ಗೋವಾ ಪೊಲೀಸ್ ಇಲಾಖೆಗೆ ಹೊಸ ಅತಿಥಿ- ಪ್ರವಾಸಿ ತಾಣದಲ್ಲಿ ಎಚ್ಚರ!

Published : Mar 01, 2019, 03:11 PM IST
ಗೋವಾ ಪೊಲೀಸ್ ಇಲಾಖೆಗೆ ಹೊಸ ಅತಿಥಿ- ಪ್ರವಾಸಿ ತಾಣದಲ್ಲಿ ಎಚ್ಚರ!

ಸಾರಾಂಶ

ಗೋವಾ ಬೀಚ್‌ಗಳಲ್ಲಿ ಅಸಭ್ಯವಾಗಿ ವರ್ತಿಸುವುದು, ಕಳ್ಳತನ ಸೇರಿದಂತೆ ಯಾವುದೇ  ಕಾನೂನು ಬಾಹಿರ ಚಟುವಟಿಕೆಗೆ ಯತ್ನಿಸಿದರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾರಣ ಗೋವಾ ಪೊಲೀಸ್ ಇಲಾಖೆಗೆ ಹೊಸ ಅತಿಥಿ ಆಗಮಿಸಿದ್ದಾರೆ. ಈ ಅತಿಥಿ ಗೋವಾ ಬೀಚ್‌ಗಳಲ್ಲಿ ಹದ್ದಿನ ಕಣ್ಣಿಡಲಿದೆ.  

ಗೋವಾ(ಮಾ.01): ಸುಂದರ ಸಮುದ್ರ ತೀರಗಳಿಂದ ಗೋವಾ ವಿಶ್ವದಲ್ಲೇ ಪ್ರಸಿದ್ಧಿಯಾಗಿದೆ. ದೇಶ-ವಿದೇಶಗಳ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಇಲ್ಲಿ ಕಳ್ಳತನ ಸೇರಿದಂತೆ ಇತರ ಅಪರಾಧ ಪ್ರಕರಣಗಳನ್ನ ಸಂಪೂರ್ಣ ನಿಯಂತ್ರಿಸಲು ಇದೀಗ ಗೋವಾ ಪೊಲೀಸರು ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ದುಬೈ ಅಲ್ಲ ಇದು ಭಾರತ - UP ಪೊಲೀಸರಿಗೆ ಪವರ್‌ಲ್ಯಾಂಡ್ 4X4 ATV ಬೈಕ್!

ಬೀಚ್ ತೀರದಲ್ಲಿ ಗಸ್ತು ತಿರುಗಲು  ಸಾಮಾನ್ಯ ವಾಹನದಲ್ಲಿ ಅಸಾಧ್ಯ. ಹೀಗಾಗಿ ಗೋವಾ ಪೊಲೀಸರು ಪವರ್‌ಲ್ಯಾಂಡ್  4X4 ATV ಬೈಕ್ ಖರೀದಿಸಿದ್ದಾರೆ. ಈ ಮೂಲಕ ಬೀಚ್ ತೀರದಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ಎಚ್ಚರ ವಹಿಸಲು ಗೋವಾ ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ಪೊಲೀಸ್ ಇಲಾಖೆಗೆ ಮತ್ತಷ್ಟು ಬಲ - ನೂತನ ಮಹೀಂದ್ರ ಸ್ಕಾರ್ಪಿಯೋ ಸೇರ್ಪಡೆ!

ಪವರ್‌ಲ್ಯಾಂಡ್  4X4 ATV ಬೈಕ್ ಬೆಲೆ 4.5 ಲಕ್ಷ ರೂಪಾಯಿ. 700 ಸಿಸಿ ಎಂಜಿನ್ ಹೊಂದಿರುವ ಈ ಬೈಕ್ 45 bhp ಪವರ್ ಹೊಂದಿದೆ. ಇತ್ತೀಚೆಗಷ್ಟೇ ಕುಂಭಮೇಳದಲ್ಲಿ ಉತ್ತರ ಪ್ರದೇಶದ ಪೊಲೀಸರು ಇದೇ ಪವರ್‌ಲ್ಯಾಂಡ್  4X4 ATV ಬೈಕ್ ಬಳಸಿದ್ದರು. ಈ ವಾಹನವನ್ನು ರಸ್ತೆಯಲ್ಲಿ ಬಳಸುವಂತಿಲ್ಲ. ಒಂದು ವೇಳೆ ರಸ್ತೆಯಲ್ಲಿ ಈ ವಾಹನ ಉಪಯೋಗಿಸಿದರೆ ನಿಯಮ ಉಲ್ಲಂಘನೆಯಾಗಲಿದೆ.

PREV
click me!

Recommended Stories

ಟೊಯೋಟಾಗೆ ನಡುಕ, ಹೈಲಕ್ಸ್‌ಗಿಂತ ಭಾರಿ ಕಡಿಮೆ ಬೆಲೆಯಲ್ಲಿ ಮಹೀಂದ್ರ ಸ್ಕಾರ್ಪಿಯೋ ಪಿಕ್‌ಅಪ್ ಲಾಂಚ್
ಪ್ರತಿ 2000 ಕಿಲೋ ಮೀಟರ್‍‌ಗೆ ಯಾಕೆ ಬೈಕ್ ಸರ್ವೀಸ್ ಮಾಡಿಸಬೇಕು? ಲೇಟ್ ಆದ್ರೆ ಏನಾಗುತ್ತೆ? ತಿಳಿದುಕೊಳ್ಳಿ..!