ರಾಜಧಾನಿಯ ವಾಹನಗಳಿಗೆ ಹೈ ಸೆಕ್ಯೂರಿಟಿ ಪ್ಲೇಟ್-ಕಲರ್ ಕೋಡ್ ಕಡ್ಡಾಯ!

By Web Desk  |  First Published Feb 2, 2019, 6:27 PM IST

ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸ ವರ್ಷ ಹೊಸ ನೀತಿ ನಿಯಮಗಳು ಸೇರಿಕೊಳ್ಳುತ್ತಿದೆ. ಇದೀಗ 2019ರ ಅಕ್ಟೋಬರ್ ಒಳಗೆ ರಾಜಧಾನಿಯ ಎಲ್ಲಾ ವಾಹನಗಳು ಹೆ ಸೆಕ್ಯೂರಿಟಿ ನಂಬರ್ ಪ್ಲೇಟ್ ಹಾಗೂ ಕಲರ್ ಕೋಡ್ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.


ನವದೆಹಲಿ(ಫೆ.02): ರಾಷ್ಟ್ರ ರಾಜಧಾನಿಗೆ ಒಳಪಡುವ ಎಲ್ಲಾ ವಾಹನಗಳು ಹೆ ಸೆಕ್ಯೂರಿಟಿ ನಂಬರ್ ಪ್ಲೇಟ್ ಹಾಗೂ ಕಲರ್ ಕೋಡ್ ಅಳವಡಿಸಬೇಕು.  ಅಕ್ಟೋಬರ್ 2019ರೊಳಗೆ ಎಲ್ಲಾ ವಾಹನಗಳು ಈ ನಿಯಮ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ನೇಮಕ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಇದನ್ನೂ ಓದಿ: ಅತೀ ಕಡಿಮೆ ಬೆಲೆಗೆ ನೂತನ ರೆನಾಲ್ಟ್ ಕ್ವಿಡ್ ABS ಕಾರು ಬಿಡುಗಡೆ!

Latest Videos

undefined

ಕಲರ್ ಕೋಡ್ ಅಳವಡಿಸುವುದರಿಂದ ವಾಹನದ ಇಂಧನ ತಿಳಿಯಲು ಸಾಧ್ಯವಿದೆ. ಸದ್ಯ ಪೆಟ್ರೋಲ್ ಹಾಗೂ CNG ವಾಹನಗಳಿಗೆ ಲೈಟ್ ಬ್ಲೂ ಕಲರ್ ಕೋಡ್, ಡೀಸೆಲ್ ವಾಹನಗಳಿಗೆ ಆರೆಂಜ್ ಸ್ಟಿಕ್ಕರ್ ಕೋಡ್ ಅಳವಡಿಸಬೇಕು. ಇದರಿಂದ ಪೊಲೀಸರಿಗೆ ವಾಹನದ ಇಂಧನ ಯಾವುದು? ಅನ್ನೋ ಸ್ಪಷ್ಟತೆ ಸಿಗಲಿದೆ. 

ಇದನ್ನೂ ಓದಿ: ಡ್ರೈವ್ ಮಾಡುವಾಗ ಧೂಮಪಾನ ಮಾಡಬೇಡಿ- ಇಲ್ಲಿದೆ ಕಾರಣ!

ಕಲರ್ ಕೋಡ್ ಜೊತೆಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕೂಡ ಖಡ್ಡಾಯ. ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‌ನಲ್ಲಿ ಕ್ರೋಮಿಯಮ್ ಹಾಲೋಗ್ರಾಮ್ ಸ್ಟಾಂಪ್ ಅಳವಡಿಸಲಾಗುತ್ತೆ. ಲೇಸರ್ ರೀಡರ್ ಮೂಲಕ ವಾಹನ ರಿಜಿಸ್ಟ್ರೇಶನ್, ವಿಳಾಸ ಸೇರಿದಂತೆ ಎಲ್ಲಾ ಮಾಹಿತಿಗಳು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಮೂಲಕ ತಿಳಿಯಲು ಸಾಧ್ಯವಿದೆ. 

click me!