
ಇಲೆಕ್ಟ್ರಿಕ್ ವಸ್ತುಗಳಿಗೆ ವ್ಯಾಲಿಡಿಟಿ ಕಡಿಮೆ ನೀವು ಎಷ್ಟೇ ದುಬಾರಿಯಾದ ಇಲೆಕ್ಟ್ರಿಕ್ ವಸ್ತುಗಳನ್ನು ಖರೀದಿಸಿದರು ವರ್ಷಗಳು ಉರುಳಿದಂತೆ ಅವುಗಳ ಗುಣಮಟ್ಟ ಕಡಿಮೆಯಾಗುತ್ತಾ ಸಾಗುತ್ತದೆ. ಅವುಗಳ ಬ್ಯಾಟರಿ ಹಾಳಾದರೆ ಕತೆ ಮುಗಿದಂತೆ. ಇನ್ನು ನೀರಲ್ಲಿ ಮುಳುಗಡೆಯಾದರೆ ಗತಿ ಅಧೋಗತಿ. ಅದು ಸ್ಕೂಟರ್ ಆದರೂ ಸರಿ ಬೈಕ್ ಕಾರು, ಬಸ್ ಆದರೂ ಸರಿ. ಇಲೆಕ್ಟ್ರಿಕ್ ವಾಹನಗಳ ಬಗ್ಗೆ ಅನೇಕರು ಹಲವು ದೂರುಗಳನ್ನು ಹೇಳಿಕೊಂಡಿದ್ದಾರೆ. ಆದರೆ ಡಿಸೇಲ್ ಚಾಲಿತ ವಸ್ತುಗಳು ಹಾಗಲ್ಲ, ಅವುಗಳಿಗಿರುವ ತಾಕತ್ತೇ ಬೇರೆ ಹಲವು ವರ್ಷಗಳ ಕಾಲ ಅದು ಚೆನ್ನಾಗಿ ಕೆಲಸ ಮಾಡುತ್ತದೆ ಅದರ ಜೊತೆಗೆ ವಾಪಸ್ ಮಾರಾಟ ಮಾಡಿದರು ಒಳ್ಳೆಯ ಬೆಲೆಗೆ ಹೋಗುತ್ತದೆ. ಆದರೆ ಇಲೆಕ್ಟ್ರಿಕ್ ವಾಹನಗಳು ಹಾಗಲ್ಲ, ಆದರೂ ಡಿಸೇಲ್ ಪೆಟ್ರೋಲ್‌ಗೆ ಕೊಡುವ ದುಡ್ಡನ್ನು ಉಳಿತಾಯ ಮಾಡಬಹುದು ಎಂಬ ಉದ್ದೇಶದಿಂದ ಮಾಲಿನ್ಯ ನಿಯಂತ್ರಣದ ಉದ್ದೇಶದಿಂದ ಸರ್ಕಾರವೂ ಈ ವಾಹನಗಳನ್ನು ಪ್ರಮೋಟ್ ಮಾಡುತ್ತಿದೆ. ಆದರೆ ಇಲ್ಲೊಂದು ಕಡೆ ಇಲೆಕ್ಟ್ರಿಕ್ ಬಸ್‌ನ್ನು ಚಾರ್ಜ್ ಮಾಡುವುದಕ್ಕೆ ಡಿಸೇಲ್ ಬಳಸುವ ಜನರೇಟರ್ ಅನ್ನು ಆನ್ ಮಾಡಲಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಹಾಗಿದ್ದರೆ ಇಲೆಕ್ಟ್ರಿಕ್ ಬಸ್‌ನ ಅಗತ್ಯವೇನು ಎಂಬ ಪ್ರಶ್ನೆ ಮೂಡಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವೀಡಿಯೋ
iridiuminsight ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ವಿಡಿಯೋದಲ್ಲಿ ಯುವಕರೊಬ್ಬರು ಇಲೆಕ್ಟ್ರಿಕ್ ಬಸ್ ಚಾರ್ಜ್ ಆಗೋದಕ್ಕಾಗಿ ಡಿಸೇಲ್ ಚಾಲಿತ ಜನರೇಟರ್ ಆನ್ ಮಾಡಿರೋದನ್ನು ತೋರಿಸಿದ್ದಾರೆ. ಇಲೆಕ್ಟ್ರಿಕ್ ವಾಹನಗಳನ್ನು ಸಾಮಾನ್ಯವಾಗಿ ವಾಯುಮಾಲಿನ್ಯ ಮುಕ್ತ ವಾಹನಗಳು ಎಂದೇ ಪರಿಗಣಿಸಲಾಗಿದೆ. ಆದರೆ ಇದರ ಚಾರ್ಜಿಂಗ್ ಮಾಡುವುದಕ್ಕೆ ಇಲ್ಲಿ ಡೀಸೆಲ್ ಚಾಲಿತ ಜನರೇಟರ್ ಆನ್ ಮಾಡಿರೋದನ್ನು ನೋಡಿ ಜನ ಅಚ್ಚರಿಪಟ್ಟಿದ್ದು, ಹಾಗಿದ್ದರೆ ಈ ಇಲೆಕ್ಟ್ರಿಕ್ ವಾಹನಗಳ ಮೂಲ ಉದ್ದೇಶವಾದರು ಏನು ಎಂದು ವೀಡಿಯೋ ನೋಡಿದ ಜನ ಪ್ರಶ್ನೆ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ನೇರವಾಗಿ ಬಸ್ ಹೊಗೆ ಬಿಡಲ್ಲ ಎಂಬುದನ್ನು ಬಿಟ್ಟರೆ ಇಲ್ಲಿ ಚಾರ್ಜಿಂಗ್‌ಗಾಗಿ ಡೀಸೇಲ್ ಬಳಸುತ್ತಿರುವ ಜನರೇಟರ್‌ನಿಂದ ಹೊಗೆ ಪರಿಸರಕ್ಕೆ ಸೇರುತ್ತಿದೆ.
