ಮೋದಿ ಹೊಸ ನೀತಿ -ಪೆಟ್ರೋಲ್ ಡೀಸಲ್ ಆಗಲ್ಲ, ಟ್ಯಾಕ್ಸಿ‌ಗೆ ಎಲೆಕ್ಟ್ರಿಕ್ ಕಾರು ಕಡ್ಡಾಯ!

By Web DeskFirst Published Jun 8, 2019, 4:01 PM IST
Highlights

ಪ್ರಧಾನಿ ನರೇಂದ್ರ ಮೋದಿ ನೇೃತ್ವದ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೆ ತರುತ್ತಿದೆ. ನೂತನ ಯೋಜನೆ ಪ್ರಕಾರ ವಾಣಿಜ್ಯ ಉಪಯೋಗಕ್ಕೆ ಬಳಸುವ ಕಾರುಗಳ ಎಲೆಕ್ಟ್ರಿಕ್ ಕಾರುಗಳಾಗಿರಬೇಕು. ಡೀಸೆಲ್ ಅಥವಾ ಪೆಟ್ರೋಲ್ ಕಾರು ರಸ್ತೆಗಿಳಿಯುವಂತಿಲ್ಲ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

ನವದೆಹಲಿ(ಜೂ.08): ಪೆಟ್ರೋಲ್, ಡೀಸೆಲ್ ಕಾರನ್ನು ವಾಣಿಜ್ಯ ಬಳಕೆಗೆ ಬಳಸುತ್ತಿದ್ದಂತೆ ಇನ್ಮುಂದೆ ಸಾಧ್ಯವಿಲ್ಲ. ಟ್ಯಾಕ್ಸಿ ಸೇರಿದಂತೆ ವಾಣಿಜ್ಯ ಬಳಕೆಗೆ ಹೆಚ್ಚಾಗಿ ಡೀಸೆಲ್ ಕಾರು ಬಳಸುತ್ತಾರೆ. ಇದೀಗ ಹೊಸ ಯೋಜನೆ ಜಾರಿಗೆ ಬರುತ್ತಿದೆ. ಟ್ಯಾಕ್ಸಿ, ಕ್ಯಾಬ್ ಸೇರಿದಂತೆ ವಾಣಿಜ್ಯ ಉಪಯೋಗಕ್ಕೆ ಎಲೆಕ್ಟ್ರಿಕ್ ಕಾರು ಮಾತ್ರ ಬಳಕೆ ಮಾಡಬೇಕು. ಡೀಸೆಲ್, ಪೆಟ್ರೋಲ್ ಕಾರುಗಳನ್ನು ಬಳಸುವಂತಿಲ್ಲ.

ಇದನ್ನೂ ಓದಿ: ಅಂಬಾನಿ ಆಫೀಸ್ ಹೋಗಲು ಬೇಕು 14 ಕೋಟಿ ಮೌಲ್ಯದ ಬೆಂಗಾವಲು ಕಾರು!

ಕೇಂದ್ರ ಸರ್ಕಾರ ಹೊಸ ನಿಯಮದ ಕರಡು ರೆಡಿಯಾಗಿದೆ. ಶೀಘ್ರದಲ್ಲೇ ಹೊಸ ನಿಯಮ ಮಂಡನೆಯಾಗಲಿದೆ. ನೂತನ ನಿಯಮದ ಪ್ರಕಾರ 2026ರಿಂದ ಟ್ಯಾಕ್ಸಿ, ಕ್ಯಾಬ್ ಸೇರಿದಂತೆ ವಾಣಿಜ್ಯ ಬಳಕೆಗೆ ಎಲೆಕ್ಟ್ರಿಕ್ ಕಾರು ಉಪಯೋಗಿಸಿಬೇಕು. ಪೆಟ್ರೋಲ್ ಹಾಗೂ ಡೀಸೆಲ್ ಕಾರು ಬಳಸುವಂತಿಲ್ಲ. 2023ರಿಂದ ವಾಣಿಜ್ಯ ಸ್ಕೂಟರ್ ಹಾಗೂ ಬೈಕ್ ಎಲೆಕ್ಟ್ರಿಕ್ ಮಯವಾಗಲಿದೆ. 

ಇದನ್ನೂ ಓದಿ: ಭಾರತೀಯರ ನಂಬಿಕಸ್ಥ ವಾಹನ ಯಾವುದು?- ಇಲ್ಲಿದೆ ಲಿಸ್ಟ್!

ಪ್ರಧಾನಿ ನರೇಂದ್ರ ಮೋದಿ, ನೀತಿ ಆಯೋಗ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಮಂತ್ರಿಗಳು ಮಹತ್ವದ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದಾರೆ. ಈ ಮೂಲಕ ಮಾಲಿನ್ಯ ನಿಯಂತ್ರಣ ಹಾಗೂ ಇಂದನ ಬಳಕೆ ಕಡಿಮೆ ಮಾಡಲು ಭಾರತ ದಿಟ್ಟ ಹೆಜ್ಜೆ ಇಡಲು ನಿರ್ಧರಿಸಿದೆ. ಸದ್ಯ ಡೀಸೆಲ್ ಹಾಗೂ ಪೆಟ್ರೋಲ್ ಕಾರಿನ ಮೂಲಕ ಬಾಡಿಗೆ ಅಥವಾ ವಾಣಿಜ್ಯ ಉಪಯೋಗ ಮಾಡುತ್ತಿರುವವರಿಗೆ ಸಬ್ಸಿಡಿ ಮೂಲಕ ಎಲೆಕ್ಟ್ರಿಕ್ ಕಾರು ನೀಡುವ ಯೋಜನೆ ಕೂಡ  ಹಾಕಿಕೊಂಡಿದೆ.
 

click me!