ಕೊರೋನಾ ವೈರಸ್‌ನಿಂದ ಭಾರತ ಲಾಕ್‌ಡೌನ್ ಆಗಿದೆ. ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಣೆ ಮಾಡುತ್ತಿದ್ದಂತೆ ಪಣ್ಣ, ನಗರಗಳಲ್ಲಿನ ಕೂಲಿ ಕಾರ್ಮಿಕರು ಬೆಚ್ಚಿ ಬಿದ್ದಿದ್ದಾರೆ. ಕಾರಣ ಇತ್ತ ಕೂಲಿಯೂ ಇಲ್ಲ, ಅತ್ತ ಮನೆ ಸೇರಲು ಸಾರಿಗೆ ವ್ಯವಸ್ಥೆಯೂ ಇಲ್ಲ. ಹೇಗಾದರೂ ಮಾಡಿ ಮನೆ ಸೇರಿಕೊಂಡರೆ ಸಾಕು, ಗೆಡ್ಡೆ ಗೆಣಸು ತಿಂದಾದ್ರೂ ಬದುಕಬಲ್ಲೆ ಎಂದುಕೊಂಡು ಮೂವರು ಕಾರ್ಮಿಕರು ದೆಹಲಿಯಿಂದ ತಮ್ಮ ಊರಾದ ಬಿಹಾರ ಸೇರಲು ಉಪಾಯ ಮಾಡಿದ್ದಾರೆ. ಇವರ ಐಡಿಯಾಗೆ ಉತ್ತರ ಪ್ರದೇಶದ ಪೊಲೀಸರೇ ದಂಗಾಗಿ ಹೋಗಿದ್ದಾರೆ.
ಚಂದೌಲಿ(ಮಾ.28); ಚೀನಾದಲ್ಲಿ ಆರಂಭವಾದ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಪಸರಿಸುತ್ತಿದೆ. ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಸಂಪೂರ್ಣ ಭಾರತವನ್ನು ಲಾಕ್‌ಡೌನ್ ಮಾಡಲಾಗಿದೆ. ಪ್ರಧಾನಿ ಮೋದಿ ಘೋಷಣೆ ಮಾಡುತ್ತಿದ್ದಂತೆ ಊರುಗಳಿಂದ ತೆರಳಿ ನಗರ, ಪಣ್ಣಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ದಿಕ್ಕೇ ತೋಚದಂತಾಗಿದೆ. ಕಾರಣ ಲಾಕ್‌ನಿಂದ ಕೆಲಸವಿಲ್ಲ, ಇತ್ತ ತಮ್ಮ ತಮ್ಮ ಊರುಗಳಿಗೆ ತೆರಳಲು ಯಾವುದೇ ಸಾರಿಗೆ ವ್ಯವಸ್ಥೆ ಕೂಡ ಇಲ್ಲ. ಹೀಗೆ ದೆಹಲಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ದೆಹಲಿಯಿಂದ ತಮ್ಮ ಬಿಹಾರಕ್ಕೆ ಅಂದರೆ ಬರೋಬ್ಬರಿ 1,200 ಕಿ.ಮೀ ಪ್ರಯಾಣಕ್ಕೆ ಮಾಡಿದ ಐಡಿಯಾಗೆ ಪೊಲೀಸರು ದಂಗಾದಿದ್ದರೆ, ಆಟೋಮೊಬೈಲ್ ಕಂಪನಿಗಳೇ ಬೆಚ್ಚಿ ಬಿದ್ದಿದೆ.
ಭಾರತ ಲಾಕ್‌ಡೌನ್; ಟೋಲ್ ಸಂಗ್ರಹ ಕುರಿತು ಹೆದ್ದಾರಿ ಪ್ರಾಧಿಕಾರದಿಂದ ಮಹತ್ವದ ನಿರ್ಧಾರ!
undefined
ದೆಹಲಿಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಮೂವರು ಲಾಕ್‌ಡೌನ್ ಘೋಷಣೆ ಮಾಡಿದ ರಾತ್ರಿ ಬಿಹಾರಕ್ಕೆ ತೆರಳಲು ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಹೀಗಾಗಿ ಮರುದಿನ ತಮ್ಮಲ್ಲಿದ್ದ ಸೈಕಲ್ ರಿಕ್ಷಾ ರಿಪೇರಿ ಮಾಡಿ, ಅದಕ್ಕೆ ಸ್ಕೂಟರ್ ಎಂಜಿನ್ ಅಳವಡಿಸಿದ್ದಾರೆ. ಕೂಲಿ ಮಾಡಿ ಉಳಿಸಿದ್ದ ಹಣದಲ್ಲಿ ಪೆಟ್ರೋಲ್ ಹಾಕಿ ಪ್ರಯಾಣ ಆರಂಭಿಸಿದ್ದಾರೆ. ಸೈಕಲ್ ರಿಕ್ಷಾದಲ್ಲಿ ಮೂವರು ಕಾರ್ಮಿಕರ ಬರೋಬ್ಬರಿ 1,200 ಕಿ,ಮೀ ಪ್ರಯಾಣ ಆರಂಭವಾಗಿದೆ.
