ಎಲೆಕ್ಟ್ರಿಕ್ ಕಾರು ಖರೀದಿ ಗ್ರಾಹಕರಿಗೆ ಬಂಪರ್ ಕೊಡುಗೆ- 2.5 ಲಕ್ಷ ರೂ ಸಬ್ಸಡಿ!

By Web Desk  |  First Published Mar 1, 2019, 11:30 AM IST

ಕೇಂದ್ರ ಸರ್ಕಾರದ FAME II ಯೋಜನೆ ಇದೇ ಎಪ್ರಿಲ್ 1, 2019ರಿಂದ ಜಾರಿಯಾಗಲಿದೆ. ಈ ಯೋಜನೆ ಮೂಲಕ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ  ಬರೋಬ್ಬರಿ 2.5 ಲಕ್ಷ ರೂಪಾಯಿ ಸಬ್ಸಡಿ ನೀಡಲಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
 


ನವದೆಹಲಿ(ಮಾ.01): ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ಘೋಷಿಸಿದೆ. FAME(Faster Adoption and Manufacturing of (Hybrid and Electric Vehicles) India) II ಸ್ಕೀಮ್ ಯೋಜನೆ ಅಡಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ 10,000 ಕೋಟಿ ರೂಪಾಯಿ ತೆಗೆದಿರಿಸಿದೆ.

ಇದನ್ನೂ ಓದಿ: ಆ್ಯಂಬುಲೆನ್ಸ್ ಬಂದಾಗ ಪಾಲಿಸಬೇಕು ಹಲವು ನಿಯಮ - ಉಲ್ಲಂಘಿಸಿದರೆ ಕಠಿಣ ಶಿಕ್ಷೆ!

Latest Videos

undefined

5,500 ಕೋಟಿ ರೂಪಾಯಿ ಮೀಸಲಿಟ್ಟಿದ್ದ ಕೇಂದ್ರ ಸರ್ಕಾರ ಇದೀಗ 10,000 ಕೋಟಿ ರೂಪಾಯಿ ತೆಗೆದಿಟ್ಟಿದೆ. ಹೀಗಾಗಿ ಎಲೆಕ್ಟ್ರಿಕ್ ಕಾರು ಖರೀದಿಸೋ ಗ್ರಾಹಕರಿಗೆ ಕೇಂದ್ರ ಸರ್ಕಾರ ಗರಿಷ್ಠ 2.5 ಲಕ್ಷ ರೂಪಾಯಿ ಸಬ್ಸಡಿ ನೀಡಲಿದೆ. ಇನ್ನೂ ಹೈಬ್ರಿಡ್ ಕಾರಿಗೆ 20 ಸಾವಿರ ರೂಪಾಯಿ ಸಬ್ಸಿಡಿ ನೀಡಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: ಗೊತ್ತಿಲ್ದೇ ಇರೋ ಟ್ರಾಫಿಕ್ ನಿಯಮ -ಅಪರಿಚಿತರಿಗೆ ಲಿಫ್ಟ್, ಕಾರಿನಲ್ಲಿ ಟಿವಿ ನಿಷೇಧ!

ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಹಾಗೂ ಬಸ್ ಖರೀದಿಗೂ ಸಬ್ಸಡಿ ನೀಡಲಿದೆ. ಈ ಮೂಲಕ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಸಂಖ್ಯೆ ಹೆಚ್ಚಿಸಿ, ಮಾಲಿನ್ಯ ಕಡಿಮೆ ಮಾಡಲು ಕೇಂದ್ರ ಸರ್ಕಾರದ ಮಹತ್ವದ  ಯೋಜನೆ ಜಾರಿ ಮಾಡಿದೆ. ಈ ಯೋದನೆ ಎಪ್ರಿಲ್ 1, 2019ರಿಂದಲೇ ಜಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಭಾರತದಲ್ಲಿ ಮಾರುತಿ ಸುಜುಕಿ, ಮಹೀಂದ್ರ, ಹ್ಯುಂಡೈ ಸೇರಿದಂತೆ ಹಲವು ಕಂಪನಿಗಳು ಈ ವರ್ಷ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ. 

click me!