ಪ್ರತಿ ದಿನ ಟ್ರಾಫಿಕ್ ಫೈನ್ ಸದ್ದು ಮಾಡುತ್ತಿದೆ. ಇತ್ತೀಚೆಗೆ 1.41 ಲಕ್ಷ ರೂಪಾಯಿ ಫೈನ್ ದೇಶದೆಲ್ಲೆಡೆ ಸುದ್ದಿಯಾಗಿತ್ತು. ಇದೀಗ ಈ ದಾಖಲೆ ಪುಡಿ ಪುಡಿಯಾಗಿದೆ. ಕಾರಣ ಇದೀಗ ಚಾಲಕನಿಗೆ 2 ಲಕ್ಷ ರೂಪಾಯಿ ದಂಡ ಹಾಕಲಾಗಿದೆ. ದಾಖಲೆ ಮೊತ್ತದ ಚಲನ್ ಪಡೆದ ಚಾಲಕ ಕಂಗಾಲಾಗಿದ್ದಾನೆ.
ದೆಹಲಿ(ಸೆ.13): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ ಪ್ರತಿ ದಿನ ವಾಹನ ಸಾವರರು ದಾಖಲೆಯ ಮೊತ್ತ ದಂಡ ರೂಪದಲ್ಲಿ ಪಾವತಿಸುತ್ತಿದ್ದಾರೆ. ಇತ್ತೀಚೆಗೆ ಟ್ರಕ್ ಡ್ರೈವರ್‌ಗೆ ಹಲವು ನಿಯಮ ಉಲ್ಲಂಘನೆಗಾಗಿ 1.41 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಈ ದಾಖಲೆ ಬ್ರೇಕ್ ಮಾಡಲಾಗಿದೆ. ದೆಹಲಿಯಲ್ಲಿ ಲಾರಿ ಚಾಲನಕನಿಗೆ ಬರೋಬ್ಬರಿ 2,00,500 ರೂಪಾಯಿ ದಂಡ ಹಾಕಲಾಗಿದೆ.
ಇದನ್ನೂ ಓದಿ: ಓವರ್‌ಲೋಡ್ : ಭಗವಾನ್ ರಾಮನಿಗೆ 1.50 ಲಕ್ಷ ರು. ದಂಡ!
ರೋಹಿನಿ ಬಳಿ ಟ್ರಕ್ ತಡೆದು ತಪಾಸಣೆ ಮಾಡಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಕಾರಣ ಟ್ರಕ್ ಚಾಲಕ ಹಾಗೂ ಟ್ರಕ್ ಬಳಿ ಯಾವುದೇ ದಾಖಲೆಗಳಿಲ್ಲ. 10ಕ್ಕೂ ಹೆಚ್ಚು ನಿಯಮ ಉಲ್ಲಂಘನೆಯಿಂದಾಗಿ ಒಟ್ಟು 2 ಲಕ್ಷ ರೂಪಾಯಿ ದಂಡ ಹಾಕಲಾಗಿದೆ. ವಾಹನ ಫಿಟ್ನೆಸ್ ಸರ್ಟಿಫಿಕೇಟ್ ನಿಯಮ ಉಲ್ಲಂಘನೆ, ಪರ್ಮಿಟ್ ನಿಯಮ ಉಲ್ಲಂಘನೆ, ರಿಜಿಸ್ಟ್ರೇಶನ್ ಇಲ್ಲದೆ ವಾಹನ ಚಾಲನೆ, ವಿಮೆ ರಹಿತ ಕಟ್ಟಡ ಸಾಮಾಗ್ರಿ ಸಾಗಣೆಗೆ, ಡ್ರೈವಿಂಗ್ ಲೈಲೆನ್ಸ್ ಇಲ್ಲದೆ ವಾಹನ ಚಾಲನೆ, ವಿಮೆ ರಹಿತ ವಾಹನ, ಸೀಟ್ ಬೆಲ್ಟ್ ರಹಿತ, ಎಮಿಶನ್ ಟೆಸ್ಟ್ ನಿಯಮ ಉಲ್ಲಂಘನೆ, ನಗದಿತ ಪ್ರಮಾಣಕ್ಕಿಂತ ಹೆಚ್ಚಿನ ಭಾರ ಸಾಗಾಣೆ ಸೇರಿದಂತೆ ಹಲವು ನಿಯಮ ಉಲ್ಲಂಘಿಸಲಾಗಿದೆ.
ಇದನ್ನೂ ಓದಿ: ಹವಾಯಿ ಚಪ್ಪಲ್, ಸ್ಲಿಪ್ಪರ್ ಹಾಕಿ ದ್ವಿಚಕ್ರ ವಾಹನ ಓಡಿಸಿದರೆ ಫೈನ್!
ಹೊಸ ಟ್ರಾಫಿಕ್ ನಿಯಮದ ಜೊತೆ ದೆಹಲಿಯಲ್ಲಿ ಜಾರಿ ಇರುವ ಹಸಿರು ನ್ಯಾಯಾಧಿಕರಣ ನಿಯಮ ಉಲ್ಲಂಘನೆ ಫೈನ್ ಕೂಡ ಹಾಕಲಾಗಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕೆಲ ನಿಯಮ ಜಾರಿಗೆ ತಂದಿದೆ. ಈ ನಿಯಮ ಉಲ್ಲಂಘನೆಗೆ ಟ್ರಕ್ ಡ್ರೈವರ್‌ಗೆ 20,000 ರೂಪಾಯಿ ದಂಡ ಹಾಕಲಾಗಿದೆ. ಒಟ್ಟು 2 ಲಕ್ಷ ರೂಪಾಯಿ ದಂಡ ನೋಡಿದ ಟ್ರಕ್ ಡ್ರೈವರ್ ದಂಗಾಗಿದ್ದಾನೆ.