ಕಡಿಮೆ ಬೆಲೆಗೆ ಯಮಹಾ ಫ್ಯಾಸಿನೋ ಡಾರ್ಕ್ ನೈಟ್ ಸ್ಕೂಟರ್ ಬಿಡುಗಡೆ!

By Web Desk  |  First Published Mar 11, 2019, 3:59 PM IST

ಯಮಹಾ ಸ್ಕೂಟರ್ ಬಿಡುಗಡೆಯಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಫ್ಯಾಸಿನೋ ಹೊಸ ಫೀಚರ್ಸ್ ಹಾಗೂ ಹೊಸ ಬಣ್ಣದಲ್ಲಿ ಫ್ಯಾಸಿನೋ ರಸ್ತೆಗಿಳಿದಿದೆ. ಇದರ ಬೆಲೆ ಹಾಗೂ ಇತರ ವಿಶೇಷತೆ ಇಲ್ಲಿದೆ.


ನವದೆಹಲಿ(ಮಾ.11): ಯಮಹಾ ಸ್ಕೂಟರ್ ವಿಭಾಗದಲ್ಲಿ ಫ್ಯಾಸಿನೋ ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಇದೀಗ ಯಮಹಾ ಫ್ಯಾಸಿನೋ ಡಾರ್ಕ್ ನೈಟ್ ಎಡಿಶನ್ ಸ್ಕೂಟರ್ ಬಿಡುಗಡೆಯಾಗಿದೆ. ಹೊಸ ಫೀಚರ್ಸ್ ಹಾಗೂ ಅತ್ಯಾಕರ್ಷಕ ಲುಕ್‌ನಲ್ಲಿ ಈ ಸ್ಕೂಟರ್ ಮತ್ತೆ ಗ್ರಾಹಕರನ್ನ ಮೋಡಿ ಮಾಡೋ ವಿಶ್ವಾಸದಲ್ಲಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ -ಬರುತ್ತಿದೆ ಬಜಾಜ್ KTM ಬೈಕ್!

Tap to resize

Latest Videos

undefined

ಡಾರ್ಕ್ ನೈಟ್ ಎಡಿಶನ್  ಸ್ಕೂಟರ್ ಡಾರ್ಕ್ ಬ್ಲಾಕ್ ಹಾಗೂ ಮರೂನ್ ಸೀಟ್ ಹೊಂದಿದೆ. ಯುನಿಫೈಡ್ ಬ್ರೇಕಿಂಗ್ ಸಿಸ್ಟಮ್(UBS) ಇದು ಹೊಂಡಾದ ಕಾಂಬಿ ಬ್ರೇಕಿಂಗ್ ಸಿಸ್ಟಮ್(CBS) ಸರಿಸಮವಾಗಿದೆ. ಇನ್ನು ಎಂಜಿನ್‍ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಇದನ್ನೂ ಓದಿ: ಕಾರು ಎಷ್ಟು ಕೊಡುತ್ತೆ ಪ್ರಶ್ನೆಗೆ ಮಹೀಂದ್ರ ಮಾಲೀಕರ ತಕ್ಕ ತಿರುಗೇಟು!

113 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್,  7 bhp ಪವರ್ ಹಾಗೂ 8.1 Nm ಪೀಕ್ ಪವರ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ನೂತನ ಫ್ಯಾಸಿನೋ ಡಾರ್ಕ್ ನೈಟ್ ಎಡಿಶನ್ ಸ್ಕೂಟರ್ ಬೆಲೆ  56,793 ರೂಪಾಯಿ(ಎಕ್ಸ್ ಶೋ ರೂಂ).
 

click me!