ಭಾರತದ ಕಾರುಗಳಿಗೆ ನಡುಕ, ಚೀನಾ ಗ್ರೇಟ್ ವಾಲ್ ಮೋಟಾರ್ಸ್ ಆಗಮನ!

By Suvarna NewsFirst Published Feb 2, 2020, 6:53 PM IST
Highlights

ಚೀನಾದ ಅತೀ ದೊಡ್ಡ ಕಾರು ತಯಾರಿಕ ಕಂಪನಿ ಗ್ರೇಟ್ ವಾಲ್ ಮೋಟಾರ್ಸ್ ಭಾರತಕ್ಕೆ ಆಗಮಿಸುತ್ತಿದೆ. ನವದೆಹಲಿಯಲ್ಲಿ ನಡೆಯಲಿರುವ ಅಟೋ ಎಕ್ಸ್ಪೋದಲ್ಲಿ ಗ್ರೇಟ್ ವಾಲ್ ಮೋಟಾರ್ಸ್ SUV ಕಾರುಗಳನ್ನು ಅನಾವರಣ ಮಾಡಲು ರೆಡಿಯಾಗಿದೆ. ಇದು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯನ್ನೇ ತಲ್ಲಣಗೊಳಿಸಿದೆ. 

ನವದೆಹಲಿ(ಫೆ.02): ಚೀನಾ ಮಾಲೀಕತ್ವದ ಬ್ರಿಟೀಷ್ ಕಾರು ಎಂಜಿ ಹೆಕ್ಟರ್ ಭಾರತದಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಚೀನಾದ ಹಲವು ಕಾರು ಕಂಪನಿಗಳು ಭಾರತದಲ್ಲಿ ವ್ಯವಹಾರ ಆರಂಭಿಸಲು ತುದಿಗಾಲಲ್ಲಿ ನಿಂತಿದೆ. ಇದೀಗ ಚೀನಾದ ಗ್ರೇಟ್ ವಾಲ್ ಮೋಟಾರ್ಸ್ ಭಾರತಕ್ಕೆ ಆಗಮಿಸುತ್ತಿದೆ. ಆಟೋ ಎಕ್ಸ್ಪೋ 2020ರ ಮೋಟಾರು ಶೋದಲ್ಲಿ SUV ಕಾರು ಅನಾವರಣ ಮಾಡುತ್ತಿದೆ.

ಇದನ್ನೂ ಓದಿ: ಭಾರತದ ಮೊಬೈಲ್ ಇಂಡಸ್ಟ್ರಿ ಮುಳುಗಿಸಿದ ಚೀನಾ ಮುಂದಿನ ಟಾರ್ಗೆಟ್ ಆಟೋಮೊಬೈಲ್!

ಗ್ರೇಟ್ ವಾಲ್ ಮೋಟಾರ್ಸ್ ಭಾರತ ಆಗಮನವನ್ನು ಖಚಿತಪಡಿಸಿದೆ. ಗ್ರೇಟರ್ ನೋಯ್ಡಾದಲ್ಲಿ ಫೆಬ್ರವರಿ 7 ರಿಂದ 12ರ ವರೆಗೆ ನಡಯಲಿರುವ ಆಟೋ ಎಕ್ಸ್ಪೋದಲ್ಲಿ ಗ್ರೇಟ್ ವಾಲ್ ಮೋಟಾರ್ಸ್ ಹಲವು ಕಾರುಗಳನ್ನು ಪರಿಚಯಿಸಲಿದೆ. ಇಷ್ಟೇ ಅಲ್ಲ ಅಧೀಕೃತವಾಗಿ ಗ್ರೇಟ್ ವಾಲ್ ಕಂಪನಿ ಭಾರತ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ.

ಇದನ್ನೂ ಓದಿ: ಭಾರತಕ್ಕೆ ಬರುತ್ತಿದೆ ಕಡಿಮೆ ಬೆಲೆಯ ಚೀನಾ ಎಲೆಕ್ಟ್ರಿಕ್ ಕಾರು; 350KM ಮೈಲೇಜ್!

ಗ್ರೇಟ್ ವಾಲ್ ಮೋಟಾರ್ಸ್ ತನ್ನ ಹವಲ್ ಬ್ರ್ಯಾಂಡ್‌ನಲ್ಲಿ SUV ಕಾರುಗಳನ್ನು ಪರಚಯಿಸುತ್ತಿದೆ. ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಗ್ರೇಟ್ ವಾಲ್ ಮೋಟಾರ್ಸ್ ಸಂಚಲನ ಮೂಡಿಸಲಿದೆ. ಭಾರತೀಯ ಗ್ರಾಹಕರೊಂದಿಗೆ, ಅವರ ಬೇಡಿಕೆಗೆ ಅನುಗುಣವಾಗಿ ಕಾರುಗಳನ್ನು ನೀಡಲಿದ್ದೇವೆ. ಲಕ್ಸುರಿ, ಐಷಾರಾಮಿ ಕಾರುಗಳು ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ಲಭ್ಯವಾಗಲಿದೆ ಎಂದು ಗ್ರೇಟ್ ವಾಲ್ ಮೋಟಾರ್ಸ್ ಹೇಳಿದೆ.

ಭಾರತದಲ್ಲಿರುವ ಜನರಲ್ ಮೋಟಾರ್ಸ್ ಜೊತೆ ಒಪ್ಪಂದ ಮಾಡಿಕೊಂಡಿರುವ ಗ್ರೇಟ್ ವಾಲ್ ಮೋಟಾರ್ಸ್, ತೆಲಂಗಾಣದಲ್ಲಿರುವ ಜನರಲ್ ಮೋಟಾರ್ಸ್ ಉತ್ಪಾದನ ಘಟಕದಲ್ಲಿ ಚೀನಾ ಕಾರುಗಳು ನಿರ್ಮಾಣವಾಗಲಿದೆ. 

click me!