ಮಾರುತಿ ಎರ್ಟಿಗಾ ಟೂರ್ M ಡೀಸೆಲ್ ಕಾರು ಬಿಡುಗಡೆ!

By Web Desk  |  First Published Oct 14, 2019, 2:02 PM IST

ಮಾರುತಿ ಎರ್ಟಿಗಾ ಕಾರಿನ ಯಶಸ್ಸಿನ ಬೆನ್ನಲ್ಲೇ ಇದೀಗ ಎರ್ಟಿಗೂ ಟೂರ್ M ಡೀಸೆಲ್ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ವಿಶೇಷತೆ ಹಾಗೂ ಬೆಲೆ ವಿವರ ಇಲ್ಲಿದೆ.


ನವದೆಹಲಿ(ಅ.14): ಮಾರುತಿ ಸುಜುಕಿ ಬಿಡುಗಡೆ ಮಾಡಿದ ನೂತನ ಎರ್ಟಿಗಾ ಕಾರು ಯಶಸ್ಸು ಸಾಧಿಸಿದೆ. ಇದೀಗ ಎರ್ಟಿಗಾ ಟೂರ್ M ಕಾರು ಮಾರುಕಟ್ಟೆ ಪ್ರವೇಶಿಸಿದೆ. ಈಗಾಗಲೇ ಎರ್ಟಿಗೂ ಟೂರ್ M ಪೆಟ್ರೋಲ್ ಹಾಗೂ CNG ವೇರಿಯೆಂಟ್ ಬಿಡುಗಡೆಯಾಗಿದೆ. ಇದೀಗ ಡೀಸೆಲ್ ವೇರಿಯೆಂಟ್ ಲಾಂಚ್ ಆಗಿದೆ. ನೂತನ ಕಾರಿನ ಬೆಲೆ 9.8 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ).

ಇದನ್ನೂ ಓದಿ: 10 ದಿನದಲ್ಲಿ 10 ಸಾವಿರ ಬುಕಿಂಗ್; ದಾಖಲೆ ಬರೆದ ಮಾರುತಿ S ಪ್ರೆಸ್ಸೋ!

Tap to resize

Latest Videos

undefined

ಎರ್ಟಿಗಾ ಟೂರ್ M ಪೆಟ್ರೋಲ್ ಎಂಜಿನ್ ಕಾರಿಗೆ 8 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಹಾಗೂ CNG ಕಾರಿಗೆ 8.83 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ಮಾರುತಿ ಎರ್ಟಿಗಾ ಟೂರ್ M ಡೀಸೆಲ್ ವೇರಿಯೆಂಟ್ ಹಾಗೂ ಎರ್ಟಿಗಾ  VDi ಟ್ರಿಮ್ ವೇರಿಯೆಂಟ್‌ಗೂ  ಯಾವುದೇ ಬದಲಾವಣೆ ಇಲ್ಲ. ಆದರೆ ಎರ್ಟಿಗಾ ಟೂರ್ M ಕಾರು, ಟ್ರಿಮ್ ವೇರಿಯೆಂಟ್ ಕಾರಿಗಿಂತ 5,000  ರೂಪಾಯಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ: 3 ತಿಂಗಳಲ್ಲಿ ಕಿಯಾ ಸೆಲ್ಟೋಸ್ ದಾಖಲೆ; SUV ಕಾರಿಗೆ ಭಾರಿ ಬೇಡಿಕೆ!

ನೂತನ ಎರ್ಟಿಗಾ ಟೂರ್ M ಡೀಸೆಲ್ ಕಾರು  1.5-ಲೀಟರ್ DDiS 225 ಟರ್ಬೋಚಾರ್ಜ್ ಮೋಟಾರ್ ಹೊಂದಿದ್ದು,  95 hp ಪವರ್ ಹಾಗೂ 225 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  6-ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಹೊ1 ಹೊಂದಿದೆ.  ಪ್ರತಿ ಲೀಟರ್ ಡೀಸೆಲ್‌ಗೆ  24.2 kmpl ಮೈಲೇಜ್ ನೀಡಲಿದೆ.

ಕಾರು ಮಾರಾಟ ಕುಸಿತದಲ್ಲೂ ಮಾರುತಿ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದೆ. ಇತ್ತೀಚೆಗೆ ಮಾರುತಿ, ಎರ್ಟಿಗಾ ಬೇಸ್ XL6 ಕಾರು ಬಿಡುಗಡೆ ಮಾಡಿದೆ. 

ಅಕ್ಟೋಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!