ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇದೆ ದುಬಾರಿ 5 ಕಾರುಗಳು!

By Web Desk  |  First Published Dec 22, 2018, 3:37 PM IST

ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ರೋಹಿತ್ ಶೆಟ್ಟಿ ಬಾಲಿವುಡ್‌‍ನ ಬಹುಬೇಡಿಕೆಯ ನಿರ್ದೇಶಕ. ಬ್ಲಾಕ್ ಬಸ್ಟರ್ ಸಿನಿಮಾನ ನೀಡುತ್ತಿರುವ ರೋಹಿತ್ ಶೆಟ್ಟಿ ಬಳಿಕ 5 ದುಬಾರಿ ಕಾರುಗಳಿವೆ. ಇಲ್ಲಿದೆ ರೋಹಿತ್ ಶೆಟ್ಟಿ ಕಾರುಗಳ ವಿವರ.


ಮುಂಬೈ(ಡಿ.22): ಬ್ಲಾಕ್ ಬಸ್ಟರ್ ಸಿನಿಮಾ ಮೂಲಕ ಸದ್ದು ಮಾಡುತ್ತಿರುವ ಬಾಲಿವುಡ್ ನಿರ್ದೇಶ ರೋಹಿತ್ ಶೆಟ್ಟಿ, ಒಂದರ ಮೇಲೊಂದರಂತೆ ಹಿಟ್ ಸಿನಿಮಾ ನೀಡುತ್ತಿದ್ದಾರೆ. ಗೋಲ್‌ಮಾಲ್, ಗೋಲ್‌ಮಾಲ್ ರಿಟರ್ನ್ಸ್, ಚೆನ್ನೈ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ಚಿತ್ರಗಳನ್ನ ನೀಡಿರುವ ರೋಹಿತ್ ಶೆಟ್ಟಿ ಒಟ್ಟು ಆಸ್ಥಿ ಬರೋಬ್ಬರಿ 266 ಕೋಟಿ ರೂಪಾಯಿ.

ಇದನ್ನೂ ಓದಿ: 2019ರಲ್ಲಿ ಮಾರುತಿ ಸುಜುಕಿಯಿಂದ 2 ಹೊಸ ಕಾರು ಬಿಡುಗಡೆ!

Tap to resize

Latest Videos

undefined

ಕೋಟಿ ಕೋಟಿ ಸಂಪಾದಿಸುತ್ತಿರುವ ರೋಹಿತ್ ಶೆಟ್ಟಿಗೆ ಕಾರುಗಳ ಮೇಲೂ ಕ್ರೇಜ್ ಹೆಚ್ಚು. ಅದರಲ್ಲೂ ರೋಹಿತ್ ಶೆಟ್ಟಿ ದುಬಾರಿ ಕಾರುಗಳ ಅಂದರೆ ಪ್ರೀತಿ ಜಾಸ್ತಿ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಸೂಪರ್ ಹಿಟ್ ಚಿತ್ರಗಳನ್ನ ನೀಡುತ್ತಿರುವ ರೋಹಿತ್ ಶೆಟ್ಟಿ ಬಳಿ 5 ದುಬಾರಿ ಕಾರುಗಳಿವೆ. ಅದರಲ್ಲೂ ಒಂದು SUV ಕಾರಿನ ಬೆಲೆ 2.19 ಕೋಟಿ ರೂಪಾಯಿ. ರೋಹಿತ್ ಶೆಟ್ಟಿ  ಬಳಿ ಇರೋ ದುಬಾರಿ ಕಾರುಗಳ ವಿವರ ಇಲ್ಲಿದೆ.

ಇದನ್ನೂ ಓದಿ: 2018ರಲ್ಲಿ ಬಿಡುಗಡೆಯಾದ ಗರಿಷ್ಠ ಮೈಲೇಜ್ ಬೈಕ್!

ಮರ್ಸಡೀಸ್ G ವ್ಯಾಗನ್ 
ಬೆಲೆ:  2.19 ಕೋಟಿ

ಮಸರಾತಿ ಗ್ರ್ಯಾನ್ ಟರಿಸ್ಮೋ ಸ್ಪೋರ್ಟ್
ಬೆಲೆ: 1.80 ಕೋಟಿ

ಲ್ಯಾಂಡ್ ರೋವರ್
ಬೆಲೆ: 1.74 ಕೋಟಿ

BMW 7 ಸೀರಿಸ್ 
ಬೆಲೆ: 1.26 ಕೋಟಿ

ಫೋರ್ಡ್ ಮಸ್ತಂಗ್ GT
ಬೆಲೆ: 72 ಲಕ್ಷ ರೂಪಾಯಿ

click me!