ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಬೀಳಲಿದೆ. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ. ಇದೀಗ PUC ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಗೆ ತಲಾ 10,000 ರೂಪಾಯಿ ದಂಡ ಹಾಕಲಾಗಿದೆ.
ನವದೆಹಲಿ(ಆ.16): ಟ್ರಾಫಿಕ್ ನಿಯಮ, ಮಾಲಿನ್ಯ ಪ್ರಮಾಣ ತಗ್ಗಿಸಲು ಮೋಟಾರು ವಾಹನ ಕಾಯ್ದೆಗೆ ತಿದ್ದು ಪಡಿ ತರಲಾಗಿದೆ. ಕಳೆದ ವರ್ಷ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರ ಭಾರಿ ಸಂಚಲನ ಮೂಡಿಸಿತ್ತು. ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದೆ. ಇದರ ಬೆನ್ನಲ್ಲೇ ಮಾಲಿನ್ಯ ತಪಾಸಣೆ (Pollution Under Check)ಮಾಡಿಸದ 440ಕ್ಕೂ ಹೆಚ್ಚು ವಾಹನಕ್ಕೆ ದುಬಾರಿ ದಂಡ ಹಾಕಲಾಗಿದೆ.
ಸಿಂಘಂ ಸಿನಿಮಾ ಸೀನ್ ಮರುಸೃಷ್ಟಿ ಮಾಡಿದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಬಿತ್ತು ಬರೆ!
PUC ತಪಾಸಣೆ ಮಾಡದೇ ನಗರದಲ್ಲಿ ತಿರುಗಾಡುತ್ತಿದ್ದ 439 ಹಾಗೂ ಇತರ 61 ವಾಹನಗಳಿಗೆ ಇ ಚಲನ್ ನೀಡಲಾಗಿದೆ ಎಂದು ದೆಹಲಿ ಸಾರಿ ಇಲಾಖೆ ಹೇಳಿದೆ. ಕೊರೋನಾ ವೈರಸ್ ಕಾರಣ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇದೀಗ ಸಮ ಬೆಸ ಸಂಖ್ಯೆ ನಿಯಮ ಜಾರಿಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಮಾಲಿನ್ಯ ತಪಾಸಣೆ ಕಡ್ಡಾಯವಾಗಿ ಮಾಡಿರಲೇಬೇಕು ಎಂದು ಸಾರಿಗೆ ಇಲಾಖೆ ಹೇಳಿದೆ.
ಆ್ಯಂಬುಲೆನ್ಸ್ ತುರ್ತು ಸೇವೆಗೆ 17 ವರ್ಷದ ಅಪ್ರಾಪ್ತನಿಂದ ಅಡ್ಡಿ; ದುಬಾರಿ ದಂಡ ಜೊತೆ ಜೈಲು ಶಿಕ್ಷೆ!.
ದೆಹಲಿಯಲ್ಲಿ ಪ್ರತಿ 3 ತಿಂಗಳಿಗೆ ಮಾಲಿನ್ಯ ತಪಾಸಣೆ(PUC) ಕಡ್ಡಾಯವಾಗಿದೆ. ಮೊದಲ ಬಾರಿ ಉಲ್ಲಂಘಿಸಿದರೆ 1,000 ರೂಪಾಯಿ, 2ನೇ ಬಾರಿಗೆ 2,000 ರೂಪಾಯಿ ಹಾಗೂ 2ಕ್ಕಿಂತ ಹೆಚ್ಚು ಬಾರಿ ನಿಯಮ ಉಲ್ಲಂಘಿಸಿದರೆ 10,000 ರೂಪಾಯಿ ದಂಡ ಹಾಕಲಾಗುತ್ತದೆ. ತಪಾಸಣೆ ಮಾಡಿ ಅವಧಿ ಮುಗಿದ ವಾಹನಗಳಿಗೂ ದಂಡ ಹಾಕಲಾಗಿದೆ.