ಟಾಟಾ ಹ್ಯಾರಿಯರ್ SUV - ನೂತನ ಕಾರಿನ ವಿಶೇಷತೆ ಏನು?

By Web DeskFirst Published Feb 2, 2019, 7:03 PM IST
Highlights

ಜೀಪ್ ಕಂಪಾಸ್ ಕಾರುಗಳಿಗೆ ತೀವ್ರ ಪೈಪೋಟಿ ಎದುರಾಗಿದೆ. ಟಾಟಾ ಬಿಡುಗಡೆ ಮಾಡಿರುವ ನೂತನ ಹರಿಯರ್ ಕಾರು ಬಹುಬೇಡಿಕೆಯೆ ಕಾರಾಗಿ ಹೊರಹೊಮ್ಮಿದೆ. ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.

ನವದೆಹಲಿ(ಫೆ.02):  ಎಲ್ಲಿ ಹೋಗುವುದಾದರೂ ಆರಾಮಾಗಿ ಹೋಗಿ ಬರಬೇಕು ಎಂದುಕೊಳ್ಳವವರ ಮೊದಲ ಆಯ್ಕೆ ಎಸ್‌ಯುವಿ ಆಗಿರುತ್ತದೆ. ಹಾಗಾಗಿಯೇ ಇದು ಎಸ್‌ಯುವಿಗಳ ಕಾಲ. ಜಗತ್ತು ಹೀಗಿರುವುದರಿಂದ ಟಾಟಾ ಕಂಪನಿ ತನ್ನ ಹೊಚ್ಚ ಹೊಸ ಎಸ್‌ಯುವಿ ಟಾಟಾ ಹಾರಿಯರ್‌ ಅನ್ನು ಮಾರುಕಟ್ಟೆಗೆ ಬಿಟ್ಟಿದೆ. ಇದರ ಬೆಲೆ ರೂ.12.69 ಲಕ್ಷ.

ಇದನ್ನೂ ಓದಿ: ರಾಜಧಾನಿಯ ವಾಹನಗಳಿಗೆ ಹೈ ಸೆಕ್ಯೂರಿಟಿ ಪ್ಲೇಟ್-ಕಲರ್ ಕೋಡ್ ಕಡ್ಡಾಯ!

ದೂರದಿಂದ ನೋಡಿದರೆ ಥಟ್‌ ಅಂತ ಗಮನ ಸೆಳೆಯುವ ಈ ಎಸ್‌ಯುವಿ ಆಕಾರದಲ್ಲಿ ದೊಡ್ಡದು. ಉದ್ದ 4598 ಎಂಎಂ, ಎತ್ತರ 1705 ಎಂಎಂ. ಹೊರಗಿನಿಂದ ಎಷ್ಟುದೊಡ್ಡದು ಅನ್ನಿಸುತ್ತದೆ ಒಳಗೆ ಕೂಡ ಆರಾಮ ಅನ್ನಿಸುವ ಜಾಗ ಇದೆ. ಐದು ಜನ ಆರಾಮಾಗಿ ಕೂರಬಹುದಾದ ಈ ಎಸ್‌ಯುವಿ ಎಕ್ಸ್‌ಇ, ಎಕ್ಸ್‌ಎಂ, ಎಕ್ಸ್‌ಟಿ, ಎಕ್ಸ್‌ಝಡ್‌ ಎಂಬ ನಾಲ್ಕು ಮಾದರಿಗಳಲ್ಲಿ ದೊರೆಯುತ್ತವೆ. ಕಣ್ಣಿಗೆ ಹಿತ ಅನ್ನಿಸುವ ಐದು ಬಣ್ಣಗಳು ಲಭ್ಯ.

ಇದನ್ನೂ ಓದಿ: ಅತೀ ಕಡಿಮೆ ಬೆಲೆಗೆ ನೂತನ ರೆನಾಲ್ಟ್ ಕ್ವಿಡ್ ABS ಕಾರು ಬಿಡುಗಡೆ!

