ಮಾರಾಟ ಮಾಡುವಂತಿಲ್ಲ,ಗಡುವು ವಿಸ್ತರಿಸಿಲ್ಲ ; ವಾಹನ ಡೀಲರ್ಸ್‌ಗೆ 12 ಸಾವಿರ ಕೋಟಿ ನಷ್ಟ!

By Suvarna NewsFirst Published Mar 27, 2020, 4:01 PM IST
Highlights

ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿವೆ. ಭಾರತದ ಲಾಕ್‌ಡೌನ್ 3ನೇ ದಿನಕ್ಕೆ ಕಾಲಿಟ್ಟಿದೆ. ಅಗತ್ಯ ಸೇವೆಗಳು ಮಾತ್ರ ಲಭ್ಯವಿದೆ. ಇನ್ಯಾವ ಸೇವೆಗಳನ್ನು ನೀಡುವಂತಿಲ್ಲ. ಕೊರೋನಾ ವೈರಸ್ ಸೃಷ್ಟಿಸಿದ ಆತಂಕ ಅಷ್ಟಿಷ್ಟಲ್ಲ. 21 ದಿನಗಳ ಲಾಕ್‌ಡೌನ್‌‍ನಿಂದ ವಾಹನ ಡೀಲರ್ ಪರದಾಡುವಂತಾಗಿದೆ. ಕಾರಣ BS4 ಎಂಜಿನ್ ವಾಹನ ಗಡುವು ಅಂತ್ಯಗೊಳ್ಳುತ್ತಿದೆ. ಇತ್ತ ಕೋರ್ಟ್ ಗಡುವು ವಿಸ್ತರಿಸಲು ಒಪ್ಪಿಲ್ಲ. ಹೀಗಾಗಿ  ಒಟ್ಟು 12 ಸಾವಿರ ಕೋಟಿ ನಷ್ಟವಾಗಿದೆ.

ನವದೆಹಲಿ(ಮಾ.27): ಕೊರೋನಾ ವೈರಸ್ ಹತೋಟಿಗೆ ತರಲು ಲಾಕ್‌ಡೌನ್  ಬಿಟ್ಟು ಅನ್ಯ ದಾರಿ ಇರಲಿಲ್ಲ. ಆದರೆ ಈ ಲಾಕ್‌ಡೌನ್‌ನಿಂದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಆಟೋಮೊಬೈಲ್ ಕ್ಷೇತ್ರಕ್ಕೆ ಅತೀ ದೊಡ್ಡ ಹೊಡೆತ ನೀಡಿದೆ. ಕಾರಣ ಎಪ್ರಿಲ್ 1 ರಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ನೂತನ ವಾಹನಗಳು BS6 ಎಮಿಶನ್ ಎಂಜಿನ್ ಹೊಂದಿರಬೇಕು. ಸದ್ಯ ಚಾಲ್ತಿಯಲ್ಲಿರುವ  BS4 ಎಂಜಿನ್ ವಾಹನ ಮಾರಾಟ ಮಾರ್ಚ 31ವರೆಗೆ ಮಾತ್ರ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಷ್ಟೇ ಅಲ್ಲ ಈ ದಿನಾಂಕ ವಿಸ್ತರಿಸಲು ಕೋರ್ಟ್ ನಿರಾಕರಿಸಿದೆ. ಹೀಗಾಗಿ ಸುಮಾರು 6,4000 ಕೋಟಿ ರೂಪಾಯಿ ಮೊತ್ತದ BS4 ವಾಹನಗಳು ಮಾರಾಟವಾಗದೇ ಉಳಿದಿದೆ. 

ಭಾರತ ಲಾಕ್‌ಡೌನ್; ರೋಡಿಗಿಳಿದ 2000ಕ್ಕೂ ಹೆಚ್ಚು ವಾಹನಕ್ಕೆ ದುಬಾರಿ ಫೈನ್!..

BS4 ವಾಹನಗಳು ಮಾತ್ರವಲ್ಲ ಈಗಾಗಲೇ ಬಿಡುಗಡೆಯಾಗಿರುವ BS6 ವಾಹನಗಳು ಕೂಡ ಮಾರಾಟವಾಗದೆ ಉಳಿದಿದೆ. ಹೀಗಾಗಿ ಎರಡೂ ಎಂಜಿನ್‌ಗಳ ಮಾರಾಟ ಅಡೆ ತಡೆಯಿಂದ ಬರೋಬ್ಬರಿ 12,000 ಕೋಟಿ ರೂಪಾಯಿ ನಷ್ಟವಾಗಿದೆ. 

ಸದ್ಯ ಭಾರತದ ಡೀಲರ್‌ಗಳ ಬಳಿ ಬರೋಬ್ಬರಿ 7 ಲಕ್ಷ BS4 ದ್ವಿಚಕ್ರ ವಾಹನಗಳು ಮಾರಾಟವಾಗದೆ ಉಳಿದಿವೆ. 12,000 BS4 ಪ್ಯಾಸೆಂಜರ್ ವಾಹನಗಳು ಹಾಗೂ 7,000 ಕರ್ಮಷಿಯಲ್ ವಾಹನಗಳು ಡೀಲರ್‌ ಬಳಿ ಉಳಿದುಕೊಂಡಿದೆ.

ಕೊರೋನಾ ವೈರಸ್: ಭಾರತದ ಆಟೋಮೊಬೈಲ್ ಉತ್ಪಾದನೆ ಸ್ಥಗಿತಕ್ಕೆ ಖಡಕ್ ಸೂಚನೆ!.

ಭಾರತದ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಆಸೋಸಿಯೇಶನ್(FADA) ಮಾರ್ಚ್ ಆರಂಭದಲ್ಲಿ BS4 ವಾಹನ ಮಾರಾಟ ಗಡುವು ವಿಸ್ತರಿಸಲು ಮನವಿ ಮಾಡಿತ್ತು. ಇದರ ವಿಚಾರಣೆಯನ್ನು ಮಾರ್ಚ್ 27ಕ್ಕೆ ನಿಗದಿ ಪಡಿಸಿತ್ತು. ಇದೀಗ ಕೊರೋನಾ ವೈರಸ್‌ನಿಂದ ಕೋರ್ಟ್ ಕಲಾಪಗಳು ನಡೆಯುತ್ತಿಲ್ಲ. ತುರ್ತು ಕೇಸ್‌ಗಳು ಮಾತ್ರ ವಿಚಾರಣೆ ನಡೆಯುತ್ತಿದೆ. ಇದೀಗ FADA ವಕೀಲರ ಜೊತೆ ಸದಾ ಸಂಪರ್ಕದಲ್ಲಿದೆ. 

ಸದ್ಯ ಯಾವುದೇ ನಿರ್ಧಾರ ಅಸಾಧ್ಯ. ಲಾಕ್‌ಡೌನ್ ಬಳಿಕವೇ BS4 ವಾಹನಗಳ ಮಾರಾಟ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ಧಾರ ಹೇಳಲಿದೆ. ಕೊರೋನಾ ವೈರಸ್‌ನಿಂದಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಎದುರಾಗಿದೆ. ಹೀಗಾಗಿ  FADA ಮನವಿಯನ್ನು ಪುರಸ್ಕರಿಸುತ್ತೋ ಅಥವಾ ನಿರಾಕರಿಸಿತ್ತೋ ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ.
 

click me!