ಬೈಕರ್ಸ್‌ಗೆ ಏರ್‌ಬ್ಯಾಕ್ ಜಾಕೆಟ್- ಬಿದ್ದರೂ ರೈಡರ್ ಸೇಫ್!

By Web Desk  |  First Published Jun 8, 2019, 1:48 PM IST

ಬೈಕ್ ಅಥವೂ ಸ್ಕೂಟರ್ ರೈಡರ್‌ಗಳ ಸುರಕ್ಷತೆಗೆ ನೂತನ ಜಾಕೆಟ್ ಮಾರುಕಟ್ಟೆಗೆ ಬಂದಿದೆ. ಈ ಜಾಕೆಟ್ ಧರಿಸಿದರೆ ಯಾವುದೇ ಅಪಘಾತದಲ್ಲೂ ರಕ್ಷಣೆ ಒದಿಗಿಸಲಿದೆ. 


ಅಹಮ್ಮದಾಬಾದ್(ಜೂ.08): ಬೈಕ್ ಹಾಗೂ ಸ್ಕೂಟರ್ ರೈಡರ್‌ಗಳು ಸ್ಕಿಡ್ ಆಗಿ ಬಿದ್ದರೂ ಹೆಚ್ಚಿನ ಗಾಯಗಳಾಗುತ್ತೆ. ಅಪಘಾತದಲ್ಲೂ ರೈಡರ್‌ಗಳು ಹೆಚ್ಚಿನ ನೋವು ಅನುಭವಿಸಿದ್ದಾರೆ. ಇದಕ್ಕಾಗಿ ಇದೀಗ ಹೊಸ ಜಾಕೆಟ್ ಬಿಡುಗಡೆ ಮಾಡಲಾಗಿದೆ. ಏರ್‌ಬ್ಯಾಕ್ ಹೊಂದಿರುವ ಈ ಜಾಕೆಟ್ ಧರಿಸಿದರೆ ಕಳಗೆ ಬಿದ್ದರೂ ಯಾವುದೇ ಗಾಯವಾಗಲ್ಲ.

ಇದನ್ನೂ ಓದಿ: ಕಡಿಮೆ ಬೆಲೆ, ಗರಿಷ್ಠ ಮೈಲೈಜ್ BattRE ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

Latest Videos

undefined

ಅಹಮ್ಮದಾಬಾದ್‌ನ ಫ್ಯಾಶನ್ ಟೆಕ್ನಾಲಜಿ ಕಾಲೇಜಿನ ಪ್ರಗತಿ ಶರ್ಮಾ ನೂತನ ಜಾಕೆಟ್ ನಿರ್ಮಿಸಿದ್ದಾರೆ. ಪ್ರಗತಿ  ಗೆಳೆಯ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದ. ಸಣ್ಣ ಗಾಯ ಪ್ರಗತಿ ಗೆಳೆಯನ ಪ್ರಾಣವನ್ನೇ ಕಸಿದುಕೊಂಡಿತ್ತು. ಹೀಗಾಗಿ ಪ್ರಗತಿ ತನ್ನ ಕಾಲೇಜು ಪ್ರಾಜೆಕ್ಟ್‌ನಲ್ಲಿ ರೈಡರ್‌ಗಳ ಸುರಕ್ಷತೆಗೆ ಜಾಕೆಟ್ ನಿರ್ಮಿಸಲು ಮುಂದಾದರು. ಇದೀಗ ಪ್ರಗತಿ ಅತ್ಯುತ್ತಮ ಜಾಕೆಟ್ ಬಿಡುಗಡೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇದನ್ನೂ ಓದಿ: ಕಡಿಮೆ ಬೆಲೆಯ ಬಜಾಜ್ ಪ್ಲಾಟಿನ 110 H-ಗೇರ್ ಬೈಕ್ ಬಿಡುಗಡೆ!

ಜಾಕೆಟ್ ಒಳಗಡೆ ಏರ್‌ಬ್ಯಾಕ್ ಇದೆ. ಜೊತೆಗೆ ಮೊಣ ಕೈ ಸೇರಿದಂತೆ ದೇಹದ ಮೂಳೆಗಳಿಗೆ ರಕ್ಷಣೆ ನೀಡಬಲ್ಲ ವಿಧಾನದಲ್ಲಿ ಜಾಕೆಟ್ ನಿರ್ಮಿಸಲಾಗಿದೆ. ಕಾಲೇಜು ಆಡಳಿತ ಮಂಡಳಿ ಕೂಡ ಪ್ರಗತಿ ಕಾರ್ಯಕ್ಕೆ ಶಹಬ್ಬಾಶ್ ನೀಡಿದೆ. ಇದೀಗ ನೂತನ ಜಾಕೆಟ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಪ್ರಗತಿ ಶರ್ಮಾ ಚಿಂತನೆ ನಡೆಸಿದ್ದಾರೆ.

click me!