ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ!

By Web DeskFirst Published Mar 1, 2019, 1:23 PM IST
Highlights

ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನ ಕಾರಿನ ಮೈಲೈಜ್ ಹಾಗೂ ಗರಿಷ್ಟ ವೇಗದ ಮಾಹಿತಿ ಬಹಿರಂಗವಾಗಿದೆ. ಇಲ್ಲಿದೆ ಹೆಚ್ಚಿನ ವಿವರ.

ನವದೆಹಲಿ(ಮಾ.01): ಮಾರುತಿ ಸುಜುಕಿ ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಭಾರತದ ಅತ್ಯಂತ ಕಡಿಮೆ ಬೆಲೆ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬಿಡುಗಡಗೂ ಮುನ್ನವೇ ಕಾರಿನ ಪ್ರಯಾಣದ ರೇಂಜ್ ಬಿಡುಗಡೆಯಾಗದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಖರೀದಿ ಗ್ರಾಹಕರಿಗೆ ಬಂಪರ್ ಕೊಡುಗೆ- 2.5 ಲಕ್ಷ ರೂ ಸಬ್ಸಡಿ!

ನೂತನ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 150 ರಿಂದ 160 ಕಿ.ಮೀ ಪ್ರಯಾಣ ಮಾಡಬುಹುದು ಎಂದು ಮಾರುತಿ ಸುಜುಕಿ ಅಧಿಕೃತವಾಗಿ ಹೇಳಿದೆ. ಇನ್ನು ಗರಿಷ್ಠ ವೇಗ 100 ಕಿ.ಮೀ. ಇದು ಇತರ ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಸಿದರೆ ಕಡಿಮೆ.

ಇದನ್ನೂ ಓದಿ: ಮಾರುತಿ ಸುಜುಕಿ ಬಿಡುಗಡೆ ಮಾಡುತ್ತಿದೆ ಅತ್ಯಂತ ಕಡಿಮೆ ಬೆಲೆ ಎಲೆಕ್ಟ್ರಿಕ್ ಕಾರು

ಮಹೀಂದ್ರ ಇ ವೆರಿಟೋ, ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ಗರಿಷ್ಟ ವೇಗ 140 ರಿಂದ 142kmph.  ಹೀಗಾಗಿ ಹೈವೇ ಪ್ರಯಾಣಕ್ಕಿಂತ ನಗರದಲ್ಲಿನ ಪ್ರಯಾಣಕ್ಕೆ ಮಾರುತಿ ವ್ಯಾಗನ್ಆರ್ ಕಾರು ಹೆಚ್ಚು ಸೂಕ್ತ.  ನೂತನ ಕಾರಿ ಬೆಲೆ 7 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಜೊತೆ ಕೇಂದ್ರ ಸರ್ಕಾರದ ಸಬ್ಸಡಿ ಕೂಡಲು ಮುಂದಾಗಿದೆ. ಇದರಿಂದ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಅಗ್ಗವಾಗಲಿದೆ.

click me!