ಹೊಸ ಅವತಾರದಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬಿಡುಗಡೆ!

By Suvarna NewsFirst Published Nov 26, 2020, 6:13 PM IST
Highlights

ರಾಯಲ್ ಎನ್‌‌ಫೀಲ್ಡ್ ‘ಮೇಕ್ ಇಟ್ ಯುವರ್ಸ್‌’ ಈಗ ಕ್ಲಾಸಿಕ್ 350 ಯಲ್ಲಿಯೂ ಕೂಡ ಲಭ್ಯ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ನಲ್ಲಿಯೂ MIY ಮತ್ತು ಎರಡು ಹೊಸ ಕಲರ್‌  - ಆರೇಂಜ್ ಎಂಬರ್ ಮತ್ತು ಮೆಟಾಲೋ ಸಿಲ್ವರ್ ಅನ್ನು ಪರಿಚಯಿಸುತ್ತಿದೆ. ಬುಕಿಂಗ್‌‌ಗಳು ನವೆಂಬರ್ 26, 2020 ರಿಂದಲೇ ಭಾರತದ ಉದ್ದಕ್ಕೂ ಆರಂಭಗೊಂಡಿದೆ.

ನವದೆಹಲಿ(ನ.6):  ಮಧ್ಯಮ ಗಾತ್ರದ (250 - 750 ಸಿಸಿ) ಮೋಟಾರ್‌ಸೈಕಲ್‌ಗಳ ಉತ್ಪಾದನೆಯಲ್ಲಿ ಜಾಗತಿಕ ಮುಂದಾಳುವಾದ ರಾಯಲ್ ಎನ್‌ಫೀಲ್ಡ್, ಇಂದು ತನ್ನ ಬೆಸ್ಟ್-ಸೆಲ್ಲಿಂಗ್ ಮೋಟಾರ್‌ಸೈಕಲ್‌ ಕ್ಲಾಸಿಕ್ 350ಯ ಎರಡು ಹೊಸ ವೇರಿಯಂಟ್‌‌‌ಗಳನ್ನು ಕ್ಲಾಸಿಕ್ 350 - ಮೆಟಾಲೋ ಸಿಲ್ವರ್ ಮತ್ತು ಆರೆಂಜ್ ಎಂಬರ್ ಎನ್ನುವ ಹೆಸರಿನಲ್ಲಿ ಪರಿಚಯಿಸಿದೆ. ಕ್ಲಾಸಿಕ್ 350 ರ ಹೊಸ ವೇರಿಯಂಟ್‌‌‌ ಗಳನ್ನು ಉಜ್ವಲವಾದ ಹೊಸ ಬಣ್ಣಗಳ ಪರಿಕಲ್ಪನೆಯ ಮೂಲಕ ರೂಪಿಸಲಾಗಿದೆ ಮತ್ತು ತಾರುಣ್ಯದ ಮತ್ತು ಉಲ್ಲಾಸಕರ ಮೋಟರ್‌‌ ಸೈಕಲಿಂಗ್ ಅನುಭವವನ್ನು ಪ್ರಚೋದಿಸಲು ವಿನ್ಯಾಸಗೊಳಿಸಲಾಗಿದೆ. ಈ ವೇರಿಯಂಟ್‌‌‌ ಗಳಲ್ಲಿ ಮೋಟರ್‌ ಸೈಕಲ್ಲಿನ ಅಲಾಯ್ ವೀಲ್ಸ್ ಮತ್ತು ಟ್ಯೂಬ್‌ಲೆಸ್ ಟೈರ್‌ ನೀಡುತ್ತಿರುವುದು ಉತ್ಸಾಹಿ ರೈಡರುಗಳಿಗೆ ಹೆಚ್ಚು ಉತ್ತಮ ಹ್ಯಾಂಡ್ಲಿಂಗ್ ಅನುಭವವನ್ನು ಒದಗಿಸುತ್ತದೆ. ಕ್ಲಾಸಿಕ್ 350 ಈಗ ರಾಯಲ್ ಎನ್‌ಫೀಲ್ಡ್ ಮೇಕ್ ಇಟ್ ಯುವರ್ಸ್ - ಮಿವೈ - ಇನಿಶಿಯೇಟಿವ್‌ನಲ್ಲಿ ಲಭ್ಯವಿದೆ. ಗ್ರಾಹಕರು ಈಗ ತಮ್ಮ ಕ್ಲಾಸಿಕ್ ಅನ್ನು ಆರ್‌ಇ ಆ್ಯಪ್ ಮತ್ತು ಎಂಐವೈ ಮೂಲಕ ಕಸ್ಟಮೈಸ್ ಮತ್ತು ಆಸೆಸರೈಸ್ ಮಾಡಬಹುದು.

ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್ ಬೈಕ್ ಬಿಡುಗಡೆ!

ರಾಯಲ್ ಎನ್‌ಫೀಲ್ಡ್ ಆ್ಯಪ್, ವೆಬ್‌ಸೈಟ್ ಮೂಲಕ ಆಕರ್ಷಕ ಮತ್ತು ವಿಶಿಷ್ಟವಾದ 3-D ಕಾನ್ಫಿಗರೇಟರ್, ಮೇಕ್-ಇಟ್-ಯುವರ್ಸ್, ಎಂಐವೈ, ಅನ್ನು ಸಕ್ರಿಯಗೊಳಿಸಿದೆ. ಇದನ್ನು ಮೊದಲು 650 ಟ್ವಿನ್ ಮೋಟರ್ ಸೈಕಲ್‌ಗಳಲ್ಲಿ ಮತ್ತು ನಂತರ ಹೊಸದಾಗಿ ಬಿಡುಗಡೆಯಾದ ಈಸಿ ಕ್ರೂಸರ್, ಮೀಟಿಯೋರ್ 350 ಯಲ್ಲಿ ಪರಿಚಯಿಸಲಾಗಿದ್ದು, ಎಂಐವೈ ಅನ್ನು ಈಗ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ನಲ್ಲಿಯೂ ಬಳಸಬಹುದು. ಹಂತಹಂತವಾಗಿ, ರಾಯಲ್ ಎನ್‌ಫೀಲ್ಡ್ ಪೋರ್ಟ್ಫೋಲಿಯೊದ ಎಲ್ಲಾ ಮೋಟರ್‌ಸೈಕಲ್‌ಗಳಲ್ಲಿ ಎಂಐವೈ ಲಭ್ಯವಾಗಲಿದೆ. 

ಕೊರೋನಾ ನಡುವೆ: ಸದ್ದು ಮಾಡಿದ ರಾಯಲ್ ಎನ್‌ಫೀಲ್ಡ್ ಬೈಕ್‌ನ 4 ವಿಚಾರ!

ರಾಯಲ್ ಎನ್‌ಫೀಲ್ಡ್ ತನ್ನ ಹಿಂದಿನ ಪರಂಪರೆಯನ್ನು ಮುಂದುವರಿಸುತ್ತ, ಬಿಡುಗಡೆ ಮಾಡಿದಾಗಿನಿಂದಲೂ ಯಶಸ್ಸಿನ ಪಥದಲ್ಲಿಯೇ ಇರುವ ಕ್ಲಾಸಿಕ್ ಸಿರೀಸ್ ರಿಫ್ರೆಶ್ ಮಾಡುವುದನ್ನು ಮುಂದುವರೆಸಿದೆ. ಮಧ್ಯಮ ಗಾತ್ರದ ಮೋಟಾರ್‌ಸೈಕಲ್ ಸೆಗ್ಮೆಂಟ್ ನಲ್ಲಿ ಆದ್ಯ ಪ್ರವರ್ತಕ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ರಾಯಲ್ ಎನ್‌ಫೀಲ್ಡ್ ತನ್ನ ಅಥೆಂಟಿಕ್ ಬ್ರಿಟಿಷ್ ಪೆಡಿಗ್ರೀಡ್ ಮೋಟರ್‌ಸೈಕಲ್‌ಗಳ ಜೊತೆಯಲ್ಲಿ ಈ ವಿಭಾಗದಲ್ಲಿ ಅತಿಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದೆ. ಹೊಸ ಕ್ಲಾಸಿಕ್ 350 ವೇರಿಯಂಟ್‌‌ಗಳು ಬೆಳೆಯುತ್ತಿರುವ ಮತ್ತು ನವಯುಗದ ರೈಡರುಗಳ ವ್ಯಕ್ತಿತ್ವ ಮತ್ತು ಆದ್ಯತೆಗಳಿಗೆ ಸಂಪೂರ್ಣವಾಗಿ ಸರಿಹೊಂದುತ್ತದೆ.

