ಕಾರು ಕೊಳ್ಳುವವರ ಸಂಖ್ಯೆ ಭಾರಿ ಇಳಿಕೆ: ವಿತರಕರ ಬಳಿ 60 ಸಾವಿರ ಕೋಟಿ ಮೊತ್ತದ ಕಾರು ದಾಸ್ತಾನು ಬಾಕಿ

By Kannadaprabha News  |  First Published Jul 10, 2024, 11:25 AM IST

ಕಳೆದ ಕೆಲ ತಿಂಗಳಿನಿಂದ ಕಾರು ಮಾರಾಟದಲ್ಲಿ ಇಳಿಕೆ ಕಂಡುಬಂದ ಪರಿಣಾಮ, ದೇಶಾದ್ಯಂತ ಕಾರು ಮಾರಾಟಗಾರರ ಬಳಿ 60000 ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಕಾರು ಸಂಗ್ರಹ ಉಳಿದುಕೊಂಡಿದೆ ಎಂದು ವರದಿಗಳು ತಿಳಿಸಿವೆ.


ನವದೆಹಲಿ: ಕಳೆದ ಕೆಲ ತಿಂಗಳಿನಿಂದ ಕಾರು ಮಾರಾಟದಲ್ಲಿ ಇಳಿಕೆ ಕಂಡುಬಂದ ಪರಿಣಾಮ, ದೇಶಾದ್ಯಂತ ಕಾರು ಮಾರಾಟಗಾರರ ಬಳಿ 60000 ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಕಾರು ಸಂಗ್ರಹ ಉಳಿದುಕೊಂಡಿದೆ ಎಂದು ವರದಿಗಳು ತಿಳಿಸಿವೆ. ಕೋವಿಡ್‌-19ರ ನಂತರ ಕಾರು ಮತ್ತು ಎಸ್‌ಯುವಿ ವಾಹನಗಳ ಬೇಡಿಕೆ ವಿಪರೀತ ಏರಿಕೆ ಕಂಡಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಗಳು ಕಾರುಗಳ ಉತ್ಪಾದನೆ ಹೆಚ್ಚಳ ಮಾಡಿದ್ದವು. ಸ್ವಲ್ಪ ಕಾಲ ಬೇಡಿಕೆಯೂ ಉತ್ತಮವಾಗಿಯೇ ಇತ್ತು. 

ಆದರೆ ಲೋಕಸಭಾ ಚುನಾವಣೆ ವೇಳೆ ಸ್ವಲ್ಪ ಇಳಿದಿದ್ದ ಮಾರಾಟ, ಫಲಿತಾಂಶದ ಬಳಿಕ ಏರಿಕೆಯಾಗುವ ನಿರೀಕ್ಷೆಯನ್ನು ಕಂಪನಿಗಳು ಹೊಂದಿದ್ದವು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟ ದಾಖಲಾಗದ ಕಾರಣ ಇದೀಗ ಭಾರೀ ಪ್ರಮಾಣದ ಕಾರು ಹಾಗೆಯೇ ಉಳಿದುಕೊಂಡಿದೆ. ಈ ಸಂಗ್ರಹ 62 ರಿಂದ 67 ದಿನಗಳ ಮಾರಾಟದ ಬೇಡಿಕೆ ಪೂರೈಸುವಷ್ಟು ಇದೆ.

Tap to resize

Latest Videos

undefined

ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ಟಾಟಾ, SUV ಕಾರುಗಳಿಗೆ 1.4 ಲಕ್ಷ ರೂ ವರೆಗೆ ರಿಯಾಯಿತಿ!

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸರಾಸರಿ 6 ರಿಂದ 6.5 ಲಕ್ಷ ವಾಹನಗಳ ಸಂಗ್ರಹ ಇರುತ್ತದೆ. ಹಾಲಿ ಈ ಸಂಗ್ರಹ ಮತ್ತಷ್ಟು ಹೆಚ್ಚಿದೆ. ಇವುಗಳ ಸರಾಸರಿ ಮೌಲ್ಯ 9.5 ಲಕ್ಷ ಎಂದಿಟ್ಟು ಕೊಂಡರೆ ಮಾರಾಟಕ್ಕೆ ಇರುವ ಕಾರುಗಳ ಮೌಲ್ಯ 60000 ಕೋಟಿ ರು. ತಲುಪುತ್ತದೆ. ಮಾರಾಟ ಹೆಚ್ಚಳಕ್ಕೆ ಕಂಪನಿಗಳು ದಾಖಲೆ ಪ್ರಮಾಣದ ಆಫರ್‌ ನೀಡಿದರೂ ಗ್ರಾಹಕರು ಬರುತ್ತಿಲ್ಲ ಎಂದು ಉತ್ಪಾದಕ ಕಂಪನಿಗಳು ಕಳವಳಗೊಂಡಿವೆ. ಜೂನ್‌ ತಿಂಗಳಲ್ಲಿ ಸಗಟು ಮಾರಾಟಗಾರರಿಗೆ 3.41 ಲಕ್ಷ ಕಾರುಗಳು ಪೂರೈಕೆಯಾಗಿದ್ದರೆ, ಮಾರಾಟವಾಗಿರುವುದು 2.81 ಲಕ್ಷ ಮಾತ್ರ. 

ಕಾರಣ ಏನು?:
ಮುಂಗಾರು ಸಮಯದಲ್ಲಿ ಮಾರಾಟ ಇಳಿಕೆಯಾಗುವುದು. ಮಾರುಕಟ್ಟೆಗೆ ಹೊಸ ಹೊಸ ಮಾದರಿ ಕಾರುಗಳ ಪ್ರವೇಶ. ಬ್ಯಾಂಕ್‌ಗಳು ಉತ್ತಮ ಸಿಬಿಲ್‌ ಅಂಕ ಹೊಂದಿರುವವರಿಗೆ ಮಾತ್ರವೇ ಸಾಲ ನೀಡುತ್ತಿರುವುದು. ಬಿಸಿಲು ಹೆಚ್ಚಾದ ಕಾರಣ ಶೋರೂಂಗಳತ್ತ ಜನತೆ ಮುಖ ಮಾಡದೇ ಇರುವುದು ಈ ಬೆಳವಣಿಗೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಪ್ರಧಾನಿಗೆ ಚಾಲಕನಾದ ರಷ್ಯಾ ಅಧ್ಯಕ್ಷ : ಇಲೆಕ್ಟ್ರಿಕ್ ಕಾರ್‌ನಲ್ಲಿ ಮೋದಿ ಪುಟಿನ್ ರೌಂಡ್ಸ್

click me!