ಮದುವೆಯನ್ನು ಸ್ಮರಣೀಯವಾಗಿಸಲು ಅನೇಕ ಕಸರತ್ತುಗಳನ್ನ ಮಾಡುತ್ತಾರೆ. ಕೋಲ್ಕತ್ತಾದ ವರನೊಬ್ಬ ರೋಡ್ ರೋಲರ್ ಮೂಲಕ ಮದುವೆ ಸಮಾರಂಭಕ್ಕೆ ಆಗಮಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
ಕೋಲ್ಕತಾ(ಫೆ.06): ವಿವಾಹ ಮಹೋತ್ಸವವನ್ನು ಸ್ಮರಣೀಯವಾಗಿಸಲು ಹಲವರು ವಿಶೇಷ ರೀತಿಯಲ್ಲಿ ಮದುವೆಯಾಗುತ್ತಾರೆ. ಆಮಂತ್ರಣ ಪತ್ರಿಕೆಯಿಂದ, ಮದುವೆ ಸಮಾರಂಭದ ವರೆಗೂ ಎಲ್ಲವೂ ವಿಶೇಷವಾಗಿರುತ್ತೆ. ಇದೀಗ ಕೋಲ್ಕತ್ತಾದಲ್ಲೊಬ್ಬ ಮದುವೆ ಮಂಟಪಕ್ಕೆ ರೋಡ್ ರೋಲರ್ ಮೂಲಕ ಆಗಮಿಸಿ ಇತರರಿಗಿಂತ ಭಿನ್ನವಾಗಿ ಮದುವೆಯಾಗಿದ್ದಾರೆ.
ಇದನ್ನೂ ಓದಿ:ನಗರದಲ್ಲಿ ಪೆಟ್ರೋಲ್, ಡೀಸೆಲ್ ಕಾರು ರಿಜಿಸ್ಟ್ರೇಶನ್ ಶೀಘ್ರದಲ್ಲಿ ಬಂದ್ !
undefined
ವಿಶೇಷವಾಗಿ ಅಲಂಕರಿಸಿದ ರೋಡ್ ರೋಲರ್ ಮೂಲಕ ಮದುವೆ ವರ ಪ್ರಯಾಣಿಸಿದ್ದಾರೆ. ತನ್ನ ಮದುವೆಗೆ ಹಳೆ ವಿಂಟೇಜ್ ಕಾರಿನಲ್ಲಿ ಪ್ರಯಾಣಿಸಬೇಕು ಅನ್ನೋ ಕನಸು ಕಂಡಿದ್ದ. ಸದ್ಯ ಮದುವೆಗಳಲ್ಲಿ ವಿಂಟೇಜ್ ಕಾರುಗಳನ್ನ ಬಹುತೇಕರು ಬಳಸುತ್ತಾರೆ. ಹೀಗಾಗಿ ರೋಡ್ ರೋಲರ್ ಮೂಲಕ ವಿಶಿಷ್ಠವಾಗಿ ತನ್ನ ಕನಸನ್ನ ಸಾಕಾರಗೊಳಿಸಿದ್ದಾನೆ.
ಇದನ್ನೂ ಓದಿ:5 ಸಾವಿರಕ್ಕೆ ಬುಕ್ ಮಾಡಿ ನೂತನ ಮಾರುತಿ ಸಿಯಾಝ್ ಡೀಸೆಲ್ ಕಾರು!
ಮದುವೆ ಆರತಕ್ಷತೆಯಲ್ಲೂ ವಿಶೇಷತೆ ಮೆರೆದಿದ್ದಾನೆ. ರಿಸೆಪ್ಶನ್‌ನಲ್ಲಿ ಮ್ಯೂಸಿಕ್ ಬಳಸೋ ಬದಲು ಬೀದಿ ಬದಿಯ ಹಾಡುಗಾರ, ಕೊಳಲು ವಾದಕರನ್ನ ಕರೆಸಿದ್ದಾರೆ. ಇಷ್ಟೇ ಅಲ್ಲ, ಇನ್ನು ಇತರರ ಮದುವೆ ಸಮಾರಂಭಕ್ಕೆ ನೂತನ ಜೋಡಿ ಜೆಸಿಬಿ(ಬುಲ್ಡೋಜರ್)ನಲ್ಲಿ ತೆರಳೋ ಯೋಜನೆ ಹಾಕಿಕೊಂಡಿದೆ.