ಹೊಸ ಮೋಟಾರ್‌ಸೈಕಲ್ ವೇರಿಯಂಟ್‌‌‌ಗಳನ್ನು ಪರಿಚಯಿಸುತ್ತಾ, ರಾಯಲ್ ಎನ್‌ಫೀಲ್ಡ್ ಸಿಇಒ ಶ್ರೀ ವಿನೋದ್ ಕೆ. ದಾಸರಿ ಅವರು, “ಕ್ಲಾಸಿಕ್ 350 ಒಂದು ದಶಕದಿಂದ ನಮ್ಮ ಅತ್ಯಂತ ಯಶಸ್ವಿ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ. ಕ್ಲಾಸಿಕ್‌ನ ಸರಳ, ಟೈಮ್‌ಲೆಸ್ ಡಿಸೈನ್ ಮತ್ತು ಶುದ್ಧ ಮೋಟಸೈಕ್ಲಿಂಗ್ ಅನುಭವ ಬಿಡುಗಡೆಯಾದಾಗಿನಿಂದಲೂ ರೈಡರ್ ಗಳ ಸಮುದಾಯಗಳಿಂದ ಅಪಾರ ಮೆಚ್ಚುಗೆ ಮತ್ತು ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಕ್ಲಾಸಿಕ್ ಅನ್ನು ಮತ್ತಷ್ಟು ಆಕರ್ಷಕವಾಗಿಸುವ ನಿರಂತರ ಪ್ರಯತ್ನದಲ್ಲಿ, ನಾವು ಈ ಮೋಟಾರ್‌‌ಸೈಕಲ್‌‌ ಗೆ ಹೊಸ ವೇರಿಯಂಟ್‌‌‌ ಗಳನ್ನು ಪರಿಚಯಿಸಿದ್ದೇವೆ ಮತ್ತು ಮೇಕ್-ಇಟ್-ಯುವರ್ಸ್ ಮೂಲಕ ಅದನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಸೇರಿಸಿದ್ದೇವೆ, ಇವು ನಮ್ಮ ರೈಡರುಗಳು ತಮ್ಮನ್ನು ವಿಭಿನ್ನ ಮತ್ತು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತವೆ. ಕ್ಲಾಸಿಕ್ 350 ರ ಹೊಸತನದ ಮತ್ತು ರೋಮ್ಯಾಂಟಿಕ್ ಕಲರ್ ಸ್ಕೀಮುಗಳು ಮತ್ತು ಟ್ರಿಮ್‌ಗಳು, ಎಂಐವೈ ಮೂಲಕ ಹಲವಾರು ಕಸ್ಟಮೈಸೇಶನ್ ಮತ್ತು ಆಸೆಸರೈಜ್ ಸಂಯೋಜನೆಗಳೊಂದಿಗೆ ಉತ್ಸಾಹಿ ರೈಡರುಗಳಿಗೆ ಖಂಡಿತವಾಗಿಯೂ ಹೆಚ್ಚು ಉತ್ತಮ ಖರೀದಿಯ ಮತ್ತು ಮಾಲೀಕತ್ವದ ಅನುಭವವನ್ನು ನೀಡುತ್ತವೆ. ನಮ್ಮ ಗ್ರಾಹಕರಿಂದ ಎಂಐವೈಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸುವುದಕ್ಕೂ ನಮಗೆ ಬಹಳ ಸಂತೋಷವೆನ್ನಿಸುತ್ತಿದೆ. ನಮ್ಮ ಹೊಸದಾಗಿ ಬಿಡುಗಡೆಗೊಂಡ ಮೀಟಿಯೋರ್ ಗ್ರಾಹಕರಲ್ಲಿ 80% ಕ್ಕಿಂತ ಹೆಚ್ಚು ಜನರು ಎಂಐವೈ ಸೊಲ್ಯೂಶನ್‌ ಗಳನ್ನು ಆರಿಸಿಕೊಂಡಿದ್ದಾರೆ, ಇದು ಅದರ ಯಶಸ್ಸಿಗೆ ಸಾಕ್ಷಿ ಎನ್ನಬಹುದು. ಕ್ಲಾಸಿಕ್ 350 ಗ್ರಾಹಕರು ಕೂಡ ಇದನ್ನೇ ಇಚ್ಛಿಸುತ್ತಾರೆ ಎನ್ನುವ ವಿಶ್ವಾಸ ನಮಗಿದೆ ”ಎಂದು ಹೇಳಿದರು.

