ಚೀನಾದಲ್ಲೂ 15 ತಿಂಗಳಲ್ಲಿ 14ನೇ ಬಾರಿ ಕಾರು ಮಾರಾಟ ಕುಸಿತ!

By Web Desk  |  First Published Sep 12, 2019, 1:45 PM IST

ಚೀನಾದಲ್ಲೂ 15 ತಿಂಗಳಲ್ಲಿ 14ನೇ ಬಾರಿ ಕಾರು ಮಾರಾಟ ಕುಸಿತ| ಕಾರುಗಳು, ಸ್ಪೋಟ್ಸ್‌ ಯುಟಿಲಿಟಿ ವೆಹಿಕಲ್‌, ಮಿನಿ ವ್ಯಾನುಗಳು, ವಿವಿದ್ದೋದ್ದೇಶ ವಾಹನಗಳ ಮಾರಾಟ ಆಗಸ್ಟ್‌ನಲ್ಲಿ ಶೇ.9.9ರಷ್ಟುಇಳಿಕೆ 


ನವದೆಹಲಿ[ಸೆ.12]: ಭಾರತದಲ್ಲಿ ಆಟೋ ಮೊಬೈಲ್‌ ಕ್ಷೇತ್ರ ಕುಸಿತ ಕಂಡ ಬೆನ್ನಲ್ಲೇ, ವಿಶ್ವದ ಅತಿದೊಡ್ಡ ಕಾರು ಮಾರುಕಟ್ಟೆಎನಿಸಿರುವ ಚೀನಾದಲ್ಲಿ ಕಾರುಗಳ ಮಾರಾಟ ಕುಸಿತ ಕಂಡಿದೆ. ಚೀನಾದ ಆಟೋಮೊಬೈಲ್‌ ಮಾರುಕಟ್ಟೆಕಳೆದ 15 ತಿಂಗಳಿನಲ್ಲಿ 14 ಬಾರಿ ಕುಸಿತ ಅನುಭವಿಸಿದೆ.

ಕಾರುಗಳು, ಸ್ಪೋಟ್ಸ್‌ ಯುಟಿಲಿಟಿ ವೆಹಿಕಲ್‌, ಮಿನಿ ವ್ಯಾನುಗಳು, ವಿವಿದ್ದೋದ್ದೇಶ ವಾಹನಗಳ ಮಾರಾಟ ಆಗಸ್ಟ್‌ನಲ್ಲಿ ಶೇ.9.9ರಷ್ಟುಇಳಿಕೆ ದಾಖಲಿಸಿದೆ ಎಂದು ಚೀನಾ ಪ್ಯಾಸೆಂಜರ್‌ ಕಾರ್‌ ಅಸೋಸಿಯೇಷನ್‌ ತಿಳಿಸಿದೆ.

Latest Videos

undefined

ವಾಹನ ಸೇಲ್‌ 2 ದಶಕಗಳಲ್ಲೇ ಅತ್ಯಂತ ಕನಿಷ್ಠ!

ಆರ್ಥಿಕ ಹಿಂಜರಿತ ಹಾಗೂ ಅಮೆರಿಕದ ಜೊತೆಗಿನ ವ್ಯಾಪಾರಿ ಕದನದಿಂದಾಗಿ ಕಾರು ಉತ್ಪಾದಕರು ಕಳೆದ ಮೂರು ದಶಕಗಳಲ್ಲೇ ಅತಿ ಹೆಚ್ಚಿನ ನಷ್ಟಅನುಭವಿಸಿದ್ದಾರೆ. ಚೀನಾದ ಅಗ್ರ ಎಸ್‌ಯುವಿ ತಯಾರಿಕಾ ಕಂಪನಿ ಗ್ರೇಟ್‌ ವಾಲ್‌ ಮೋಟಾರ್‌ನ ಲಾಭಾಂಶ ಶೇ.59ರಷ್ಟುಕುಸಿದಿದೆ. ಈ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಕಾರು ಖರಿದಿಗೆ ಇರುವ ನಿರ್ಬಂಧಗಳನ್ನು ಇನ್ನಷ್ಟುಸಡಿಲಿಸಿದೆ.

click me!