ಸಾಹೋ ಚಿತ್ರಕ್ಕಾಗಿ 10 ಲಕ್ಷ ರೂ. ಬೈಕ್ ಬಳಸಿದ ಬಾಹುಬಲಿ ಪ್ರಭಾಸ್!

By Web Desk  |  First Published Apr 5, 2019, 3:42 PM IST

ಬಾಹುಬಲಿ ಪ್ರಭಾಸ್ ಮುಂದಿನ ಚಿತ್ರ ಸಾಹೋ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಬಹುತೇಕ ಪೂರ್ಣಗೊಂಡಿದೆ. ಚಿತ್ರದ ಶೂಟಿಂಗ್‌ಗಾಗಿ ನಟ ಪ್ರಭಾಸ್ ದುಬಾರಿ ಬೈಕ್ ಬಳಸಿದ್ದಾರೆ. ಪ್ರಭಾಸ್ ಬೈಕ್ ವಿಶೇಷತೆ ಏನು? ಇಲ್ಲಿದೆ ವಿವರ.


ಹೈದರಾಬಾದ್(ಏ.05): ಬಾಹುಬಲಿ ಖ್ಯಾತಿಯ  ಟಾಲಿವುಡ್ ನಟ ಪ್ರಭಾಸ್ ಇದೀಗ ಬಹುನಿರೀಕ್ಷಿತ ಸಾಹೋ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಬಿಗ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಸಾಹೋ ಚಿತ್ರ ಇದೀಗ ಭಾರಿ ಸದ್ದು ಮಾಡುತ್ತಿದೆ. ಸ್ಟಂಟ್, ಆ್ಯಕ್ಷನ್ ಸೀಕ್ವೆನ್ಸ್ ಹೆಚ್ಚಾಗಿರುವ ಈ ಚಿತ್ರ ಭಾರತದಲ್ಲಿ ಹೊಸ ದಾಖಲೆ ನಿರ್ಮಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಇದನ್ನೂ ಓದಿ: ಬೈಕ್‌ ಸೀಟ್ ಕೆಳಗಡೆ ಹೆಬ್ಬಾವು ಪ್ರತ್ಯಕ್ಷ - ಮುಂದೇನಾಯ್ತು? ವೀಡಿಯೋ ವೈರಲ್!

Tap to resize

Latest Videos

undefined

ಸಾಹೋ ಚಿತ್ರಕ್ಕಾಗಿ ಪ್ರಭಾಸ್ ದುಬಾರಿ ಬೈಕ್ ಬಳಸುತ್ತಿದ್ದಾರೆ. ಇದರ ಬೆಲೆ ಬರೋಬ್ಬರಿ 10.55 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಬೈಕ್ ಖರೀದಿಸಿದ ಬಳಿಕ ಚಿತ್ರಕ್ಕಾಗಿ ಮಾಡಿಫಿಕೇಶನ್ ಮಾಡಲಾಗಿದೆ. ಹೀಗಾಗಿ ಈ ಬೈಕ್ ಬೆಲೆ ಸರಿಸುಮಾರು 13 ಲಕ್ಷ ರೂಪಾಯಿ ದಾಟಿದೆ. ಕೆಲ ಸ್ಟಂಟ್ ದೃಶ್ಯ ಹಾಗೂ ಹೀರೋಯಿಸಂ ಸೀನ್‌ಗಳಲ್ಲಿ ಪ್ರಭಾಸ್ ಈ ಬೈಕ್ ಬಳಿಸಿದ್ದಾರೆ.

ಸಾಹೋ ಚಿತ್ರದಲ್ಲಿ ಪ್ರಭಾಸ್ ಬಳಿಸಿರುವ ದುಬಾರಿ ಬೈಕ್ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ RS. ಈ ಬೈಕ್ 765 cc, 2 ಸಿಲಿಂಡರ್ ಎಂಜಿನ್ ಹೊಂದಿದ್ದು,  121 bhp(@11,700 rpm) ಹಾಗೂ 77 Nm(@10,800 rpm) ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ  ಪವರ್‌ಫುಲ್ ಬೈಕ್‌ನಲ್ಲಿ ಪ್ರಭಾಸ್ ಸ್ಟಂಟ್ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಬುಲೆಟ್ 350 ABS ಬೈಕ್ ಬೆಲೆ ಬಹಿರಂಗ!

ಚಿತ್ರಕ್ಕಾಗಿ ಸ್ವತಃ ಪ್ರಭಾಸ್ ಈ ಬೈಕ್ ಖರೀದಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಬಾಹುಬಲಿ ಬಳಿಕ ಪ್ರಭಾಸ್ ನಟಿಸುತ್ತಿರುವ ಸಾಹೋ ಚಿತ್ರ ಹಲವು ಕಾರಣಗಳಿಂದ ಭಾರಿ ಸದ್ದಿಯಾಗಿದೆ. ಇಷ್ಟೇ ಸಿನಿ ಪ್ರಿಯರ ಕಾತರ ಕೂಡ ಹೆಚ್ಚಾಗಿದೆ. 300 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರ ಆಗಸ್ಟ್ 15ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. 

click me!