ಇದನ್ನೂ ಓದಿ: ಚಲಿಸುವ ರೈಲಿನಲ್ಲಿ ಅಸ್ವಸ್ಥಗೊಂಡ ಮಗುವಿಗೆ ಸಹಾಯ ಮಾಡಿದ್ದಕ್ಕಾಗಿ ಭಾರತೀಯ ರೈಲ್ವೆಗೆ ಅಮ್ಮನ ಧನ್ಯವಾದ
ಇರುವ ಸವಲತ್ತುಗಳನ್ನು ಚಾರ್ಜ್ ಮಾಡಲು ಆಗದೇ ಇರುವ ಮೂಲ ಸೌಕರ್ಯದ ಕೊರತೆಯ ಬಗ್ಗೆ ಜನ ಪ್ರಶ್ನೆ ಮಾಡಿದ್ದಾರೆ. ಹಲವಾರು ಪ್ರದೇಶಗಳಲ್ಲಿ, ವಿಶೇಷವಾಗಿ ದೊಡ್ಡ ಪ್ರಮಾಣದ ವಿದ್ಯುತ್ ಚಾಲಿತ ವಾಹನಗಳು ಈಗಷ್ಟೇ ರಸ್ತೆಗಿಳಿದಿರುವ ಸಮಯದಲ್ಲಿ ಸ್ಥಿರ ಮತ್ತು ಹೆಚ್ಚಿನ ಸಾಮರ್ಥ್ಯದ ಚಾರ್ಜಿಂಗ್ ಗ್ರಿಡ್ ಸಂಪರ್ಕಗಳು ಇರುವುದಿಲ್ಲ. ಡೀಸೆಲ್ ಚಾಲಿತ ಜನರೇಟರ್ ಬದಲಾಗಿ ಜಲವಿದ್ಯುತ್ ಅಥವಾ ಶೌರಶಕ್ತಿ, ಪವನಶಕ್ತಿಯನ್ನು ಬಳಸಿ ಬಸ್ ಚಾರ್ಜಿಂಗ್ ಮಾಡಿದ್ದಾರೆ. ಈ ಇಲೆಕ್ಟ್ರಿಕ್ ವಾಹನಗಳ ಮೂಲ ಉದ್ದೇಶವಾದರೂ ಪೂರ್ಣಗೊಳ್ಳುತ್ತಿತ್ತು. ಆದರೆ ಇಲ್ಲಿ ಡಿಸೇಲ್ ಬಳಸುತ್ತಿರುವುದರಿಂದ ಈ ಇಲೆಕ್ಟ್ರಿಕ್ ಬಸ್ ಕೇವಲ ಹೆಸರಿಗಷ್ಟೇ ಪರಿಸರ ಸ್ನೇಹಿ ಅನಿಸಿದೆ.
ಇದನ್ನೂ ಓದಿ: ಹಲ್ಲು ಕೀಳಿಸಲು ಹೋಗಿ ಮಹಿಳೆ ಪ್ರಾಣನೇ ಹೋಯ್ತು: ಘಟನೆಯ ಬಳಿಕ ಡೆಂಟಿಸ್ಟ್ ಪರಾರಿ
ವೀಡಿಯೋ ನೋಡಿದ ಅನೇಕರು ಡೀಸೆಲ್ ತಾಕತ್ತಿಗೆ ಜೈ ಎಂದಿದ್ದಾರೆ. ಕೊನೆಗೂ ಡೀಸೆಲ್ ಗತಿಯಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ ಅಲ್ಲಿರುವ ಡೀಸೆಲ್ ಜನರೇಟರ್‌ಗಳು ಮುಖ್ಯವಾಗಿ ಬ್ಯಾಕಪ್ ಪವರ್‌ಗಾಗಿ ಮತ್ತು ತುರ್ತು ಪರಿಸ್ಥಿತಿಗಳಿಗಾಗಿವೆ. ನಿಮಗೆ ಎಂಜಿನಿಯರ್ ಡೊಮೇನ್‌ನ ಪರಿಚಯವಿಲ್ಲದಂತೆ ಕಾಣುತ್ತಿದೆ. ಮತ್ತು ಭವಿಷ್ಯದಲ್ಲಿ ಆ ಜನರೇಟರ್ ಅನ್ನು BESS ನಿಂದ ಬದಲಾಯಿಸಲಾಗುತ್ತದೆ ಎಂದು ಈ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್‌ಗಳಲ್ಲಿ ಅನೇಕರು ಜನರೇಟರ್‌ಗಳನ್ನು ಪವರ್ ಕಟ್ ಆದ ಸಮಯದಲ್ಲಿ ಮಾತ್ರ ಬಳಸುತ್ತಾರೆ ಎಂದು ಕಾಮೆಂಟ್ ಮಾಡಿದ್ರೆ ಮತ್ತೆ ಕೆಲವರು ಇವರು ನೋಡುಗರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.