ಸುಲಭವಾಗಿ ಮಾರುತಿ ಡಿಸೈರ್ ಕಾರನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಿ!

By Web DeskFirst Published Mar 11, 2019, 6:29 PM IST
Highlights

ಎಲೆಕ್ಟ್ರಿಕ್ ಕಾರಿಗೆ ಒಂದು ಬಾರಿ ಬಂಡವಾಳ ಹೂಡಿಕೆ ಮಾಡಿದರೆ ಸಾಕು, ಮತ್ತೆ ಖರ್ಚು ಕಡಿಮೆ.  ಜೊತೆಗೆ ಪರಿಸರ ಸ್ನೇಹಿ. ಆದರೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಸ್ವಲ್ಪ ದುಬಾರಿ. ಇಷ್ಟೇ ಅಲ್ಲ ಈಗಷ್ಟೇ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗುತ್ತಿದೆ. ಆದರೆ ಚಿಂತೆ ಪಡಬೇಕಿಲ್ಲ. ಇಂಧನದ ಕಾರುಗಳನ್ನ ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಲು ಸಾಧ್ಯವಿದೆ.
 

ಹರ್ಯಾಣ(ಮಾ.11): ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನವೇ ಎಲ್ಲಾ ದೇಶಗಳಲ್ಲಿ ರಾರಾಜಿಸಲಿದೆ. ಇದಕ್ಕಾಗಿ ಭಾರತ ಕೂಡ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ತುಸು ದುಬಾರಿ. ಆದರೆ ಇ ಟ್ರಿಯೋ ಕಂಪನಿ ಪೆಟ್ರೋಲ್ ಅಥವಾ ಡೀಸೆಲ್ ಕಾರನ್ನು ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸುತ್ತಿದೆ.

ಇದನ್ನೂ ಓದಿ: TATA ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿನ ಬೆಲೆ ಬಹಿರಂಗ- i20,ಬಲೆನೋಗಿಂತ ಕಡಿಮೆ!

ತೆಲಂಗಾಣ ಮೂಲದ ಇ ಟ್ರಿಯೋ ಕಂಪನಿ ಅಟೋಮೊಟಿವ್ ರಿಸರ್ಚ್ ಆಥಾರಿಟಿ ಆಫ್ ಇಂಡಿಯಾ (ARAI)ದಿಂದ ಪ್ರಮಾಣೀಕೃತ ಕಂಪನಿಯಾಗಿದೆ. ಸದ್ಯ ಇ ಟ್ರಿಯೋ  ಕಂಪನಿ ಮಾರುತಿ ಸುಜುಕಿ ಸಂಸ್ಥೆಯ ಡಿಸೈರ್ ಹಾಗೂ ವ್ಯಾಗನ್ಆರ್ ಕಾರುಗಳನ್ನ ಎಲೆಕ್ಟ್ರಿಕ್ ಕಾರುಗಳಾಗಿ ಪರಿವರ್ತಿಸುತ್ತಿದೆ. ಶೀಘ್ರದಲ್ಲೇ ಇತರ ಕಂಪನಿ ಕಾರುಗಳನ್ನೂ ಪರಿವರ್ತಿಸಲಿದೆ.

ಇ ಟ್ರಿಯೋ ಪರಿವರ್ತಿಸೋ ಎಲೆಕ್ಟ್ರಿಕ್ ಕಾರುಗಳು ಒಂದು ಬಾರಿ ಚಾರ್ಜ್ ಮಾಡಿದರೆ 150 ರಿಂದ 180 ಕಿ.ಮೀ ಪ್ರಯಾಣದ ರೇಂಜ್ ಹೊಂದಿದೆ. ಇದನ್ನು 230 ರಿಂದ 300 ಕಿ.ಮೀಗೆ ಏರಿಸಲು ಯೋಜನೆ ಹಾಕಿಕೊಂಡಿದೆ. 3.5 ಲಕ್ಷ ರೂಪಾಯಿಗೆ ಇಂಧನ ಕಾರನ್ನು ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಲು ಸಾಧ್ಯವಿದೆ ಎಂದು ಇ ಟ್ರಿಯೋ ಕಂಪನಿ ಹೇಳಿದೆ.

ಇದನ್ನೂ ಓದಿ: ರಾಜಧಾನಿಯಲ್ಲಿ 1000 ಎಲೆಕ್ಟ್ರಿಕ್ ಬಸ್ - ಬಿಲ್ ಪಾಸ್ ಮಾಡಿದ ಸರ್ಕಾರ!

ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಕಿಟ್‌ಗಳನ್ನ ಅಳವಡಿಸಿ  ಎಲೆಕ್ಟ್ರಿಕ್ ಕಾರಾಗಿ ಪರಿವರ್ತನೆ ಮಾಡಲಾಗುತ್ತಿದೆ. ಇಷ್ಟೇ ಅಲ್ಲ ಇಂಧನ ಕಾರು ಎಲೆಕ್ಟ್ರಿಕ್ ಕಾರಾಗಿ ಪರಿವರ್ತನೆ ಮಾಡಿದರೆ ಯಾವದೇ ನಿಯಮ ಉಲ್ಲಂಘನೆಯಾಗುವುದಿಲ್ಲ. ಕಾರಿನ ರಿಜಿಸ್ಟ್ರೇಶನ್(RC) ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಇ ಟ್ರಿಯೋ ಮಾಡಲಿದೆ. ಮೂಲ RC ಬದಲಿಸಿ, ಎಲೆಕ್ಟ್ರಿಕ್ ಕಾರಿನ RC ನೀಡಲಾಗುತ್ತೆ. 

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಖರೀದಿ ಗ್ರಾಹಕರಿಗೆ ಬಂಪರ್ ಕೊಡುಗೆ- 2.5 ಲಕ್ಷ ರೂ ಸಬ್ಸಡಿ!

ಸದ್ಯ ಕ್ಯಾಬ್ ಕಾರುಗಳಿಗೆ ಇ ಟ್ರಿಯೋ ಎಲೆಕ್ಟ್ರಿಕ್ ಕಿಟ್ ಅಳವಡಿಸಿ ಪರಿವರ್ತಿಸುತ್ತಿದೆ. ಮುಂದಿನ ವರ್ಷ ಖಾಸಿಗಿ ಕಾರುಗಳಿಗೂ ಎಲೆಕ್ಟ್ರಿಕ್ ಕಿಟ್ ಅಳವಡಿಸಿ ಪರಿವರ್ತಿಸಲಾಗುತ್ತದೆ ಎಂದು ಇ ಟ್ರಿಯೋ ಹೇಳಿದೆ. 

click me!