ಫಾಸ್ಟ್ಯಾಗ್ ವ್ಯವಸ್ಥೆ ಬಂದ ಬಳಿಕ ಟೋಲ್‌ಗಳಲ್ಲಿ ಕಾಯುವಿಕೆ ಹೆಚ್ಚಳ| ಸರಾಸರಿ ಕಾಯುವಿಕೆ ಅವಧಿ ಶೇ.29ರಷ್ಟು ಏರಿಕೆ| ಎಲ್ಲರ ಬಳಿ ಫಾಸ್ಟ್ಯಾಗ್ ಇಲ್ಲದಿರುವುದೇ ಕಾರಣ
ನವದೆಹಲಿ[ಜ.18]: ರಸ್ತೆ ಬಳಕೆ ಶುಲ್ಕ ಪಾವತಿಸಲು ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಸರತಿಯಲ್ಲಿ ನಿಲ್ಲುವುದು, ತನ್ಮೂಲಕ ಸಹಸ್ರಾರು ಕೋಟಿ ರು. ಮೌಲ್ಯದ ಇಂಧನ ವ್ಯರ್ಥವಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೆ ತಂದಿದೆ. ಇದು ಜಾರಿಗೆ ಬಂದ ಬಳಿಕ ಡಿಜಿಟಲ್ ವಿಧಾನದಲ್ಲಿ ಸುಂಕ ಪಾವತಿ ಪ್ರಮಾಣ ಶೇ.60ರಷ್ಟುಹೆಚ್ಚಳವಾಗಿದೆ. ಆದರೆ ಫಾಸ್ಟ್ಯಾಗ್ ಬಂದ ಬಳಿಕ ಹೆದ್ದಾರಿಗಳಲ್ಲಿ ವಾಹನಗಳ ಕಾಯುವಿಕೆ ಪ್ರಮಾಣ ಶೇ.29ರಷ್ಟುಏರಿಕೆಯಾಗಿದೆ!
ದೇಶದ 488 ಟೋಲ್ ಪ್ಲಾಜಾಗಳನ್ನು ನೇರವಾಗಿ ವೀಕ್ಷಿಸುವ ಕೇಂದ್ರೀಯ ಟೋಲ್ ಪ್ಲಾಜಾ ನಿಗಾ ವ್ಯವಸ್ಥೆಯ ಅಂಕಿ-ಅಂಶಗಳಿಂದ ಈ ಮಾಹಿತಿ ಲಭ್ಯವಾಗಿದೆ. 2019ರ ನ.15ರಿಂದ 2019ರ ಡಿ.14ರವರೆಗೆ ಟೋಲ್‌ಗಳಲ್ಲಿ ಕಾಯುವಿಕೆ ಅವಧಿ 7 ನಿಮಿಷ 44 ಸೆಕೆಂಡ್ ಇತ್ತು. 2019ರ ಡಿ.15ರಿಂದ 2020ರ ಜ.14ರ ಅವಧಿಯಲ್ಲಿ ಇದು 9 ನಿಮಿಷ 57 ಸೆಕೆಂಡ್‌ಗೆ ಹೆಚ್ಚಳವಾಗಿದೆ. ಪ್ರತಿಯೊಬ್ಬರೂ ಫಾಸ್ಟ್ಯಾಗ್ ಅಳವಡಿಸಿಕೊಳ್ಳದಿರುವುದು, ಡಿಜಿಟಲ್ ಪಾವತಿ ವಿಧಾನದಲ್ಲಿರುವ ಸಮಸ್ಯೆಗಳೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಜ.15ರಿಂದ ಫಾಸ್ಟ್ಯಾಗ್ ಮೂಲಕ ಪಾವತಿ ಕಡ್ಡಾಯವಾಗಿರುವುದರಿಂದ ಪರಿಸ್ಥಿತಿ ಸುಧಾರಿಸಬಹುದು ಎನ್ನಲಾಗಿದೆ.
