ನಗರಗಳಲ್ಲಿನ ಮಾಲಿನ್ಯ ನಿಯಂತ್ರಿಸಲು ಶೀಘ್ರದಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಕಾರು ರಿಜಿಸ್ಟ್ರೇಶನ್ ಬಂದ್ ಆಗಲಿದೆ. ಕೇವಲ ಎಲೆಕ್ಟ್ರಿಕ್ ಕಾರುಗಳು ಮಾತ್ರ ಲಭ್ಯವಾಗಲಿದೆ. ಈ ನೂತನ ಯೋಜನೆ ಜಾರಿಯಾಗುತ್ತಿರುವುದು ಎಲ್ಲಿ? ಇಲ್ಲಿದೆ ಹೆಚ್ಚಿನ ವಿವರ.
ಅಮರಾವತಿ(ಫೆ.06): ಮಾಲಿನ್ಯ ನಿಯಂತ್ರಣ ಹಾಗೂ ಇಂಧನ ಬಳಕೆ ಕಡಿಮೆ ಮಾಡಲು ಸರ್ಕಾರ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಇದೀಗ ಆಂಧ್ರಪ್ರದೇಶ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಆಂಧ್ರಪ್ರದೇಶ ರಾಜಧಾನಿ ಅಮರಾವತಿಯಲ್ಲಿ ಪೆಟ್ರೋಲ್, ಡೀಸೆಲ್ ಕಾರುಗಳ ರಿಜಿಸ್ಟ್ರೇಶನ್ ಬಂದ್ ಆಗಲಿದೆ.
ಇದನ್ನೂ ಓದಿ: ಫ್ಯಾನ್ಸಿ ನಂಬರ್‌ಗಾಗಿ 31 ಲಕ್ಷ ರೂಪಾಯಿ ನೀಡಿದ ಉದ್ಯಮಿ!
2024ರ ವೇಳೆಗೆ ಅಮರಾವತಿ ನಗರದಲ್ಲಿ 10 ಲಕ್ಷ ಎಲೆಕ್ಟ್ರಿಕ್ ವಾಹನಗಳು ಓಡಾಡಲಿದೆ. ಈ ಮೂಲಕ ಸಂಪೂರ್ಣ ಎಲೆಕ್ಟ್ರಿಕ್ ವಾಹನ ಉಪಯೋಗಿಸುವ ದೇಶದ ಮೊದಲ ನಗರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ.
ಇದನ್ನೂ ಓದಿ: 5 ಸಾವಿರಕ್ಕೆ ಬುಕ್ ಮಾಡಿ ನೂತನ ಮಾರುತಿ ಸಿಯಾಝ್ ಡೀಸೆಲ್ ಕಾರು!
ಹೊಸ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳ ಮಾರಾಟಕ್ಕೆ ಬ್ರೇಕ್ ಹಾಕಲು ಶೀಘ್ರದಲ್ಲೇ ರಿಜಿಸ್ಟ್ರೇಶನ್ ನಿಲ್ಲಿಸಲಾಗುವುದು. ಹೀಗಾಗಿ ಹೊಸ ವಾಹನಗಳ ಮಾರಾಟ ಕಷ್ಟವಾಗಲಿದೆ. ನೂತನ ಯೋಜನೆಯಿಂದ ಕೇವಲ ಎಲೆಕ್ಟ್ರಿಕ್ ವಾಹನಗಳು ಮಾತ್ರ ಅಮರಾವತಿಯಲ್ಲಿ ಲಭ್ಯವಾಗಲಿದೆ.
ಇದನ್ನೂ ಓದಿ: ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ..! ನಂಬರ್ ಪ್ಲೇಟ್ ಮೇಲೆ ಏನೂ ಬರೆಯಂಗಿಲ್ಲ!
ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ಘಟಕಕ್ಕಾಗಿ ಅಮರಾವತಿಯಲ್ಲಿ ಬರೋಬ್ಬರಿ 30,000 ಕೋಟಿ ರೂಪಾಯಿ ಬಂಡವಾಳ ಹೂಡುತ್ತಿದೆ. ಉತ್ಪಾದನಾ ಘಟಕದಿಂದಾದಿ 60,000 ಉದ್ಯೋಗ ಸೃಷ್ಟಿಯಾಗಲಿದೆ. ಈ ಯೋಜನೆಯಿಂದ ಅಮರಾವತಿ ಮಾದರಿ ನಗರವಾಗಲಿದೆ ಎಂದು ಆಂಧ್ರ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.