ಟ್ಯಾಕ್ಸಿ ಸೇವಾ ಕಂಪನಿ ಓಲಾ ಇದೀಗ ಬಾಡಿಗೆ ಆಧಾರದಡಿ ಗ್ರಾಹಕರ ಚಾಲನೆಗೆ ಕಾರು ನೀಡಲು ಸಿದ್ಧವಾಗಿದೆ. ಇದಕ್ಕೆ ಲೈಸೆನ್ಸ್ ಕುಡ ಪಡೆದುಕೊಂಡಿದೆ.
ಬೆಂಗಳೂರು [ಸೆ.12]: ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಕಂಪನಿ ಓಲಾ ಇದೀಗ ಬಾಡಿಗೆ ಆಧಾರದಡಿ ಗ್ರಾಹಕರ ಚಾಲನೆಗೆ ಕಾರು ನೀಡಲು (ಸೆಲ್ಪ್ ಡ್ರೈವ್ ರೆಂಟಲ್ ಕಾರ್ ) ರಾಜ್ಯ ಸಾರಿಗೆ ಇಲಾಖೆಯಿಂದ ಲೈಸೆನ್ಸ್ ಪಡೆದುಕೊಂಡಿದೆ.
ಗ್ರಾಹಕರು ನಗರದೊಳಗೆ ಅಥವಾ ಅಂತರ್ ನಗರ ಪ್ರಯಾಣಕ್ಕೆ ಈ ಕಾರುಗಳನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ಇದರಲ್ಲಿ ಕಡಿಮೆ ಅವಧಿ, ಧೀರ್ಘಾವಧಿ ಹಾಗೂ ಕಾರ್ಪೊರೇಟ್ ಮಾದರಿಯಲ್ಲಿ ಕಾರು ಬಾಡಿಗೆಗೆ ನೀಡಲು ಮುಂದಾಗಿದೆ. ಈ ಸೇವೆಗಾಗಿ 10 ಸಾವಿರ ಕಾರುಗಳನ್ನು ನಿಯೋಜಿಸಿದೆ. ಹ್ಯಾಚ್‌ಬಾಕ್, ಸೀಡನ್ ಹಾಗೂ ಸ್ಪೋರ್ಟ್ ಮಾದರಿಯ ಕಾರುಗಳು ಸೇವೆಗೆ ಲಭ್ಯವಾಗಲಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಓಲಾ ಈ ಸೇವೆಯ ಮೇಲೆ ಮುಂದಿನ ಎರಡು ವರ್ಷದಲ್ಲಿ 3500 ಸಾವಿರ ಕೋಟಿ (ಯುಎಸ್‌ಡಿ 500 ಮಿಲಿಯನ್) ಹೂಡಿಕೆ ಮಾಡಲು ಚಿಂತಿಸಿದೆ. ಅಲ್ಲದೆ, ಗ್ರಾಹಕರಿಗೆ ಹೊಸ ಮಾದರಿಯ ಕಾರಿಗಳ ಸೇವೆ ಒದಗಿಸುವ ಉದ್ದೇಶದಿಂದ ಕಾರು ಉತ್ಪಾದನೆಯ ಮುಂಚೂಣಿಯ ಕಂಪನಿಯಗಳಾದ ಬಿಎಂಡಬ್ಲ್ಯೂ, ಆಡಿ, ಮರ್ಸಿಡೀಜ್ ಸೇರಿದಂತೆ ಐಷಾರಾಮಿ ಕಾರು ಕಂಪನಿಗಳೊಂದಿಗೆ ಕೆಲಸ ಮಾಡಲು ನಿರ್ಧರಿಸಿದೆ