ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಬಹುನಿರೀಕ್ಷಿತ ಜಾವಾ ಬೈಕ್ ಶೋ ರೂಂ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ನಗರದ ಮೂರು ಕಡೆಗಳಲ್ಲಿ ಶೋ ರೂಂ ಆರಂಭಿಸಿರುವ ಜಾವಾ, ಗ್ರಾಹಕರ ಬೈಕ್ ಖರೀದಿಯನ್ನ ಮತ್ತಷ್ಟು ಸರಳಗೊಳಿಸಿದೆ.
ಬೆಂಗಳೂರು(ಡಿ.22) : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐತಿಹಾಸಿಕ ಜಾವಾ ಮೋಟರ್ ಸೈಕಲ್ ತನ್ನ ಮೊತ್ತ ಮೊದಲ ಶೋ ರೂಂ ಆರಂಭಿಸಿದೆ. ಪುಣೆಯಲ್ಲಿ ಮೊದಲ ಶೋ ರೂಂ ತೆರೆದಿದ್ದ ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಇದೀಗ ಬೆಂಗಳೂರಿನ ಕೋರಮಂಗಲ, ಬಸವನಗುಡಿ ಮತ್ತು ರಾಜಾಜಿನಗರದಲ್ಲಿ ತಲಾ ಒಂದರಂತೆ ಒಟ್ಟು ಮೂರು ಜಾವಾ ಮೋಟಾರ್‍ಸೈಕಲ್ಸ್ ಶೋರೂಮ್‍ಗಳನ್ನು ತೆರೆದಿದೆ.
ಇದನ್ನೂ ಓದಿ: 5 ಸಾವಿರ ನೀಡಿ ಜಾವಾ ಮೋಟರ್ ಬೈಕ್ ಬುಕ್ ಮಾಡಿ!
ಹೊಚ್ಚ ಹೊಸ ಜಾವಾ ಹಾಗೂ ಜಾವಾ 42 ಮೋಟಾರ್ ಬೈಕ್ ಬೆಲೆಯನ್ನು ಕ್ರಮವಾಗಿ 1,64,000 ರೂ. ಹಾಗೂ 1,55,000 ರೂ. ನಿಗದಿಪಡಿಸಲಾಗಿದೆ. 2018ರ ನವೆಂಬರ್ 15ರಿಂದಲೇ ಆರಂಭಗೊಂಡಿದೆ. ಇದೀಗ ಬೆಂಗಳೂರಿನ ಶೋ ರೂಂಗಳಲ್ಲಿ ಗ್ರಾಹಕರು ಖರೀದಿಸಬಹುದು.
ಭಾರತದ ಮಾರುಕಟ್ಟೆಯಲ್ಲಿ ಪ್ರಸ್ತುತ ಜಾವಾ ಹಾಗೂ ಜಾವಾ 42 ಎರಡು ಬ್ರಾಂಡ್ ನ್ಯೂ ಟಾರ್ಕಬ್ಯಾರಿಯರ್ ಮೋಟಾರ್ ಸೈಕಲ್ ಅನಾವರಣಗೊಳಿಸಲಾಗಿದ್ದು, ಈ ಮೂಲಕ ಲೆಜೆಂಡರಿ ಜಾವಾ ಮೋಟಾರ್ ಸೈಕಲ್ ಬೈಕ್ ಕ್ಲಾಸಿಕ್ ಅಪೀಲ್ ಹೊಂದಿದೆ. ಇನ್ನೊಂದು ರೆಟ್ರೋ-ಕೂಲ್ ಟ್ವಿಸ್ಟ್‍ನೊಂದಿಗೆ ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಜಾವಾ ಮೋಟರ್ ಬೈಕ್ ಬೆನ್ನಲ್ಲೇ ರಸ್ತೆಗಿಳಿಯಲಿದೆ ಯಜ್ಡಿ ಬೈಕ್!
