ಸ್ವಾತಂತ್ರ್ಯ ದಿನಾಚರಣೆಗೆ ಪ್ರತಿ ವರ್ಷ ಬಾಲಕನ ವಿಡಿಯೋ ನೋಡಿ ಪುಳಕಿತರಾಗ್ತಾರೆ ಆನಂದ್ ಮಹೀಂದ್ರ!

Published : Aug 16, 2020, 03:36 PM IST
ಸ್ವಾತಂತ್ರ್ಯ ದಿನಾಚರಣೆಗೆ ಪ್ರತಿ ವರ್ಷ ಬಾಲಕನ ವಿಡಿಯೋ ನೋಡಿ ಪುಳಕಿತರಾಗ್ತಾರೆ ಆನಂದ್ ಮಹೀಂದ್ರ!

ಸಾರಾಂಶ

ದೇಶದೆಲ್ಲೆಡೆ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡಲಾಗಿದೆ. ಕೊರೋನಾ ವೈರಸ್ ಕಾರಣ ಹೆಚ್ಚಿನವರು ತಮ್ಮ ತಮ್ಮ ಮನೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಂಡಿದ್ದಾರೆ. ಆಟೋಮೊಬೈಲ್ ದಿಗ್ಗಜ, ಉದ್ಯಮಿ ಆನಂದ್ ಮಹೀಂದ್ರ, ಸ್ವಾತಂತ್ರ್ಯ ದಿನಾಚರಣೆಗೆ ಪುಟ್ಟ ಬಾಲಕ ವಿಡಿಯೋ ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ, ಈ ಬಾಲಕನ ಜನಗಣ ಮನ ರಾಷ್ಟ್ರಗೀತೆ ಆನಂದ್ ಮಹೀಂದ್ರಾಗೆ ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಗೆ ಉತ್ಸಾಹ ತುಂಬುತ್ತಿದೆ..

ಮುಂಬೈ(ಆ.16): ಕೊರೋನಾ ವೈರಸ್ ಕಾರಣ ಬಹುತೇಕರು ಸಾರ್ವಜನಿಕವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಂಡಿಲ್ಲ. ಆದರೆ ತಮ್ಮ ತಮ್ಮ ಮನೆಯಲ್ಲಿ ದೇಶಭಕ್ತಿ ಮೆರೆದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಸಾರಿದ್ದಾರೆ. ಮಹೀಂದ್ರ ಆಟೋಮೊಬೈಲ್ ಕಂಪನಿ ಸಂಸ್ಥಾಪಕ ಹಾಗೂ ಭಾರತದ ಜನಪ್ರಿಯ ಉದ್ಯಮಿ ಆನಂದ್ ಮಹೀಂದ್ರಗೆ ಸ್ವಾತಂತ್ರ್ಯ ದಿನಾಚರಣೆಗೆ ಜೋಶ್ ತುಂಬುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

 ಅಂತರ ಕಾಯ್ದುಕೊಳ್ಳಲು ರಿಕ್ಷಾ ಚಾಲಕನ ಐಡಿಯಾ; ಭರ್ಜರಿ ಆಫರ್ ನೀಡಿದ ಆನಂದ್ ಮಹೀಂದ್ರ!

ಆನಂದ್ ಮಹೀಂದ್ರ ತಮ್ಮ ಟ್ವಿಟರ್ ಮೂಲಕ ಪುಟ್ಟ ಬಾಲಕನ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸುಮಾರು 3 ವರ್ಷದ ಅಸ್ಸಾಂ ಮೂಲದ ಬಾಲಕ ರಾಷ್ಟ್ರ ಗೀತೆ ಹಾಡುತ್ತಾನೆ. ತನ್ನ ತೊದಲು ನುಡಿಯಲ್ಲಿ ಹಾಡುವ ರಾಷ್ಟ್ರಗೀತೆಯ ಸಾಲುಗಳು ಬದಲಾವಣೆಗಳಾಗಿದ್ದು, ತೊದಲು ಉಚ್ಚಾರಣೆ ಕಾಣಬಹುದು. ಇದರ ಜೊತೆಗೆ ಪುಟ್ಟ ಬಾಲಕನ ದೇಶಭಕ್ತಿಯೂ ಈ ವಿಡಿಯೋದಲ್ಲಿ ಅಡಗಿದೆ. ಬಾಲಕನ ಮುಗ್ದತೆ ಹಾಗೂ ಏಕಾಗ್ರತೆ ಹಾಗೂ ಸಾವಧಾನ್ ಆಗಿ ನಿಂತು ದೇಶಭಕ್ತಿ ಸಾರುವದನ್ನೂ ಕಾಣಬಹುದು. 

 

ತೈವಾನ್ ಅಧ್ಯಕ್ಷರ ಚುನಾವಣಾ ಪ್ರಚಾರ, ಡಬಲ್ ಆಯ್ತು ಆನಂದ್ ಮಹೀಂದ್ರ ಸಂತಸ!

ಈ ವಿಡಿಯೋ ಆನಂದ್ ಮಹೀಂದ್ರಾಗೆ ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಜೋಶ್ ತುಂಬುತ್ತಿದೆ ಎಂದು ಸ್ವತಃ ಆನಂದ್ ಮಹೀಂದ್ರ ಹೇಳಿಕೊಂಡಿದ್ದಾರೆ.  ಈ ವಿಡಿಯೋ ಕೆಲ ವರ್ಷಗಳ ಹಿಂದೆ ನೋಡಿ ಸೇವ್ ಮಾಡಿಕೊಂಡಿದ್ದೇನೆ. ಬಹುಷಾ ಒಂದೆರೆಡು ವರ್ಷಗಳ ಹಿಂದಿನ ವಿಡಿಯೋ. ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಈ ವಿಡಿಯೋ ನೋಡಿ ಪುಳಕಿತನಾಗುತ್ತೇನೆ. ಈ ಬಾಲಕ ಹಾಡುವ ರಾಷ್ಟ್ರಗೀತೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ. ಬಾಲಕನ ಏಕಾಗ್ರತೆ, ಮುಗ್ದತೆ ಪ್ರತಿ ಬಾರಿ ನನ್ನನ್ನು ಸೆಳೆಯುತ್ತದೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

ಸ್ಕೂಟರ್‌ನಲ್ಲಿ ತಾಯಿ ಸುತ್ತಾಡಿಸಿದ ಮೈಸೂರಿಗನಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್!

PREV
click me!

Recommended Stories

ಇದು ಬರೀ ಡಿಸೆಂಬರ್‌ ಅಲ್ಲ, ಕಾರ್‌ ಡಿಸ್ಕೌಂಟ್‌ ಡಿಸೆಂಬರ್‌; ಈ ಐದು ಕಾರ್‌ಗಳಿಗೆ ಇದೆ ಭರ್ಜರಿ ಆಫರ್‌!
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