6 ಟ್ರಾಫಿಕ್ ನಿಯಮ; ತಿಳಿದುಕೊಳ್ಳಿ ದಂಡ ಕಟ್ಟೋ ಮುನ್ನ!

Published : Sep 10, 2019, 01:37 PM ISTUpdated : Sep 10, 2019, 02:20 PM IST
6  ಟ್ರಾಫಿಕ್ ನಿಯಮ; ತಿಳಿದುಕೊಳ್ಳಿ ದಂಡ ಕಟ್ಟೋ ಮುನ್ನ!

ಸಾರಾಂಶ

ಹೊಸ ಟ್ರಾಫಿಕ್ ನಿಯಮ ಜಾರಿಯಿಂದ ಜನರು ನಿಯಮ ಉಲ್ಲಂಘಿಸಲು ಭಯ ಪಡುತ್ತಿದ್ದಾರೆ. ಸಿಗ್ನಲ್ ಜಂಪ್, ಒನ್ ವೇ ಸೇರಿದಂತೆ ಯಾವುದೇ ನಿಯಮ ಉಲ್ಲಂಘಿಸಿದರೂ ದುಬಾರಿ ದಂಡ ಕಟ್ಟಬೇಕು. ಹೀಗಾಗಿ ವಾಹನ ಸವಾರಿ ಮಾಡೋ ಮುನ್ನ ಪ್ರಮುಖ 6 ನಿಮಯ ತಿಳಿದುಕೊಳ್ಳಿ.

ಬೆಂಗಳೂರು(ಸೆ.10): ಭಾರತದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ನೂತನ ನಿಯಮ ಹಾಗೂ ದುಬಾರಿ ದಂಡ ನಿಯಮ ಉಲ್ಲಂಘಿಸುವವರನ್ನು ಜಾಗೃತಗೊಳಿಸುತ್ತಿದೆ. ಮೋಟಾರು ವಾಹನ ನಿಯಮದಲ್ಲೇನು ಬದಲಾವಣೆಯಾಗಿಲ್ಲ. ದಂಡ ಮೊತ್ತವನ್ನು ಗರಿಷ್ಠ10 ಪಟ್ಟು ಹೆಚ್ಚಿಸಲಾಗಿದೆ ಅಷ್ಟೆ. 1988ರ ಮೋಟಾರು ವಾಹನ ಕಾಯ್ದೆ  ಹಾಗೂ ಅದರ ತಿದ್ದುಪಡಿ ಬಳಿಕ ಪ್ರಮುಖ 6 ನಿಯಮಗಳನ್ನು ಎಲ್ಲರೂ ತಿಳಿದಿರಲೇ ಬೇಕು.

ಇದನ್ನೂ ಓದಿ: ಹವಾಯಿ ಚಪ್ಪಲ್, ಸ್ಲಿಪ್ಪರ್ ಹಾಕಿ ದ್ವಿಚಕ್ರ ವಾಹನ ಓಡಿಸಿದರೆ ಫೈನ್!

1) ಮೋಟಾರು ವಾಹನ ಕಾಯ್ದೆ 1988ರ(ತಿದ್ದುಪಡಿ) ಸೆಕ್ಷನ್ 185, 202ರ ಅಡಿಯಲ್ಲಿ ಕುಡಿದು ವಾಹನ ಚಲಾಯಿಸುವುದು ಗಂಭೀರ ಅಪರಾಧ. ತಪಾಸಣೆ ವೇಳೆ ದೇಹದ ರಕ್ತದಲ್ಲಿ 30MG ಮದ್ಯವಿರುವುದು ದೃಢಪಟ್ಟರೆ ಪೊಲೀಸರು ಯಾವುದೇ ವಾರೆಂಟ್ ಇಲ್ಲದೆ ಅರೆಸ್ಟ್ ಮಾಡಬಹುದು. ಈ ನಿಯಮ ಉಲ್ಲಂಘನೆಗೆ ಕನಿಷ್ಠ 6 ತಿಂಗಳು ಜೈಲು ಅಥವಾ 10,000ರೂಪಾಯಿ(ಮೊದಲ ಬಾರಿ) ದಂಡ.  ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆ, ಕನಿಷ್ಠ 2 ವರ್ಷ ಜೈಲು ಅಥವಾ 15,000 ರೂಪಾಯಿ ದಂಡ.

