ಡಸ್ಟರ್, ಹುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500, ಮಾರುತಿ ಬ್ರೆಜ್ಜಾ ಸೇರಿದಂತೆ SUV ಕಾರಿಗೆ ಪ್ರತಿಸ್ಪರ್ಧಿ ನೀಡಬಲ್ಲ ನಿಸಾನ್ ಕಿಕ್ಸ್ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಬುಕಿಂಗ್ ಆರಂಭಗೊಂಡಿದ್ದು, ಜನವರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಸೂಪರ್ ನಿಸಾನ್ ಕಿಕ್ಸ್ ಕಾರಿನ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು(ಡಿ.22): 2019ರ ಜನವರಿ ಆರಂಭದಲ್ಲಿ ಭಾರತದ ಮಾರುಕಟ್ಟೆಗೆ ಜಪಾನ್ ಮೂಲದ ನಿಸಾನ್ ಕಿಕ್ಸ್ ಎಸ್‌ಯುವಿ ಕಾರು ಲಗ್ಗೆಯಿಡಲಿದೆ. ಎಂಟ್ರಿಗೂ ಮುನ್ನವೇ ಸದ್ದು ಮಾಡಲಾರಂಭಿಸಿದೆ. ಆಹ್ಲಾದಕರ ಡ್ರೈವಿಂಗ್, ವಿಪರೀತ ಸ್ಪೀಡ್‌ನಲ್ಲಿಯೂ ಅತ್ಯುತ್ತಮ ಹಿಡಿತ, ಅತ್ಯಾಧುನಿಕ ತಂತ್ರಜ್ಞಾನ, ವಾಹನ ಸವಾರರ ಸುರಕ್ಷತೆ ಈ ಕಾರಿನ ಹೈಲೈಟ್ಸ್. ಈ ‘ಕಿಕ್ಸ್’ ಸದ್ಯ ಮಾರುಕಟ್ಟೆಯಲ್ಲಿರುವ ಡಸ್ಟರ್, ಹುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500, ಮಾರುತಿ ಬ್ರೆಜ್ಜಾ ಮತ್ತಿತರ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
undefined
ಇದನ್ನೂ ಓದಿ: ಮೀತಿ ಮೀರಿದ ವೇಗ- ಮಹಾರಾಷ್ಟ್ರ ಸಿಎಂ ಕಾರಿಗೆ 13 ಸಾವಿರ ರೂಪಾಯಿ ದಂಡ!
ಸುರಕ್ಷತೆಗೆ ಮೊದಲ ಆದ್ಯತೆ
ನಿಸಾನ್ ಕಿಕ್ಸ್ ಸುರಕ್ಷತೆ ಹಾಗೂ ಭದ್ರತೆಯನ್ನು ಒದಗಿಸುವ ಅತ್ಯಾಧುನಿಕ ತಂತ್ರಜ್ಞಾನ ಎನ್‌ಐಎಂ: ನಿಸಾನ್ ಇಂಟಲಿಜೆಂಟ್ ಮೊಬಿಲಿಟಿ ಹೊಂದಿದೆ. ಇದರ ಮೂಲಕ ಕುಳಿತಲ್ಲಿಯೇ ವಾಹನವಿರುವ ಸ್ಥಳ ವಿವರ ಹಾಗೂ ಅದರ ವೇಗವನ್ನು ತಿಳಿಯಬಹುದು. ಅಷ್ಟೇ ಅಲ್ಲ ನಿಗದಿತ ಸಮಯ ಮೀರಿದಾಗ, ಅಪರಿಚಿತ ಸ್ಥಳ ಪ್ರವೇಶಿಸಿದಾಗ ಪರೋಕ್ಷವಾಗಿಯೇ ಜಿಯೋಫೆನ್ಸಿಂಗ್ ಅಲರ್ಟ್ ಸಿಸ್ಟಂ ಮೊಬೈಲ್‌ಗೆ ಮಾಹಿತಿ ರವಾನಿಸುತ್ತೆ. ಸುರಕ್ಷತೆಗಾಗಿ ಇದರಲ್ಲಿ ಮೂರು ಏರ್‌ಬ್ಯಾಗ್‌ಗಳಿವೆ. ಎಬಿಎಸ್, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಇಕೋ ಮೋಡ್, ಇಂಟಲಿಜೆಂಟ್ ಟ್ರೇಸ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಹೀಗೆಯೇ ಸುರಕ್ಷತೆಗಾಗಿ ಹಲವು ಆಪ್ಶನ್‌ಗಳಿವೆ.
ಇದನ್ನೂ ಓದಿ: ಕಾರು ಸ್ಟಾರ್ಟ್ ಆಗದಿರಲು ಇದೆ 7 ಸಾಮಾನ್ಯ ಕಾರಣ
ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದಂತಿದೆ!
