ಫ್ಯಾನ್ಸಿ ನಂಬರ್‌ಗಾಗಿ 31 ಲಕ್ಷ ರೂಪಾಯಿ ನೀಡಿದ ಉದ್ಯಮಿ!

Published : Feb 06, 2019, 07:24 PM IST
ಫ್ಯಾನ್ಸಿ ನಂಬರ್‌ಗಾಗಿ 31 ಲಕ್ಷ ರೂಪಾಯಿ ನೀಡಿದ ಉದ್ಯಮಿ!

ಸಾರಾಂಶ

ಫ್ಯಾನ್ಸಿ ನಂಬರ್ ಖರೀದಿಗೆ ಜನ ಮುಗಿ ಬೀಳುವುದು ಸಹಜ. 10,000, 50,000 ರೂಪಾಯಿ ನೀಡಿ ತಮಗಿಷ್ಟವಾದ ನಂಬರ್ ಖರೀದಿಸುತ್ತಾರೆ. ಆದರೆ ಉದ್ಯಮಿಯೊಬ್ಬರು ಬರೋಬ್ಬರಿ 31 ಲಕ್ಷ ರೂಪಾಯಿ ನೀಡಿ ನಂಬರ್ ಖರೀದಿಸಿದ್ದಾರೆ. 

ತಿರುವನಂತಪುರಂ(ಫೆ.06): ಕಾರು ಬಹುತೇಕ ಮಧ್ಯಮ ವರ್ಗದ ಜನರ ಕನಸು. ಇದನ್ನ ನನಸು ಮಾಡಲು ಹರಸಾಹಸ ಪಡಬೇಕು.  5 ರಿಂದ 10 ಲಕ್ಷ ರೂಪಾಯಿ ಒಳಗಿನ ಕಾರು ಕೊಳ್ಳಲು ಸಾಕಷ್ಟು ತ್ಯಾಗಗಳನ್ನೇ ಮಾಡಬೇಕು. ಆದರೆ ಉದ್ಯಮಿಗಳು, ಶ್ರೀಮಂತರು ಹಾಗಲ್ಲ, ತಮಿಗಿಷ್ಟವಾದ ಕಾರುಗಳನ್ನ ಸಲೀಸಾಗಿ ಖರೀದಿಸುತ್ತಾರೆ. ಇದೀಗ ಉದ್ಯಮಿಯೊಬ್ಬರು ತನ್ನ ನೂತನ ಪೊರ್ಶೆ ಕಾರಿನ ನಂಬರ್‌ಗಾಗಿ ಬರೋಬ್ಬರಿ 31 ಲಕ್ಷ ರೂಪಾಯಿ ನೀಡಿದ್ದಾರೆ.

ಇದನ್ನೂ ಓದಿ: 5 ಸಾವಿರಕ್ಕೆ ಬುಕ್ ಮಾಡಿ ನೂತನ ಮಾರುತಿ ಸಿಯಾಝ್ ಡೀಸೆಲ್ ಕಾರು!

ತಿರುವನಂತಪುರಂ ಮೂಲದ ಉದ್ಯಮಿ ಕೆ.ಎಸ್.ಬಾಲಗೋಪಾಲ್ ನೂತನ ಪೊರ್ಶೆ ಕಾರು ಖರೀದಿಸಿದ್ದಾರೆ. 86 ಲಕ್ಷ ರೂಪಾಯಿ ಬೆಲೆಯ ಪೊರ್ಶೆ 718 ಬಾಕ್ಸ್ಟರ್ ಕಾರು ಖರೀದಿಸಿದ್ದಾರೆ. ಈ ಕಾರಿನ ನಂಬರ್‌ಗಾಗಿ ಬಾಲಗೋಪಾಲ್ ಬರೋಬ್ಬರಿ 31 ಲಕ್ಷ ರೂಪಾಯಿ ನೀಡಿದ್ದಾರೆ.

ಇದನ್ನೂ ಓದಿ: ಸರ್ಕಾರಕ್ಕೆ ಎಲೆಕ್ಟ್ರಿಕ್ ಕಾರು ಹಸ್ತಾಂತರಿಸಿದ ಕಿಯಾ ಮೋಟಾರ್ಸ್!

KL-01-CK-01 ಕಾರಿನ ನಂಬರ್‌ ಹರಾಜಿಗೆ ಇಡಲಾಗಿತ್ತು. ಈ ಫ್ಯಾನ್ಸಿ ನಂಬರ್ ಪಡೆಯಲು ಹಲವು ಉದ್ಯಮಿಗಳು, ರಾಜಕಾರಣಿಗಳು ಪೈಪೋಟಿ ನಡೆಸಿದ್ದರು. 25 ಲಕ್ಷ ರೂಪಾಯಿಂದ ಹರಾಜು ಆರಂಭಗೊಂಡಿತ್ತು. ಹರಾಜು ಆರಂಭಗೊಂಡ ಮರುಕ್ಷಣದಲ್ಲೇ ಬಾಲಗೋಪಾಲ್ 30 ಲಕ್ಷ ರೂಪಾಯಿಗೇರಿಸಿದರು. ಇತ್ತ ನಂಬರ್ ಖರೀದಿಸಲು ಆಗಮಿಸಿದ ಇತರ ಉದ್ಯಮಿಗಳು ಮರು ಮಾತನಾಡದೇ ಬಿಟ್ಟುಕೊಡಬೇಕಾಯಿತು.

ನಂಬರ್‌ಗಾಗಿ 30 ಲಕ್ಷ ಹಾಗೂ ರಿಸರ್ವ್‌ಗಾಗಿ 1 ಲಕ್ಷ, ಒಟ್ಟು 31 ಲಕ್ಷ ರೂಪಾಯಿ ನೀಡಿ KL-01-CK-01 ನಂಬರ್ ಖರೀದಿಸಿದ್ದಾರೆ. ಗರಿಷ್ಠ ಮೊತ್ತ ನೀಡಿ ಕಾರಿನ ರಿಜಿಸ್ಟ್ರೇಶನ್ ನಂಬರ್ ಖರೀದಿಸಿದ ಹೆಗ್ಗಳಿಕೆಗೆ ಇದೀಗ ಬಾಲಗೋಪಾಲ್ ಪಾತ್ರರಾಗಿದ್ದಾರೆ.
 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