2008 ರಲ್ಲಿ ಪರಿಚಯಿಸಲ್ಪಟ್ಟ, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಅನ್ನು J2 ಮಾಡೆಲ್ ಅನ್ನು ಗಮನದಲ್ಲಿರಿಸಿ ಡಿಸೈನ್ ಮಾಡಲಾಗಿದೆ ಮತ್ತು ಇದು ಎರಡನೇ ಮಹಾಯುದ್ಧದ ನಂತರದ ಬ್ರಿಟಿಷ್ ಮೋಟರ್‌ಸೈಕಲ್‌ಗಳ ರೆಟ್ರೊ ಲುಕ್ ಅನ್ನು ನೀಡುತ್ತದೆ. J2 ಎಂಬುದು 1950 ರ ರಾಯಲ್ ಎನ್‌‌ಫೀಲ್ಡ್‌ ನ ಮಾಡೆಲ್ ಹೆಸರಾಗಿತ್ತು, ಅದು ಈಗಿನ ರೆಟ್ರೊ ಕ್ಲಾಸಿಕ್ ಸ್ಟೈಲಿಂಗ್ ಆಗಿ ಬೆಳೆದಿದೆ ಮತ್ತು ಟ್ರೆಡೀಶನಲ್ ಸ್ವಿಂಗಿಂಗ್ ಆರ್ಮ್ ರಿಯರ್ ಸಸ್ಪೆನ್ಷನ್ ಎಂದು ನಾವು ಗುರುತಿಸುವ ಮೋಟರ್‌‌ಸೈಕಲ್‌ಗಳ ಸಿರೀಸ್ ನಲ್ಲಿ ಮೊದಲನೆಯದಾಗಿದೆ. ಕ್ಲಾಸಿಕ್ ಇಂದು 1950 ರ ದಶಕದ ಈ ಶ್ರೇಷ್ಠ ಕ್ಲಾಸಿಕ್ ಬ್ರಿಟಿಷ್ ಸ್ಟೈಲಿಂಗ್ ಅನ್ನು ಕಾಯ್ದುಕೊಂಡಿದ್ದು ಸರಳತೆ, ಸಾಮರಸ್ಯ, ಸಮತೋಲನ ಮತ್ತು ಫಿನಿಶಿಂಗ್ ಹೊಂದಿದೆ. ರಾಯಲ್ ಎನ್‌ಫೀಲ್ಡ್‌ 350 ಸಿಸಿ ಯುನಿಟ್ ಕನ್ಸ್ಟ್ರಕ್ಷನ್ ಎಂಜಿನ್ (ಯುಸಿಇ), ಫ್ರಂಟ್ ಮತ್ತು ರಿಯರ್ ಮಡ್‌ಗಾರ್ಡ್‌ಗಳು, ಹೆಡ್‌ಲೈಟ್ ಕೇಸಿಂಗ್, ಫ್ಯುಯೆಲ್ ಟ್ಯಾಂಕ್, ಓವಲ್ ಟೂಲ್‌ಬಾಕ್ಸ್, ಎಕ್ಸಾಸ್ಟ್ ಫಿನ್ಸ್, ಸ್ಪೀಡೋಮೀಟರ್ ಡಯಲ್‌ಗಳು, ಸಿಂಗಲ್-ಸೀಟ್ ಸ್ಪ್ರಿಂಗ್ ಸ್ಯಾಡಲ್, ಟೈಲ್ ಲೈಟ್ ಅಸೆಂಬ್ಲಿ ಮತ್ತು ಹೆಡ್‌ಲ್ಯಾಂಪ್ ಕ್ಯಾಪ್, ಇವೆಲ್ಲವೂ ಎರಡನೆಯ ಮಹಾಯುದ್ಧದ ನಂತರದ ಬ್ರಿಟಿಷ್ ಮೋಟರ್ ಸೈಕಲ್‌ಗಳ ಲುಕ್ ಅನ್ನೇ ತೋರಿಸುತ್ತವೆ.

