ಹೊಸ ನಿಯಮ ಜಾರಿಯಾದ ಬಳಿಕ ವಾಹನ ಹತ್ತೊ ಮೊದಲು ಸವಾರರು ಎರಡೆರಡು ಬಾರಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕಾರಣ ದುಬಾರಿ ದಂಡಕ್ಕಿಂತ ನಿಯಮ ಪಾಲನೆ ಲೇಸು ಅನ್ನೋ ಅಭಿಪ್ರಾಯ ಮೂಡುತ್ತಿದೆ. ಇದೀಗ ದಾಖಲೆ, ಸಿಗ್ನಲ್ ಜಂಪ್ ಮಾತ್ರವಲ್ಲ ನೀವು ಧರಿಸೋ ಚಪ್ಪಲ್‌ನಿಂದಲೂ ನಿಮಗೆ ದಂಡದ ಹೊರೆ ಬೀಳಲಿದೆ
ದೆಹಲಿ(ಸೆ.10): ಹೊಸ ಟ್ರಾಫಿಕ್ ದಂಡ ಜಾರಿ ಶಾಕ್ ನಿಂದ ಹಲವರು ಚೇತರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಹೊಸ ಹೊಸ ನಿಮಯಗಳು ಸವಾರರನ್ನು ಬೆಚ್ಚಿ ಬೀಳಿಸುತ್ತಿದೆ. ನೂತನ ನಿಯಮ ಜಾರಿಯಾದ ಬಳಿಕ ದ್ವಿಚಕ್ರ ವಾಹನ ಸವಾರರು ಬೇಕಾಬಿಟ್ಟಿ ಗಾಡಿ ಓಡಿಸುವಂತಿಲ್ಲ. ಯಾಕೆಂದರೆ ದ್ವಿಚಕ್ರ ವಾಹನ ಸವಾರರು ಚಪ್ಪಲ್, ಸ್ಲಿಪ್ಪರ್ ಹಾಕಿ ವಾಹನ ಓಡಿಸಿದರೆ ದಂಡ ಕಟ್ಟಬೇಕು.
ಇದನ್ನೂ ಓದಿ: ರಸ್ತೆ ರಿಪೇರಿ ಬಳಿಕ ಹೊಸ ರೂಲ್ಸ್ ಜಾರಿ; ನಿಟ್ಟುಸಿರು ಬಿಟ್ಟ ಸವಾರರು!
ನೂತನ ನಿಯಮದಡಿಯಲ್ಲಿ ಯಾವುದು ಉಲ್ಲಂಘನೆ, ಯಾವುದು ಅಲ್ಲ ಅನ್ನೋದು ಹಲವರಿಗೆ ತಿಳಿದಿಲ್ಲ. ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಈ ನಿಯಮ ಜಾರಿಯಲ್ಲಿದೆ. ಹವಾಯಿ ಚಪ್ಪಲ್, ಸ್ಲಿಪ್ಪರ್ ಹಾಕಿ ಬೈಕ್ ಅಥವಾ ಸ್ಕೂಟರ್ ಓಡಿಸುವವರಿಗೆ ವಾಹನ ನಿಯಂತ್ರಣ ಮಾಡುವಾಗ, ಪಾರ್ಕ್ ಮಾಡುವಾಗ, ಪಾರ್ಕಿಂಗ್‌ನಿಂದ ವಾಹನ ತೆಗೆಯುವಾಗ, ಗೇರ್ ಬದಲಾಯಿಸುವಾಗ ಸಮಸ್ಯೆ ಆಗಲಿದೆ. ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಶೂ ಬಳಸಬೇಕು ಅನ್ನೋದು ನಿಯಮ. ಇದು 1988ರ ಮೋಟಾರು ವಾಹನ ಕಾಯ್ದೆಯಲ್ಲೇ ಉಲ್ಲೇಖಿಸಲಾಗಿದೆ. ಇದೀಗ ಈ ನಿಯಮ ಉಲ್ಲಂಘಿಸಿದರೆ 1,000 ರೂಪಾಯಿ ದಂಡ ಬೀಳಲಿದೆ.
ಇದನ್ನೂ ಓದಿ: ವಾಹನ ಟೈಯರ್ ಸೆವದಿದ್ದರೂ ಬೀಳುತ್ತೆ ದಂಡ!
ಹೊಸ ನಿಯಮದ ಪ್ರಕಾರ ಚಪ್ಪಲ್ ಹಾಕಿ, ಸ್ಲಿಪ್ಪರ್ ಹಾಕಿ ದ್ವಿಚಕ್ರ ವಾಹನ ಓಡಿಸಿದರೆ ಬೀಳಲಿದೆ ಭಾರಿ ದಂಡ. ಹೀಗಾಗಿ ಎಚ್ಚರ ವಹಿಸೋದು ಅಗತ್ಯ. ಹೊಸ ನಿಯಮ ಜಾರಿಯಾದ ಬಳಿಕ ಎಲ್ಲರ ಕಿವಿ ನೆಟ್ಟಗಾಗಿದೆ. ವಾಹನ ಹತ್ತೋ ಮುನ್ನ ಎರಡೆರಡು ಬಾರಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದೀಗ ದಾಖಲೆ ಜೊತೆ ನೀವು ಧರಿಸೋ ಚಪ್ಪಲ್ ಕೂಡ ಗಮನಿಸಬೇಕು. ಇಲ್ಲದಿದ್ದರೆ 1000 ರೂಪಾಯಿ ದಂಡ ಕಟ್ಟಬೇಕಾಗುತ್ತೆ.