ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಭಾರತವನ್ನು ಸಂಪೂರ್ಣ ಲಾಕ್‌ಡೌನ್ ಮಾಡಿದ್ದಾರೆ. ತುರ್ತು ಸೇವೆ ಹಾಗೂ ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಿವೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ನವದೆಹಲಿ(ಮಾ.26): ಕೊರೋನಾ ವೈರಸ್ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗುತ್ತಿದೆ. ಭಾರತದ ಲಾಕ್‌ಡೌನ್ 2ನೇ ದಿನಕ್ಕೆ ಕಾಲಿಟ್ಟಿದೆ. ಎಲ್ಲಾ ಸೇವೆಗಳು ಬಂದ್ ಆಗಿವೆ. ಅಗತ್ಯ ವಸ್ತು ಹಾಗೂ ತುರ್ತು ಸೇವೆಗಳು ಮಾತ್ರ ಲಭ್ಯವಿದೆ. ಇದೀಗ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಹೆದ್ದಾರಿ ಟೋಲ್ ಸಂಗ್ರಹ ಮುಕ್ತ ಮಾಡಲು ನಿರ್ಧರಿಸಿದೆ.
ಭಾರತ ಲಾಕ್‌ಡೌನ್; ರೋಡಿಗಿಳಿದ 2000ಕ್ಕೂ ಹೆಚ್ಚು ವಾಹನಕ್ಕೆ ದುಬಾರಿ ಫೈನ್!
ಭಾರತದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಸಂಗ್ರಹ ತಾತ್ಕಾಲಿಕವಾಗಿ ನಿಲ್ಲಿಸುತ್ತಿದೆ. ರಸ್ತೆ ಮತ್ತು ಸಾರಿಗೆ ಸಚಿವಾಲಯ ಜೊತೆಗಿನ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಹುತೇಕಾ ಎಲ್ಲಾ ವಾಹನ ಸಂಚಾರ ಬಂದ್ ಆಗಿದೆ. ಇಷ್ಟೇ ಅಲ್ಲ ಟೋಲ್ ಸಂಗ್ರಹದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳ ಸುರಕ್ಷತೆಯ ದೃಷ್ಠಿಯಿಂದ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ರಸ್ತೆ ಮತ್ತು ಸಾರಿಗೆ ಸಚಿವಾಲಯ ಹೇಳಿದೆ.
Read more: https://t.co/00bvbvGAzM pic.twitter.com/ihFUox2qAC
— MORTHINDIA (@MORTHIndia)ಕೊರೋನಾ ವೈರಸ್: ಭಾರತದ ಆಟೋಮೊಬೈಲ್ ಉತ್ಪಾದನೆ ಸ್ಥಗಿತಕ್ಕೆ ಖಡಕ್ ಸೂಚನೆ!
ಭಾರತ ಲಾಕ್‌ಡೌನ್ ಮೊದಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ತಮ್ಮ ತಮ್ಮ ರಾಜ್ಯದ ಗಡಿ ಪ್ರದೇಶ ಮುಚ್ಚಿತ್ತು. ಹೀಗಾಗಿ ಬೆರಳೆಣಿಕೆ ವಾಹನಗಳು ಅಂತಾರಾಜ್ಯ ಗಡಿ ಮೂಲಕ ಸಾಗುತಿತ್ತು. ಕೆಲ ವಾಹನಗಳಿಗಾಗಿ ಟೋಲ್ ಸಂಗ್ರಹದ ಉದ್ಯೋಗಿಗಳು ಕೂಡ ಕೆಲಸ ಮಾಡಬೇಕಾದ ಪರಿಸ್ಥಿತಿ ಇತ್ತು. ಇದೀಗ ರಸ್ತೆ ಮತ್ತು ಸಾರಿಗೆ ಸಚಿವಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಮಹತ್ವದ ನಿರ್ಧಾರ ಕೈಗೊಳ್ಳೋ ಮೂಲಕ ಹೆಚ್ಚಿನ ಅಪಾಯ ತಪ್ಪಿಸಿದೆ.