ಜನವರಿ 2019ರಲ್ಲಿ ಗರಿಷ್ಠ ಮಾರಾಟವಾದ ಕಾರು ಯಾವುದು?

Published : Feb 02, 2019, 09:40 PM IST
ಜನವರಿ 2019ರಲ್ಲಿ ಗರಿಷ್ಠ ಮಾರಾಟವಾದ ಕಾರು ಯಾವುದು?

ಸಾರಾಂಶ

ಹೊಸ ವರ್ಷ ಹೊಂಡಾ  ಕಾರು ಕಂಪನಿಗೆ ಸಿಹಿ ನೀಡಿದರೆ, ಟಾಟಾ ಮೋಟಾರ್ಸ್‌ಗೆ ಕಹಿ ಅನುಭವ ನೀಡಿದೆ. 2019ರ ಜನವರಿಯಲ್ಲಿ ಮಾರಾಟವಾದ ಕಾರುಗಳ ಲಿಸ್ಟ್ ಬಿಡುಗಡೆಯಾಗಿದೆ. ಯಾವ ಬ್ರ್ಯಾಂಡ್ ಕಾರು ಹೆಚ್ಚು ಮಾರಾಟವಾಗಿದೆ. ಯಾರು ನಿರಾಸೆ ಅನುಭವಿಸಿದ್ದಾರೆ. ಇಲ್ಲಿದೆ ಮಾಹಿತಿ.

ನವದೆಹಲಿ(ಫೆ.02): ಹೊಸ ವರ್ಷದಲ್ಲಿ ಕಾರು ಮಾರಾಟದಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. ಆದರೆ ಆಟೋಮೊಬೈಲ್ ಕಂಪೆನಿಗಳಿಗೆ ಸಮಾಧಾನ ತಂದಿದೆ. ವಿಶೇಷ ಅಂದರೆ ಹೊಂಡಾ ಕಾರುಗಳ ಮಾರಾಟದಲ್ಲಿ ಗಣನೀಯವಾದ ಏರಿಕೆಯಾಗಿದ್ದರೆ, ಟಾಟಾ ಮೋಟಾರ್ಸ್ ಇಳಿಮುಖವಾಗಿದೆ.

ಇದನ್ನೂ ಓದಿ: 3 ಲಕ್ಷ ರೂಪಾಯಿಗೆ ಖರೀದಿಸಬಹುದಾದ ಟಾಪ್ 3 ಕಾರು!

ಎಂದಿನಂತೆ ಮಾರುತಿ ಸುಜುಕಿ ಕಾರುಗಳು ಗರಿಷ್ಠ ಮಾರಾಟದೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದರೆ, 5ನೇ  ಸ್ಥಾನದಲ್ಲಿದ್ದ ಹೊಂಡಾ ಮೋಟಾರ್ಸ್ ಟಾಟಾ ಮೋಟಾರ್ಸ್ ಹಿಂದಿಕ್ಕಿ ನಾಲ್ಕನೇ ಸ್ಥಾನ ಅಕ್ರಮಿಸಿಕೊಂಡಿದೆ. ಈ ಮೂಲಕ ಹೊಂಡಾ 23% ಏರಿಕೆ ಕಂಡಿದ್ದರೆ, ಟಾಟಾ -13% ಇಳಿಕೆಯಾಗಿದೆ.

2019ರ ಜನವರಿಯಲ್ಲಿ ಕಾರು ಮಾರಾಟ

ರ‍್ಯಾಂಕ್ಬ್ರ್ಯಾಂಡ್ಜ.2019ಜ.2018
1ಮಾರುತಿ ಸುಜುಕಿ1,42,1501,40,600
2ಹ್ಯುಂಡೈ45,80345,508
3ಮಹೀಂದ್ರ22,39922,360
4ಹೊಂಡಾ18,26114,838
5ಟಾಟಾ17,82620,055

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