ಇದನ್ನೂ ಓದಿ: ನೂತನ ಟ್ರಾಫಿಕ್ ರೂಲ್ಸ್; ಪೊಲೀಸರ ತಪಾಸಣೆ ವಿಡಿಯೋ ರೆಕಾರ್ಡ್ ಮಾಡಬಹುದೆ?

2) ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129 ರ ಅಡಿಯಲ್ಲಿ ದ್ವಿಚಕ್ರವಾಹನ ಸವಾರ ಹೆಲ್ಮೆಟ್ ಧರಿಸುವುದು ಕಡ್ಡಾಯ. ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಸ್ಕೂಟರ್ ಅಥವಾ ಬೈಕ್‌ನಲ್ಲಿ ಗರಿಷ್ಠ ಇಬ್ಬರು ಪ್ರಯಾಣಿಸಬಹುದು. ಇನ್ನು ಪೊಲೀಸರು ವಾಹನ ನಿಲ್ಲಿಸಿ ಕೀ ತೆಗೆದುಕೊಂಡು ಹೋದರೆ ಅದು ನಿಯಮ ಉಲ್ಲಂಘನೆಯಾಗಿದೆ. ಇಂತಹ ಅಧಿಕಾರಿ ಅಥವಾ ಪೊಲೀಸರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು.

ಇದನ್ನೂ ಓದಿ: ಟ್ರಾಫಿಕ್ ಜಾಗೃತಿ ಮೂಡಿಸುತ್ತಿದ್ದ MLA ಕಾರಿಗೆ ದಂಡ!

3) ಓವರ್ ಸ್ವೀಡ್, ರೇಸಿಂಗ್  ಮಾಡುವುದು ನಿಯಮ ಉಲ್ಲಂಘನೆಯಾಗಿದೆ. ಮೊದಲ ಬಾರಿ 500 ರೂಪಾಯಿ ದಂಡ ಅಥವಾ 1 ತಿಂಗಲು ಜೈಲು ಶಿಕ್ಷೆ. ಎರಡನೇ ಬಾರಿ ನಿಯಮ ಉಲ್ಲಂಘನೆ ಮಾಡಿದರೆ 10,000 ರೂಪಾಯಿ ದಂಡ ಅಥವಾ 1 ತಿಂಗಲು ಜೈಲು.

4) ವಿಮೆ ರಹಿತ ವಾಹನಕ್ಕೆ ಮೊದಲ ಬಾರಿ 2,000  ರೂಪಾಯಿ ಅಥವಾ 3 ತಿಂಗಳು ಜೈಲು ಶಿಕ್ಷೆ.  ಎರಡನೇ ಬಾರಿ ನಿಯಮ ಉಲ್ಲಂಘನೆಗೆ 4,000 ರೂಪಾಯಿ ಅಥವಾ 3 ತಿಂಗಳು ಜೈಲು ಶಿಕ್ಷೆ

5) ಡ್ರೈವಿಂಗ್ ಲೈಸೆನ್ಸ್ ಅನರ್ಹಗೊಂಡಿದ್ದರೂ  ವಾಹನ ಚಾಲನೆ ಮಾಡಿದರೆ ದುಬಾರಿ ಮೊತ್ತ ದಂಡ ಪಾವತಿಸಬೇಕು. ಈ ನಿಯಮ ಉಲ್ಲಂಘನೆಗೆ 10,000 ರೂಪಾಯಿ ದಂಡ

6) ಸೆಪ್ಟೆಂಬರ್ 1 ರಿಂದ ರಾಜ್ಯ ಸಾರಿಗೆಯಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ 200 ರೂಪಾಯಿ ದಂಡದಿಂದ ಇದೀಗ 500 ರೂಪಾಯಿಗೆ ಹೆಚ್ಚಿಸಲಾಗಿದೆ.

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