ಭಾರತ ಲಾಕ್‌ಡೌನ್; ರೋಡಿಗಿಳಿದ 2000ಕ್ಕೂ ಹೆಚ್ಚು ವಾಹನಕ್ಕೆ ದುಬಾರಿ ಫೈನ್
ಕ್ಯಾನ್‌ನಲ್ಲಿ ಪೆಟ್ರೋಲ್ ತುಂಬಿಕೊಂಡು ಸೈಕಲ್ ರಿಕ್ಷಾದಲ್ಲಿ ಪ್ರಯಾಣ ಆರಂಭಿಸಿದ ಮೂವರು ಕಾರ್ಮಿಕರು ಸತತ ಪ್ರಯಾಣ ಮಾಡಿದ್ದಾರೆ. ಹೀಗೆ ಸಾಗುತ್ತಾ ಉತ್ತರ ಪ್ರದೇಶ ತಲುಪಿದ್ದಾರೆ. ಬರೋಬ್ಬರಿ 800 ಕಿ.ಮೀ ಪ್ರಯಾಣ ಮುಗಿಸಿ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆ ಪ್ರವೇಶಿಸಿದಾಗ ಪೊಲೀಸರು ತಡೆದಿದ್ದಾರೆ. ಕಾರಣ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಪೊಲೀಸರಿಗೆ ಕಟ್ಟು ನಿಟ್ಟಿನ ಆದೇಶ ನೀಡಿದ್ದರು. ಹೀಗಾಗಿ ಪೊಲೀಸರು ಮೂವರನ್ನು ನಿಲ್ಲಿಸಿ ಕೇಳಿದಾಗ ಪೊಲೀಸರೆ ದಂಗಾಗಿದ್ದಾರೆ.
This is an incredible ( for want of a better expression ) story . Lalu mahto , gore lal mahto and a relative are from madhubani in bihar . They work in delhi . On tuesday , they made up their mind to leave delhi.... pic.twitter.com/mc9EuG1Rug
— Alok Pandey (@alok_pandey)ಇದೇ ರಿಕ್ಷಾ ಸೈಕಲ್ ಮೂಲಕ ದೆಹಲಿಯಿಂದ ಆಗಮಿಸಿದ್ದಾರೆ. ಸರಿಸುಮಾರು 800 ಕಿ.ಮೀ ಆಗಿಸಿದ್ದಾರೆ ಅನ್ನೋ ಮಾತು ಕೇಳಿ ಅಚ್ಚರಿಗೊಂಡಿದ್ದಾರೆ. ಈ ವೇಳೆ ಕಾರ್ಮಿಕರ ಕೈಯಲ್ಲಿದ್ದ ಹಣ ಮುಗಿದುಹೋಗಿದೆ. ಇಷ್ಟೇ ಅಲ್ಲ ತಾವು ಬಿಹಾರಕ್ಕೆ ತೆರಳುತ್ತಿದ್ದೇವೆ, ನಮ್ಮನ್ನು ಕಳುಹಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ. ತಕ್ಷಣವೇ ಯುಪಿ ಪೊಲೀಸರು ಕಾರ್ಮಿಕರು ಊಟದ ವ್ಯವಸ್ಥೆ ಮಾಡಿದ್ದಾರೆ. ಇಷ್ಟೇ ಅಲ್ಲ ಮೂವರನ್ನೂ ತಪಾಸಣೆಗೆ ಒಳಪಡಿಸಿದ್ದಾರೆ. ವೈದ್ಯರು ಕೊರೋನಾ ವೈರಸ್ ಲಕ್ಷಣಗಳಿಲ್ಲ ಎಂದು ಖಚಿತ ಪಡಿಸಿದ ಬಳಿಕ ಬಿಹಾರಕ್ಕೆ ತೆರಳಲು ಅನುವುಮಾಡಿಕೊಟ್ಟಿದ್ದಾರೆ.
ಸೈಕಲ್ ರಿಕ್ಷಾಗೆ ಸ್ಕೂಟರ್ ಎಂಜಿನ್ ಅಳವಡಿಸಿ ಊರು ತಲುಪಲು ಮಾಡಿದ ಐಡಿಯಾಗೆ ಮೆಚ್ಚುಗೆ ವ್ಯಕ್ತವಾಗಿದೆ.