ಟಾಟಾ ಮೋಟಾರ್ಸ್ 20 ಲಕ್ಷ ಎಸ್‌ಯುವಿ ಮೈಲಿಗಲ್ಲು ಸ್ಥಾಪಿಸಿದೆ. ಈ ಸಂಭ್ರಮದಲ್ಲಿ ಟಾಟಾ ಮೋಟಾರ್ಸ್ ಇದೀಗ ಎಸ್‌ಯುವಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಬರೋಬ್ಬರಿ 1.4 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ.
ಮುಂಬೈ(ಜು.09) ಟಾಟಾ ಮೋಟಾರ್ಸ್ 2 ಮಿಲಿಯನ್ ಎಸ್‌ಯುವಿಗಳನ್ನು ಹೊಂದಿರುವ ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಿಸಿದೆ. ಹಿಂದಿನ ಕಾಲದ ಜನಪ್ರಿಯ ಟಾಟಾ ಎಸ್‌ಯುವಿಗಳಾದ ಸಿಯೆರಾ ಮತ್ತು ಸಫಾರಿಯನ್ನು ಒಳಗೊಂಡು ಹೊಸ ಕಾಲದ ಸಫಾರಿ, ಹ್ಯಾರಿಯರ್, ನೆಕ್ಸಾನ್, ಪಂಚ್ ಸೇರಿ ಟಾಟಾ ಮೋಟಾರ್ಸ್ SUV 20 ಲಕ್ಷ ಮೈಲಿಗಲ್ಲು ದಾಟಿದೆ. ಈ ಸಂಭ್ರಮಾಚರಣೆಯಲ್ಲಿ ಟಾಟಾ ಮೋಟಾರ್ಸ್ ಎಸ್‌ಯುವಿ ಕಾರುಗಳ ಮೇಲೆ 1.4 ಲಕ್ಷ ರೂಪಾಯಿ ಆಫರ್ ನೀಡಿದೆ.
ಕಿಂಗ್ ಆಫ್ ಎಸ್‌ಯುವಿ ಎಂಬ ಉತ್ಸವವನ್ನು ಟಾಟಾ ಆಯೋಜಿಸಿದೆ. ಈ ಮೂಲಕ ಗ್ರಾಹಕರ ಜೊತೆ ಸಂತೋಷವನ್ನು ಹಂಚಲು ಟಾಟಾ ಸಜ್ಜಾಗಿದೆ. ಪ್ರಮುಖ ಎಸ್‌ಯುವಿಗಳಾದ ಟಾಟಾ ಹ್ಯಾರಿಯರ್ ಹಾಗೂ ಸಫಾರಿ ಬೆಲೆಯಲ್ಲಿ 1.4 ಲಕ್ಷ ರೂಪಾಯಿ ಕಡಿತಗೊಳಿಸಲಾಗಿದೆ. ಹ್ಯಾರಿಯರ್ (₹14.99 ಲಕ್ಷಗಳು) ಮತ್ತು ಸಫಾರಿ (₹15.49)ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಜನಪ್ರಿಯ ಎಸ್‌ಯುವಿ ರೂಪಾಂತರಗಳಲ್ಲಿ ₹ 1.4 ಲಕ್ಷದವರೆಗಿ ಪ್ರಯೋಜನಗಳನ್ನು ನೀಡಲಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದಂತೆ, ನೆಕ್ಸಾನ್.ಇವಿಯಲ್ಲಿ ಹಿಂದೆಂದೂ ಇರದ ಪ್ರಯೋಜನಗಳು (1.3 ಲಕ್ಷದವರೆಗೆ) ದೊರೆಯುತ್ತಿದ್ದು, ನೆಕ್ಸಾನ್ ಖರೀದಿಸುವುದು ಈಗ ಮೊದಲಿಗಿಂತ ಸುಲಭವಾಗಿದೆ. ಇದಕ್ಕೆ ಪೂರಕವಾಗಿ, ಪಂಚ್.ಇವಿಯಲ್ಲಿ ಸಹ ₹30,000 ವರೆಗಿನ ಸೌಲಭ್ಯ ದೊರೆಯುತ್ತಿದೆ.
undefined
ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ SUV ಕಾರು ಯಾವುದು? ಮೊದಲೆರೆಡು ಸ್ಥಾನ ಟಾಟಾ ಪಾಲು!