ಸಂಪೂರ್ಣ ಹೊಸದಾಗಿರುವ 293 ಸಿಸಿ, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್, ಡಿಒಹೆಚ್‍ಸಿ ಎಂಜಿನ್ ಜೊತೆಜೊತೆಗೇ ಹೊಂದಿಕೊಂಡಿರುವ ಡಬಲ್ ಕ್ರಾಡೆಲ್ ಚಾಸ್ಸೀಗಳು ಸೇರಿದಂತೆ, ಕ್ಲಾಸಿಕ್ ರೈಡಿಂಗ್ ಥ್ರಿಲ್ ಅನ್ನು ಯಥಾವತ್ತಾಗಿ ನೀಡಲು ಅಗತ್ಯವಿರುವ ಎಲ್ಲ ಅತ್ಯಾವಶ್ಯಕ ಅಂಶಗಳನ್ನು ಈ ಹೊಸ ಮೋಟಾರ್ ಸೈಕಲ್ ಒಳಗೊಂಡಿದ್ದು, ಈ ಎಲ್ಲ ಅತ್ಯಾಕರ್ಷಕ ಗುಣಲಕ್ಷಣಗಳು ಹೊಸ ಜಾವಾ ಮೋಟಾರ್ ಸೈಕಲ್‌ನ್ನ ನೈಜ ಹಾಗೂ ಮಾಡರ್ನ್ ಕ್ಲಾಸಿಕ್ ಸಾಲಿನಲ್ಲಿ ನಿಲ್ಲಿಸುತ್ತವೆ.
ಇಟಾಲಿಯನ್ ಇಂಜಿನಿಯರಿಂಗ್ ಮೂಲಕ ರೂಪಿಸಲಾಗಿರುವ ಹೊಚ್ಚ ಹೊಸ ಜಾವಾ ಎಂಜಿನ್, ಸಂಪೂರ್ಣ ಹೊಸದಾದ ಫೀಲ್ ನೀಡುವ ಜೊತೆ ಜೊತೆಗೇ ಕ್ಲಾಸಿಕ್ ಜಾವಾ ಅನುಭೂತಿಯನ್ನೂ ಒದಗಿಸುತ್ತದೆ.
ಇದನ್ನೂ ಓದಿ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇದೆ ದುಬಾರಿ 5 ಕಾರುಗಳು!
ಗರಿಷ್ಠ 27ಬಿಹೆಚ್‍ಪಿ ಮತ್ತು 28ಎನ್‍ಎಂ ನಷ್ಟು ಟಾರ್ಕ್ ಹೊರಹೊಮ್ಮಿಸಬಲ್ಲ ಸಾಮಥ್ರ್ಯವನ್ನು ಈ ಹೊಸ ಎಂಜಿನ್ ಹೊಂದಿದ್ದು, ಜೆನೊರಸ್ ಮಿಡ್-ರೇಂಜ್ ಮತ್ತು ಅನ್‍ವೇವಿಂಗ್‍ಗಾಗಿ ಫ್ಲಾರ್ಟ್ ಟಾಕ್ ಕರ್ವ್ ಸಮತೋಲಿತವಾದ ಶಕ್ತಿಶಾಲಿ ರೈಡ್‍ಗೆ ಉತ್ತೇಜಿಸುತ್ತದೆ. ಬೆಂಗಳೂರಿನಲ್ಲಿ 3 ಶೋ ರೂಂ ತೆರೆದಿರುವ ಜಾವಾ, ದೇಶದೆಲ್ಲೆಡೆ ಮೊದಲ ಹಂತದಲ್ಲಿ ಒಟ್ಟು 100ಕ್ಕೂ ಅಧಿಕ ಜಾವಾ ಮೋಟಾರ್‍ಸೈಕಲ್ಸ್ ಶೋರೂಮ್‍ಗಳನ್ನು ತೆರೆಯುವ ಗುರಿ ಹೊಂದಿದೆ.