾರ ನೀತಿಗೆ ಅಡಿ ಅನ್ವಯವಾಗಲಿದೆ. ತ್ರಿಬಲ್ ರೈಡಿಂಗ್ ಮಾಡುವವರಿಗೆ ವಿಧಿಸಲಾಗುತ್ತಿದ್ದ 1 ಸಾವಿರ ರೂ. ದಂಡವನ್ನು 100 ರೂ.ಗಳಿಗೆ ಇಳಿಸಲಾಗಿದೆ.