ಡೀಸೆಲ್‌ ಇಂಜಿನ್‌, ಆರು ಏರ್‌ ಬ್ಯಾಗುಗಳು
ಅತ್ಯಾಧುನಿಕ ಒಮೆಗಾ ತಂತ್ರಜ್ಞಾನ ಹೊಂದಿರುವುದು ಈ ಕಾರಿನ ಹೆಗ್ಗಳಿಕೆ. ಕ್ರಿಯೋಟೆಕ್‌ 2.0 ಡೀಸೆಲ್‌ ಇಂಜಿನ್‌ ಹೊಂದಿರುವ ಎಸ್‌ಯುವಿ ಇದು. ಇಂಜಿನ್‌ 140 ಪಿಎಸ್‌ ಪವರ್‌, 350 ಎನ್‌ಎಂ ಟಾರ್ಕ್ ಸಾಮರ್ಥ್ಯ ಹೊಂದಿದೆ. ಆರು ಸ್ಪೀಡ್‌ ಗೇರ್‌ ಇದೆ. ಅದರಲ್ಲೂ ಬೇರೆ ಬೇರೆ ರಸ್ತೆಯಲ್ಲಿ ಸುಲಭವಾಗಿ ವಾಹನ ಓಡಿಸುವಂತೆ ಫೀಲ್‌ ಸಿಗಲು ಬೇರೆ ಬೇರೆ ಮೋಡ್‌ಗಳಿವೆ. ಮಣ್ಣು ರಸ್ತೆ, ಹೈವೇ, ಬೆಟ್ಟದ ಗುಡ್ಡಗಳು ಹೀಗೆ ಯಾವುದೇ ಥರದ ರಸ್ತೆಯಲ್ಲೂ ಈ ಕಾರು ಚಲಾಯಿಸಬಹುದು. ಸೇಫ್ಟಿಗೆ ಆರು ಏರ್‌ ಬ್ಯಾಗ್‌ಗಳಿವೆ.

ಇದನ್ನೂ ಓದಿ: ಸರ್ಕಾರಕ್ಕೆ ಎಲೆಕ್ಟ್ರಿಕ್ ಕಾರು ಹಸ್ತಾಂತರಿಸಿದ ಕಿಯಾ ಮೋಟಾರ್ಸ್!

ಈಗೀಗ ಎಲ್ಲಾ ಕಾರುಗಳು ಎಂಟರ್‌ಟೇನ್‌ಮೆಂಟಿಗೆ ಹೊಸ ಥರದ ಆಯ್ಕೆಗಳನ್ನು ಹುಡುಕುತ್ತಲೇ ಇರುತ್ತವೆ. ಈ ಕಾರಿನಲ್ಲಿ 8.8 ಇಂಚಿನ ಹೈ ರೆಸೆಲ್ಯೂಷನ್‌ ಡಿಸ್‌ಪ್ಲೇ ಇರುವ ಇಸ್ಫೋಟೈನ್ಮೆಂಟ್‌ ಉಪಕರಣ ಇದೆ. ವಾಯ್ಸ್ ರೆಕಗ್ನಿಷನ್‌ ತಂತ್ರಜ್ಞಾನ ಅಳವಡಿಸಲಾಗಿದೆ. 320 ವ್ಯಾಟ್‌ ಆರ್‌ಎಂಎಸ್‌ ಜೆಬಿಎಲ್‌ ಆಡಿಯೋ ಸಿಸ್ಟಮ್‌ 9 ಸ್ಪೀಕರುಗಳನ್ನು ಹೊಂದಿದ್ದು, ಆಡಿಯೋ ಕೇಳುವುದೇ ಚೆಂದ.

ಈ ಕಾರಿನ ಬಿಡುಗಡೆ ಕಾರ್ಯಕ್ರದಲ್ಲಿ ಭಾಗವಹಿಸಿದ್ದ ಟಾಟಾ ಕಂಪನಿಯ ಚೀಫ್‌ ಟೆಕ್ನಾಲಜಿ ಆಫೀಸರ್‌ ರಾಜೇಂದ್ರ ಪೇಟ್ಕರ್‌, ಎಲ್ಲಾ ಥರದ ವಾತಾವರಣಗಳಲ್ಲೂ ಪರಿಶೀಲಿಸಿ ಎಲ್ಲಾ ಕಡೆ ಹೊಂದಿಕೊಳ್ಳುವ ಕಾರನ್ನು ದೇಶಕ್ಕೆ ಅರ್ಪಿಸುತ್ತಿದ್ದೇವೆ ಎಂದರು. ಮಾರ್ಕೆಟಿಂಗ್‌ ಹೆಡ್‌ ವಿವೇಕ್‌ ಶ್ರೀವಾಸ್ತವ, ಅತ್ಯಾಧುನಿ ತಂತ್ರಜ್ಞಾನ ಬಳಸಿ ತಯಾರಿಸಲಾದ ಟಾಟಾ ಹಾರಿಯರ್‌ ಎಸ್‌ಯುವಿ ಜನರಿಗೆ ನೀಡಲು ಸಂತೋಷವಾಗುತ್ತದೆ ಎಂದರು.

click me!