ಉಳಿದ ಎಲ್ಲಾ ರಾಯಲ್ ಎನ್‌ಫೀಲ್ಡ್ ಮೋಟರ್‌ಸೈಕಲ್‌ಗಳಂತೆ, ಹೊಸ ಕ್ಲಾಸಿಕ್ ಅನ್ನು ಕೂಡ ಪ್ರೊಟೆಕ್ಟಿವ್, ಫಂಕ್ಷನಲ್ ಮತ್ತು ಯುಟಿಲಿಟಿ ಆಧಾರಿತ ಆಸೆಸರಿಗಳನ್ನು ಬಳಸಿ ಜೆನ್ಯುನ್ ಮೋಟಾರ್‌ಸೈಕಲ್ ಆಸೆಸರಿ ಸೂಟ್‌ನೊಂದಿಗೆ ಕಸ್ಟಮೈಸ್ ಮಾಡಬಹುದು, ಇವೆಲ್ಲಕ್ಕೂ 2 ವರ್ಷಗಳ ವಾರೆಂಟಿ ಇರುತ್ತದೆ. ಈ ರೇಂಜ್ ಲಗೇಜ್ ಸೊಲ್ಯೂಶನ್ಸ್, ವ್ಯಾಪಕವಾದ ರೇಂಜಿನ ಎಂಜಿನ್ ಗಾರ್ಡ್‌ಗಳು, ಟೂರಿಂಗ್ ಸೀಟುಗಳು ಮತ್ತು ಕ್ಲಾಸಿಕ್ ಸ್ಟೈಲಿಂಗ್ ಎಂಬೆಲಿಶ್‌ಮೆಂಟ್‌ಗಳನ್ನು ಸಹ ಒಳಗೊಂಡಿದೆ.

ಭಾರತದ ಉದ್ದಕ್ಕೂ ಆರೆಂಜ್ ಎಂಬರ್ ಮತ್ತು ಮೆಟಾಲೋ ಸಿಲ್ವರ್‌ ವಿಧದ ಹೊಸ ಕ್ಲಾಸಿಕ್ 350 ಕಲರ್‌ವೇಗಳು ರೂ.1,83,164/- (ದೆಹಲಿ ಮತ್ತು ಚೆನ್ನೈನಲ್ಲಿ ಎಕ್ಸ್ ಶೋ ರೂಂ ಬೆಲೆ) ಬೆಲೆಯಲ್ಲಿಲಭ್ಯವಿದೆ.

click me!