ಇನ್ನೈದು ವರ್ಷದಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ!

By Web DeskFirst Published Mar 11, 2019, 8:50 PM IST
Highlights

ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದೆ. ಇದು  ಸರ್ಕಾರದ ಹೊಸ ನೀತಿಯಿಂದಲ್ಲ. ಅಥವಾ ಎಲ್ಲರೂ ಟ್ರಾಫಿಕ್ ನಿಯಮ ಪಾಲಿಸುತ್ತಾರೆ ಎಂದಲ್ಲ. ಇದು ಆಟೋಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಿರುವ ಹೊಸ ವಾಹನ. ಇದೇ ವಾಹನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲಿದೆ.

ನವದೆಹಲಿ(ಮಾ.11): ಟ್ರಾಫಿಕ್ ಸಮಸ್ಯೆ ಈಗ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿ ಹಳ್ಳಿಗಳಲ್ಲೂ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದೆ. ವಾಹನ ದಟ್ಟಣೆಯಿಂದ ಟ್ರಾಫಿಕ್, ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳು ಜನರ ಬದುಕನ್ನ ಹೈರಾಣಾಗಿಸಿದೆ.  ಈ ಸಮಸ್ಯೆಗೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ.

ಇದನ್ನೂ ಓದಿ: ನಡು ರಸ್ತೆಯಲ್ಲಿ ಮಹಿಳೆ ಹೆಲ್ಮೆಟ್ ಪುಡಿ ಮಾಡಿ ಸರ್ಪ್ರೈಸ್ ನೀಡಿದ ಪೊಲೀಸ್!

ಇನ್ನೈದು ವರ್ಷದಲ್ಲಿ ದೇಶದಲ್ಲಿ ಹಾರುವ ಕಾರು ಹಾರಾಟ ಆರಂಭಿಸಲಿದೆ. ನಗರಗಳಲ್ಲಿನ ಟ್ರಾಫಿಕ್ ಸಮಸ್ಯೆಗೆ  ಹಾರುವ ಕಾರು ಅಂತ್ಯಹಾಡಲಿದೆ ಎಂದು ಇಂಟೆಲ್ ಡ್ರೋಣ್ ಮುಖ್ಯಸ್ಥ ಅನಿಲ್ ನಂದುರಿ ಹೇಳಿದ್ದಾರೆ. ಇದು ಭವಿಷ್ಯದ ಕಾರು, ಸದ್ಯ ಅಭಿವೃದ್ಧಿ ಹಂತದಲ್ಲಿದೆ ಎಂದಿದ್ದಾರೆ.

ಇದನ್ನೂ ಓದಿ: 20ಕ್ಕಿಂತ ಹೆಚ್ಚು ವಾಹನ ಕ್ಯೂ ಇದ್ದರೆ ಟೋಲ್ ಕಟ್ಟಬೇಕಿಲ್ಲ!

ಡ್ರೋಣ್ ಜನರ ಬದುಕಿನ ಅವಿಭಾಜ್ಯ ಅಂಗವಾಗಿ ಬದಲಾಗುತ್ತಿದೆ. ಹಾರುವ ಕಾರು ಬಳಕೆಯಲ್ಲಿನ ಸುರಕ್ಷತೆ,ಹಾರುವ ಕಾರುಲ್ಲಿ ಎದುರಾಗೋ ಅಪಾಯಗಳು,  ಆಕಾಶದಲ್ಲಿನ ನಿಯಮ ಸೇರಿದಂತೆ ಹಲವು ವಿಚಾರಗಳು ಚರ್ಚೆಯಲ್ಲಿದೆ. ಹೀಗಾಗಿ 5 ರಿಂದ 10 ವರ್ಷದಲ್ಲಿ ಹಾರುವ ಕಾರು ಹಾರಾಡಲಿದೆ ಎಂದಿದ್ದಾರೆ.

click me!