ಇದರ ಜೊತೆಗೆ ಏಳು ವರ್ಷದಲ್ಲಿ 7 ಲಕ್ಷ ನೆಕ್ಸಾನ್‌ಗಳು ರಸ್ತೆಯಲ್ಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ 7 ಇನ್ 7 ಸಂಭ್ರಮಾಚರಣೆಯು ಗ್ರಾಹಕರ ಬೇಡಿಕೆಯ ಮೇರೆಗೆ ಮುಂದುವರಿಯುತ್ತದೆ.ಈ ಸಂಭ್ರಮಾಚರಣೆಯ ಕೊಡುಗೆಗಳು ಜುಲೈ 31 ರವರೆಗಿನ ಬುಕಿಂಗ್‌ಗಳಿಗೆ ಮಾತ್ರ ಮಾನ್ಯವಾಗಿರುತ್ತವೆ. ಷರತ್ತುಗಳು ಮತ್ತು ನಿಬಂಧನೆಗಳು ಅನ್ವಯಿಸುತ್ತವೆ.
1991ರಲ್ಲಿ ಭಾರತದಲ್ಲಿ ಟಾಟಾ ಸಿಯೆರಾ ಎಂಬ ಮೊದಲ ಎಸ್‌ಯುವಿ ಅನ್ನು ಬಿಡುಗಡೆ ಮಾಡಿತ್ತು. ಅಲ್ಲಿಂದ ಶುರುವಾದ ಟಾಟಾ ಎಸ್‌ಯುವಿ ದರ್ನಿ 2014ರ ಆಟೋ ಎಕ್ಸ್‌ಪೋದಲ್ಲಿ ಭಾರತದ ಮೊದಲ ಕಾಂಪ್ಯಾಕ್ಟ್ ಎಸ್‌ಯುವಿ ಕಾನ್ಸೆಪ್ಟ್ ನಲ್ಲಿ ನೆಕ್ಸಾನ್, ಜೊತೆಗೆ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಪಂಚ್ ಬಿಡುಗಡೆ ಮಾಡುವುದರೊಂದಿಗೆ ಹೊಸ ದಾಖಲೆ ನಿರ್ಮಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಎಸ್‌ಯುವಿಗಳ ಪೋರ್ಟ್‌ಫೋಲಿಯೋಗಳಿಗೆ ಬಿ-ಎನ್‌ಸಿಎಪಿ ಮತ್ತು ಜಿ-ಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಪಡೆದ ಹೆಗ್ಗಳಿಗೆಕೆ ಪಾತ್ರವಾಗಿದೆ.
ಭಾರತೀಯ ಗ್ರಾಹಕರಿಗೆ ದೃಢವಾದ, ಸುರಕ್ಷಿತವಾದ ಮತ್ತು ತಾಂತ್ರಿಕವಾಗಿ ಮುಂದುವರಿದಿರುವ ವಿಶ್ವ ದರ್ಜೆಯ ಎಸ್‌ಯುವಿಗಳನ್ನು ಒದಗಿಸುವುದೇ ಆಗಿದೆ. ಎಸ್‌ಯುವಿ ವಿಭಾಗದಲ್ಲಿ 2 ಮಿಲಿಯನ್ ಎಸ್‌ಯುವಿ ಮಾರಾಟ ಮಾಡಿರುವ ನಮ್ಮ ಸಾಧನೆಯು ಈ ವಿಧಾನಕ್ಕೆ ಸಾಕ್ಷಿಯಾಗಿದೆ ಮತ್ತು ಭವಿಷ್ಯದ ಬೆಳವಣಿಗೆಗೆ ಬೇಕಾದ ವೇಗವನ್ನು ನಮಗೆ ನೀಡಿದೆ ಎಂದು ಟಾಟಾ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಹೇಳಿದ್ದಾರೆ.
ಹೊಸ ದಾಖಲೆ ಬರೆದ ಟಾಟಾ ಪಂಚ್ ಇವಿ, ಭಾರತದ ಸುರಕ್ಷಿತ ಎಲೆಕ್ಟ್ರಿಕ್ ಕಾರು ಹೆಗ್ಗಳಿಕೆ!