undefined
ಫಾಸ್ಟ್ಯಾಗ್ : ಎರಡು ದಿನವಾದ್ರೂ ತಪ್ಪದ ವಾಹನ ಸವಾರರ ಬವಣೆ
ಫಾಸ್ಟ್ಯಾಗ್ ಮೂಲಕ ಪಾವತಿ ಹೆಚ್ಚಳವಾಗಿದೆಯಾದರೂ, ಸುಂಕ ಹೆಚ್ಚಳದಲ್ಲಿ ಏನಾದರೂ ಏರಿಕೆ ಕಂಡುಬಂದಿದೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ. ಪ್ರತಿನಿತ್ಯ ದೇಶದಲ್ಲಿ 60 ಲಕ್ಷ ವಾಹನಗಳು ಟೋಲ್ ದಾಟುತ್ತವೆ. ಟೋಲ್‌ಗಳಲ್ಲಿ ಈ ವಾಹನಗಳು ಕಾಯುವುದರಿಂದ 12 ಸಾವಿರ ಕೋಟಿ ರು.ನಷ್ಟುಇಂಧನ ವಾರ್ಷಿಕವಾಗಿ ವ್ಯರ್ಥವಾಗುತ್ತಿದೆ ಎಂಬ ಅಂದಾಜಿದೆ. ಇದರ ಜತೆಗೆ ಹೆದ್ದಾರಿ ಸುಂಕ ವಸೂಲಾತಿಯಲ್ಲಿ ಸೋರಿಕೆಯಾಗುತ್ತಿದೆ ಎಂಬ ಆರೋಪಗಳೂ ಇವೆ. ಫಾಸ್ಟ್ಯಾಗ್‌ನಿಂದ ಇದಕ್ಕೆಲ್ಲ ಕಡಿವಾಣ ಬೀಳಬಹುದು ಎಂಬ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.
ಕರ್ನಾಟಕ ಟೋಲ್‌ಗಳು ಸರಾಗ
ಡಿ.1ರಿಂದ ಫಾಸ್ಟ್ಯಾಗ್ ಕಡ್ಡಾಯಗೊಳಿಸುವುದಾಗಿ ಸರ್ಕಾರ ಹೇಳಿತ್ತು. ಬಳಿಕ ಅದನ್ನು ಡಿ.15ಕ್ಕೆ ಮುಂದೂಡಿತು. ಇದೀಗ ಜ.15ರಿಂದ ಜಾರಿಗೊಳಿಸಿದೆ. ಡಿ.1ರಿಂದಲೇ ಫಾಸ್ಟ್ಯಾಗ್ ಖರೀದಿ ಪ್ರಮಾಣ ಹೆಚ್ಚಳವಾಗಿದೆ. ಫಾಸ್ಟ್ಯಾಗ್ ಬಳಕೆ ಹೆಚ್ಚಿರುವ ಈ ದಿನಗಳಲ್ಲಿ ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿ ಟೋಲ್‌ಗಳಲ್ಲಿ ವಾಹನಗಳ ಕಾಯುವಿಕೆ ಸಮಯ ಗಮನಾರ್ಹ ಎನ್ನುವ ರೀತಿ ಕಡಿಮೆಯಾಗಿದೆ. ಆದರೆ ಉತ್ತರಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಹರಾರಯಣ, ರಾಜಸ್ಥಾನದಲ್ಲಿ ಹೆಚ್ಚಳವಾಗಿದೆ ಟೋಲ್ ಪ್ಲಾಜಾ ನಿಗಾ ಕೇಂದ್ರದ ಮಾಹಿತಿ ತಿಳಿಸಿದೆ.
ಫಾಸ್ಟ್‌ಟ್ಯಾಗ್ ಇಲ್ಲದವರಿಗೆ ಕೇಂದ್ರದಿಂದ ಸಿಹಿ ಸುದ್ದಿ..!
ಜನವರಿ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