ಟೊಯೊಟಾ ಇನೋವಾ ಕಾರಿಗೆ ಪ್ರತಿಸ್ಪರ್ಧಿ ನೀಡಲು ಕಿಯಾ ಮೋಟಾರ್ಸ್ ರೆಡಿಯಾಗಿದೆ. ನೂತನ ಕಿಯಾ ಕಾರ್ನಿವಲ್ MPV ಕಾರಿನ ಮೂಲಕ ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದೆ. ನೂತನ ಕಾರಿನ ಟೀಸರ್ ಬಿಡುಗಡೆಯಾಗಿದ್ದು, ಕುತೂಹಲ ಹೆಚ್ಚಿಸಿದೆ.
ದೆಹಲಿ(ಜ.17): ಕಿಯಾ ಮೋಟಾರ್ಸ್ ಭಾರತದಲ್ಲಿ ಮೊದಲ ಕಾರು ಬಿಡುಗಡೆ ಮಾಡಿ ಭಾರಿ ಯಶಸ್ಸು ಕಂಡಿದೆ. ಸೌತ್ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಭಾರತದಲ್ಲಿ ಕಿಯಾ ಸೆಲ್ಟೋಸ್ SUV ಕಾರು ಬಿಡುಗಡೆ ಮಾಡಿ ದಾಖಲೆ ಬರೆದಿದೆ. ಇದರ ಯಶಸ್ಸಿನ ಬೆನ್ನಲ್ಲೇ ಕಿಯಾ ಮೋಟಾರ್ಸ್ ಇದೀಗ ಇನೋವಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಾರ್ನಿವಲ್ ಕಾರು ಬಿಡುಗಡೆ ಮಾಡುತ್ತಿದೆ.
ಗ್ರೇಟರ್ ನೋಯ್ಡಾದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್ಪೋದಲ್ಲಿ ಕಿಯಾ ಮೋಟಾರ್ಸ್ ಕಾರ್ನಿವಲ್ ಕಾರು ಪರಚಯಿಸುತ್ತಿದೆ. ಇಷ್ಟೇ ಅಲ್ಲ ಮಾರ್ಚ್‌ನಲ್ಲಿ ಕಿಯಾ ಮೋಟಾರ್ಸ್ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ.
undefined
ಈಗಾಗಲೇ ಕಾರಿನ ಕೆಲ ಟೀಸರ್ ಬಿಡುಗಡೆಯಾಗಿದೆ. ಇದೀಗ ಕಿಯಾ ಕಾರ್ನಿವಲ್ ಕಾರಿನ ಮತ್ತೊಂದು ಟೀಸರ್ ಬಿಡುಗಡೆಯಾಗಿದ್ದು, ಕಾರು ಪ್ರಿಯರ ಕುತೂಹಲ ಹೆಚ್ಚಿಸಿದರೆ, ಇನೋವಾಗೆ ನಡುಕು ಶುರುವಾಗಿದೆ. ಫೀಚರ್ಸ್, ಕಮ್‌ಫರ್ಟ್ ಹಾಗೂ ಲಕ್ಸುರಿ ವಿಚಾರದಲ್ಲಿ ಕಿಯಾ ಕಾರ್ನಿವಲ್ ಭಾರತದಲ್ಲಿ ಇತರ ಎಲ್ಲಾ MPV ಕಾರುಗಳನ್ನು ಹಿಂದಿಕ್ಕಿಲಿದೆ.
ಕಾರ್ನಿವಲ್ 7 ಸೀಟರ್, 8 ಸೀಟರ್ ಹಾಗೂ 8 ಸೀಟರ್ ವೇರಿಯೆಂಟ್ ಲಭ್ಯವಿದೆ. ಪ್ರೀಮಿಯಂ, ಪ್ರೆಸ್ಟೀಜ್ ಸೇರಿದಂತ 5 ಟ್ರಿಮ್ ವೇರಿಯೆಂಟ್ ಆಯ್ಕೆ ಕೂಡ ಲಭ್ಯವಿದೆ. ಲಿಮೌಸೈನ್ ಕಾರ್ನಿವಲ್ ಟಾಪ್ ಮಾಡೆಲ್ ಕಾರಾಗಿದೆ.
ಕಾರ್ನಿವಲ್ 2.2 ಲೀಟರ್ ಡೀಸೆಲ್ ಎಂಜಿನ್, BS6 ಅಪ್‌ಗ್ರೇಡ್ ಹೊಂದಿದೆ. 200 ps ಪೀಕ್ ಪವರ್ ಹಾಗೂ 440nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ. ಇನೋವಾ ಕಾರಿಗಿಂತ ಕಾರ್ನಿವಲ್ ದುಬಾರಿಯಾಗಿದೆ. ನೂತನ ಕಾರ್ನಿವಲ್ ಬೆಲೆ 26 ರಿಂದ 30 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.