CM ಕುಮಾರಸ್ವಾಮಿ ಕಾರು ನಿಲ್ಲಿಸಿದ ಎಲೆಕ್ಷನ್ ಕಮಿಶನ್!

By Web DeskFirst Published Apr 5, 2019, 4:47 PM IST
Highlights

ಲೋಕಸಭಾ ಚುನಾವಣೆ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ರೇಂಜ್ ರೋವರ್ ಕಾರನ್ನು ಚುನಾವಣಾ ಅಧಿಕಾರಿಗಳು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ.  ಮುಂದೇನಾಯಿತು? ಇಲ್ಲಿದೆ ವಿವರ.

ಬೆಂಗಳೂರು(ಏ.05): ಲೋಕಸಭಾ ಚುನಾವಣೆಯಿಂದಾಗಿ ಹೆದ್ದಾರಿ, ನಗರದ ಪ್ರವೇಶ ದಾರಿಗಳಲ್ಲಿ ಚುನಾವಣಾ ಅಧಿಕಾರಿಗಳು ಚೆಕ್ ಪೋಸ್ಟ್ ಸಾಮಾನ್ಯ. ಪ್ರತಿ ವಾಹನವನ್ನೂ ಪರಿಶೀಲಿಸಿದ ಬಳಿಕವೆೇ ತೆರಳಲು ಸಾಧ್ಯ. ಇತ್ತೀಚೆಗಷ್ಟೇ ರಾಜ್ಯದ ಐಟಿ ದಾಳಿಗೆ ವಿರೋಧ್ಯ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಇದೀಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಮಾರಸ್ವಾಮಿ ಆಪ್ತನ ಬಳಿಕ ಕೋಟಿ ಕೋಟಿ ರೂಪಾಯಿ ವಶಪಡಿಸಿಕೊಂಡಿರುವುದು ತಲೆನೋವು ಹೆಚ್ಚಿಸಿದೆ. ಇದರ ಬೆನ್ನಲ್ಲೇ ಕುಮಾರಸ್ವಾಮಿ ರೇಂಜ್ ರೋವರ್ ಕಾರನ್ನು ತಡೆದು ಪರಿಶೀಲನೆ ನಡೆಸಲಾಗಿದೆ.

ಇದನ್ನೂ ಓದಿ: ಸಾಹೋ ಚಿತ್ರಕ್ಕಾಗಿ 10 ಲಕ್ಷ ರೂ. ಬೈಕ್ ಬಳಸಿದ ಬಾಹುಬಲಿ ಪ್ರಭಾಸ್!

ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರಿ ವಾಹನ ಬದಲು ತಮ್ಮ ಖಾಸಗಿ ವಾಹನ ರೇಂಜ್ ರೋವರ್ ಕಾರು ಬಳಸುತ್ತಿದ್ದಾರೆ. ಬೆಂಗಳೂರಿನಿಂದ ಪುತ್ರ ನಿಖಿಲ್ ಕುಮಾರಸ್ವಾಮಿ ಪ್ರಚಾರಕ್ಕಾಗಿ ಮಂಡ್ಯಕ್ಕೆ ತೆರಳುತ್ತಿದ್ದ ವೇಳೆ ಕುಮಾರಸ್ವಾಮಿ ರೇಂಜ್ ರೋವರ್ ಕಾರನ್ನು ನಿಲ್ಲಿಸಲಾಗಿದೆ. ಕುಮಾರಸ್ವಾಮಿ Z ಪ್ಲಸ್ ಭದ್ರತೆ ಇದೆ. ಹೀಗಾಗಿ ಪೊಲೀಸ್ ವಾಹನ, ಸೆಕ್ಯೂರಿಟಿ ಗಾರ್ಡ್, ಆಂಬ್ಯುಲೆನ್ಸ್ ಸೇರಿದಂತೆ 9 ವಾಹನಗಳು ಮುಖ್ಯಮಂತ್ರಿಗೆ ಬೆಂಗಾವಲಾಗಿ ಸಂಚರಿಸುತ್ತಿತ್ತು.

ಇದನ್ನೂ ಓದಿ: 5 ಲಕ್ಷ ಮತಗಳ ಅಂತರದಿಂದ ನಿಖಿಲ್ ಗೆಲುವು ನಿಶ್ಚಿತ: ಸಿಎಂ

ಕುಮಾರಸ್ವಾಮಿ ರೇಂಜ್ ರೋವರ್ ಕಾರನ್ನು ಪರಿಶೀಲನೆಗಾಗಿ ನಿಲ್ಲಿಸಲಾಯಿತು. ಬಳಿಕ ಚುನಾವಣಾ ಅಧಿಕಾರಿಗಳು ಕಾರಿನ ಡಿಕ್ಕಿ, ಡ್ಯಾಶ್‌ಬೋರ್ಡ್, ಡ್ರೈವರ್ ಸೀಟ್ ಕೆಳಗಡೆ ಸೇರಿದಂತೆ ಸಂಪೂರ್ಣ ವಾಹನ  ತಪಾಸಣೆ ಮಾಡಲಾಯಿತು. ಈ ವೇಳೆ ಕುಮಾರಸ್ವಾಮಿ ಕಾರಿನಲ್ಲೇ ಇದ್ದರು. ಚನಾವಣಾ ಅಧಿಕಾರಿಗಳ ತಪಾಸಣೆ ಬಳಿಕ ಸಿಎಂ ಕಾರು ಬೆಂಗಾವಲು ವಾಹನದೊಂದಿದೆ ಪ್ರಯಾಣ ಬೆಳೆಸಿತು.

ಇದನ್ನೂ ಓದಿ: ಮಂಡ್ಯ, ಹಾಸನ ಐಟಿ ರೈಡ್; ಲೆಕ್ಕ ನೀಡುವಲ್ಲಿ ಗುತ್ತಿಗೆದಾರರು ವಿಫಲ

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸರ್ಕಾರದಿಂದ ಟೊಯೊಟಾ ಫಾರ್ಚುನರ್ ವಾಹನ ನೀಡಲಾಗಿತ್ತು. ಆದರೆ ಕುಮಾರಸ್ವಾಮಿ ಫಾರ್ಚುನರ್ ಕಾರನ್ನು ನಿರಾಕರಿಸ ತಮ್ಮ ರೇಂಜ್ ರೋವರ್ ಕಾರನ್ನೇ ಬಳಸುತ್ತಿದ್ದಾರೆ. ಫಾರ್ಚುನರ್ ಕಾರು ತಿರಸ್ಕರಿಸಲು ಆರೋಗ್ಯ ಸಮಸ್ಯೆ ಕಾರಣ ನೀಡಿದ್ದಾರೆ. ಆದರೆ ರೇಂಜ್ ರೋವರ್ ಕುಮಾರಸ್ವಾಮಿ ಲಕ್ಕಿ ಕಾರು ಅನ್ನೋ ಕಾರಣಕ್ಕೆ ಇದೇ ಕಾರನ್ನು ಬಳಸುತ್ತಿದ್ದಾರೆ ಅನ್ನೋ ಮಾತುಗಳಿವೆ. 

click me!