ರಸ್ತೆ ಮಧ್ಯದಲ್ಲಿ ಹಾಕಲಾಗಿರುವ ವೇಗ ನಿಯಂತ್ರಕ ಉಬ್ಬು ತಗ್ಗುಗಳು ವಾಹನದ ಸೂಕ್ಷ್ಮ ಯಂತ್ರೋಪಕರಣಗಳಿಗೆ ತಗುಲದಂತೆ ನೆಲದಿಂದ ಸುಮಾರು 21ಸೆಮೀ ಮೇಲಕ್ಕಿದೆ. ವಾಹನದ ರಿವರ್ಸ್ ಗೇರ್ ಹಾಕುತ್ತಿದ್ದಂತೆ ತನ್ನ ನಾಲ್ಕು ಕ್ಯಾಮರಾಗಳ ಮೂಲಕ ಸುತ್ತಮುತ್ತಲಿನ 360ಡಿಗ್ರಿ ವ್ಯೂ 8 ಇಂಚಿನ ಟಚ್ ಸ್ಕ್ರೀನ್ ಮಾನಿಟರ್ ಮೇಲೆ ತೋರಿಸುತ್ತೆ.
ಈ ನಿಸಾನ್ ಕಿಕ್ಸ್ ಹಿಂಬದಿ ಸೀಟಿನ ಸವಾರರಿಗೂ ಎಸಿಯ ತಂಪು ತಲುಪುವಂಥ ವೆಂಟ್‌ಗಳನ್ನು ಹೊಂದಿದೆ. ಜೊತೆಗೆ ಅಂಗೈಯಲ್ಲೇ ವಾಹನದ ಬಹುಮುಖ್ಯ ಯಂತ್ರೋಪಕರಣಗಳ ಸ್ಥಿತಿಗತಿಗಳನ್ನು ತಿಳಿಯುವದಕ್ಕೂ ತಂತ್ರಜ್ಞಾನ ವ್ಯವಸ್ಥೆ ಇದರಲ್ಲಿದೆ. ನಮ್ಮ ಪ್ರಯಾಣದ ವಿವರಗಳಾದ ವಾಹನ ಚಲಾಯಿಸಿದ ಪರಿ, ಧನಾತ್ಮಕ ಹಾಗೂ ಋುಣಾತ್ಮಕ ಅಂಶಗಳನ್ನೂ ನೀಡುವ ಮೂಲಕ ನಮ್ಮ ಮುಂದಿನ ಪ್ರಯಾಣಕ್ಕೆ ಸೂಕ್ತ ಸಲಹೆಯನ್ನೂ ಪಡೆಯಬಹುದಾದ ತಂತ್ರಜ್ಞಾನವನ್ನು ನಿಸಾನ್ ಕಿಕ್ಸ್ ಹೊಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 3 ಜಾವಾ ಬೈಕ್ ಶೋ ರೂಂ ಆರಂಭ-ಖರೀದಿ ಇನ್ನೂ ಸುಲಭ!
ಐದು ಜನಕ್ಕೆ ಬೆಸ್ಟು
ರೆನಾಲ್ಟ್ ಡಸ್ಟರ್ ಕಾರಿನ ಮಾದರಿ, ರೆನಾಲ್ಟ್ ಕ್ಯಾಪ್ಚರ್‌ನ ವಿನ್ಯಾಸದಂತಿರುವ ನಿಸಾನ್ ಕಿಕ್ಸ್, ವಾಹನ ಸವಾರರಿಗೆ ಫಾರ್ಚೂನರ್ ರೈಡ್‌ನ ಅನುಭವ ನೀಡುತ್ತೆ. ಎಸ್‌ಯುವಿ ವಾಹನ ಪ್ರಿಯರಿಗೆ ಈ ಕಿಕ್ಸ್ ಇಷ್ಟವಾಗದೇ ಇರುವ ಚಾನ್ಸೇ ಇಲ್ಲ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆಕರ್ಷಕ ವಿನ್ಯಾಸ, ರೀಸನೇಬಲ್ ಬೆಲೆ ಇತ್ಯಾದಿಗಳನ್ನು ನೋಡಿದರೆ ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಎಲ್ಲ ಸಾಧ್ಯತೆ ನಿಚ್ಚಳವಾಗಿದೆ. ಮಲ್ಟಿಲೇಯರ್ ಡ್ಯುಯಲ್ ಟೋನ್ ಇಂಟೀರಿಯರ್ ಕಾರ್ಬನ್ ಫೈಬರ್ ಫಿನಿಶಿಂಗ್, ಸಾಫ್ಟ್‌ಟಚ್ ಡ್ಯಾಶ್‌ಬೋರ್ಡ್, ವಿಶೇಷ ಲೆದರ್ ಕೋಟಿಂಗ್ ಸೀಟುಗಳು, ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಆಮ್‌ರ್ ರೆಸ್ಟ್, ಸ್ಪೀಡ್ ಸೆನ್ಸಾರ್ ಡೋರ್ ಲಾಕ್ ಸೌಲಭ್ಯ, 8 ಇಂಚಿನ ಟಚ್‌ಸ್ಕ್ರೀನ್, ಯುಎಸ್‌ಬಿ ಪೋರ್ಟ್, ಆಂಡ್ರಾಯ್ಡ್ ಹಾಗೂ ಆ್ಯಪಲ್ ಕಾರ್ ಪ್ಲೇ ಇಸ್ಫೋಟ್ಮೆಂಟ್, ವಿ ಮೋಷನ್ ಗ್ರಿಲ್, ಫಾಲೋ ಮಿ ಹೆಡ್‌ಲ್ಯಾಂಪ್, ಎಲ್‌ಇಡಿ ಡೇ ಟೈಮ್ ಲೈಟ್, ಎಲ್‌ಇಡಿ ಫಾಗ್ ಲ್ಯಾಂಪ್, ರೇನ್ ಸೆನ್ಸಿಂಗ್ ವೈಪರ್ಸ್, ಇಕೋ ಮೋಡ್, 17 ಇಂಚಿನ ಫೈವ್ ಸ್ಪೋಕ್ ಅಲಾಯ್ ಚಕ್ರಗಳು ಸೇರಿದಂತೆ ಅನೇಕ ವಿಶೇಷತೆಗಳನ್ನು ನಿಸಾನ್ ಕಿಕ್ಸ್ ಹೊಂದಿದೆ.
ಐದು ಜನ ಆರಾಮವಾಗಿ ಪ್ರಯಾಣಿಸಬಹುದು. ಆ ಅಳತೆಗೆ ತಕ್ಕಂತೆ ಒಳಬದಿಯ ವಿಸ್ತಾರವಿದೆ. 4384 ಎಂಎಂ ಉದ್ದ, 1813 ಎಂಎಂ ಅಗಲವಿದೆ. 2673ಎಂಎಂ ಅಗಲದ ವ್ಹೀಲ್ ಬೇಸ್ ಸುತ್ತಳತೆ ಹೊಂದಿದ್ದು 5.2ಮೀ ಟರ್ನಿಂಗ್ ರೇಡಿಯಸ್ ವಿಶೇಷತೆಯೊಂದಿಗೆ 50ಲೀ. ಇಂಧನ ಟ್ಯಾಂಕ್ ಹೊಂದಿದೆ.
ಇದನ್ನೂ ಓದಿ: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳು ಬಳಸೋ ಕಾರು ಯಾವುದು?
ನಿಸಾನ್ ಕಿಕ್ಸ್ ಎರಡು ಮಾದರಿಗಳಲ್ಲಿ ಲಭ್ಯವಿದೆ. 1.5ಲೀ. ಪೆಟ್ರೋಲ್ ಮಾದರಿಯಲ್ಲಿ 1498ಸಿಸಿಯ 106ಪಿಎಸ್ ಎಂಜಿನ್ ಪವರ್, 5 ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ , 21 ಸೆಮೀ ಗ್ರೌಂಡ್ ಕ್ಲಿಯರನ್ಸ್ ಇದೆ. ಅದೇ ರೀತಿ 1.5ಲೀ. ಡೀಸೆಲ್‌ಎಂಜಿನ್‌ನ ಕಿಕ್ಸ್, 110ಪಿಎಸ್ ಎಂಜಿನ್ ಪವರ್, 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 21ಸೆಮೀ ಗ್ರೌಂಡ್ ಕ್ಲಿಯರನ್ಸ್ ವಿಶೇಷತೆಗಳನ್ನು ಹೊಂದಿದೆ.
ಇದನ್ನೂ ಓದಿ: 5 ಸಾವಿರಕ್ಕೆ ಬುಕ್ ಮಾಡಿ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್!
2019ರ ಜನವರಿಯಲ್ಲಿ ಮಾರುಕಟ್ಟೆಗೆ ಈ ಕಾರು ಬಿಡುಗಡೆಗೊಳಿಸಲಾಗುತ್ತದೆ. ಡೀಲರ್‌ಗಳಿಗೆ ಡಿ.14ರಿಂದ ಬುಕ್ಕಿಂಗ್ ಆರಂಭವಾಗಿದೆ. ನಿಸಾನ್ ಕಿಕ್ಸ್ ಬೆಲೆ ಎಕ್ಸ್‌ಶೋರೂಂ 11ಲಕ್ಷ ರು.ಗಳಿಂದ ಟಾಪ್ ಎಂಡ್ ಮಾದರಿಗೆ 15ಲಕ್ಷ ರು.ಗಳ ವರೆಗೆ ಎಂದು ಅಂದಾಜಿಸಲಾಗಿದೆ.