ಭಾರತದಲ್ಲಿ ಹಲವು ಕಾರು ಕಂಪನಿಗಳಿವೆ. ಇದರಲ್ಲಿ ಜನರ ನಂಬಿಕಸ್ಥ ವಾಹನ ಯಾವುದು? TRA ನಡೆಸಿದ ಸಮೀಕ್ಷೆಯಲ್ಲಿ ಭಾರತದ ನಂಬಿಕಸ್ಥ ಕಾರು ಯಾವುದು ಅನ್ನೋದು ಬಹಿರಂಗವಾಗಿದೆ.
ನವದೆಹಲಿ(ಜೂ.08): ಭಾರತದ ಆಟೋಮೊಬೈಲ್ ಕ್ಷೇತ್ರ ಹಲವು ಬದಲಾವಣೆ ಕಂಡಿದೆ. ವಿಶೇಷವಾಗಿ 2019ರಿಂದ ಕಟ್ಟು ನಿಟ್ಟಿನ ನಿಯಮಗಳು ಜಾರಿಯಾಗಿದೆ. ಇತ್ತ ಹಲವು ವಿದೇಶಿ ಕಂಪನಿಗಳು ಇದೇ ಮೊದಲ ಬಾರಿಗೆ ಭಾರತದಲ್ಲಿ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಇದರ ಬೆನ್ನಲ್ಲೇ ಭಾರತದಲ್ಲಿರುವ ಅತ್ಯಂತ ನಂಬಿಕಸ್ಥ ವಾಹನದ ಲಿಸ್ಟ್ ಪ್ರಕಟಗೊಂಡಿದೆ.
ಇದನ್ನೂ ಓದಿ: ಅಂಬಾನಿ ಆಫೀಸ್ ಹೋಗಲು ಬೇಕು 14 ಕೋಟಿ ಮೌಲ್ಯದ ಬೆಂಗಾವಲು ಕಾರು!
undefined
ಬ್ರ್ಯಾಂಡ್ ಟ್ರಸ್ಟ್ ರಿಪೋರ್ಟ್ 2019ರ ಪ್ರಕಾರ ಜೀಪ್ ಭಾರತದ ಅತ್ಯಂತ ನಂಬಿಕಸ್ಥ ವಾಹನ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಭಾರತದಲ್ಲಿ ಗರಿಷ್ಠ ಕಾರು ಮಾರುಕಟ್ಟೆ ಹೊಂದಿರುವ ಮಾರುತಿ ಸುಜುಕಿ ಎರಡನೇ ಸ್ಥಾನದಲ್ಲಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಜೀಪ್ ಭಾರತದ ನಂಬಿಕಸ್ಥ ವಾಹನವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: ಸಿಎಂ ಜಗನ್ ಮೋಹನ್ ರೆಡ್ಡಿಗೆ ಸಪೋರ್ಟ್- ಬೆಂಬಲಿಗರ ಕಾರು ಸೀಝ್!
ಫಿಯೆಟ್ ಕ್ರಿಸ್ಲರ್ ಆಟೋಮೊಬೈಲ್ ಕಂಪನಿಯ ಜೀಪ್ ವಾಹನಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಜೀಪ್ ಕಂಪಾಸ್, ಜೀಪ್ ರಾಂಗ್ಲರ್, ಜೀಪ್ ಗ್ರ್ಯಾಂಡ್ ಚೆರೋಕಿ ವಾಹನ ಭಾರತದಲ್ಲಿ ಗರಿಷ್ಠ ಮಾರಾಟವಾಗಿದೆ. ಜೀಪ್ ಕಂಪಾಸ್ ವಾಹನ ಭಾರತದ ಅತ್ಯಂತ ಸ್ಟೈಲೀಶ್ SUV ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.