ರೆನಾಲ್ಟ್ ಕ್ವಿಡ್ RXL ಕಾರು ಬಿಡುಗಡೆ; ಬೆಲೆ 4.16 ಲಕ್ಷ ರೂ!

By Suvarna News  |  First Published Jul 6, 2020, 8:53 PM IST

ಸಣ್ಣ ಕಾರಿನಲ್ಲಿ ಸಂಚಲನ ಮೂಡಿಸಿದ ರೆನಾಲ್ಟ್ ಕ್ವಿಡ್ ಇದೀಗ RXL ವೇರಿಯೆಂಟ್ ಕಾರು ಬಿಡುಗಡೆ ಮಾಡಿದೆ. BS6 ಎಮಿಶನ್ ಎಂಜಿನ್, ಮಾನ್ಯುಯೆಲ್ ಹಾಗೂ AMT ಟ್ರಾನ್ಸ್‌ಮಿಶನ್ ಹೊಂದಿರುವ ಈ ಕಾರಿನ ವಿಶೇಷತೆ ಇಲ್ಲಿದೆ.


ನವದೆಹಲಿ(ಜು.06): ಭಾರತದಲ್ಲಿ ರೆನಾಲ್ಟ್ ಕ್ವಿಡ್ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದುವರೆಗೆ 3.5 ಲಕ್ಷ ಕ್ವಿಡ್ ಕಾರುಗಳು ಮಾರಾಟವಾಗಿದೆ. ಈ ಸಂಭ್ರಮದ ಬೆನ್ನಲ್ಲೇ ರೆನಾಲ್ಟ್ ಕ್ವಿಡ್ RXL ವೇರಿಯೆಂಟ್ ಕಾರು ಬಿಡುಗಡೆ ಮಾಡಿದೆ. ನೂತನ ಕ್ವಿಡ್ ಮಾನ್ಯುಯೆಲ್  ಕಾರಿನ ಬೆಲೆ 4.16 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಆಗಿದ್ದು, ಇನ್ನು ಕ್ವಿಡ್ AMT(ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್) ಕಾರಿನ ಬೆಲೆ 4.48 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ರೆನಾಲ್ಟ್ ಡಸ್ಟರ್ ಪೆಟ್ರೋಲ್ ಕಾರು ಅನಾವರಣ!

Latest Videos

undefined

ಸದ್ಯ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಡಿಮೆ ದರದ AMT ಕಾರು ಅನ್ನೋ ಹೆಗ್ಗಳಿಕೆಗೆ ಕ್ವಿಡ್ RXL ಕಾರು ಪಾತ್ರವಾಗಿದೆ. ನೂತನ ಕಾರು 1.0 ಲೀಟರ್ ಎಂಜಿನ್ ಹೊಂದಿದೆ. ಇಷ್ಟೇ ಅಲ್ಲ BS6 ಎಮಿಶನ್ ಎಂಜಿನ್ ಹೊಂದಿದೆ.

ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್, SUV ಕಾರು ಅನಾವರಣಕ್ಕೆ ರೆಡಿ!.

ನೂತನ ಕ್ವಿಡ್ ಕಾರು ಸುರಕ್ಷತೆಯನ್ನು ನೀಡಲಿದೆ. ಏರ್‌ಬ್ಯಾಗ್, ಸ್ವೀಡ್ ಅಲರ್ಟ್, ರೇರ್ ಕ್ಯಾಮಾರ ಸ್ಟಾಂಡರ್ಡ್ ಮಾಡಲಾಗಿದೆ. 5 ವರ್ಷ ವಾರೆಂಟ್ ಅಥವಾ 1 ಲಕ್ಷ ಕಿಲೋಮೀಟರ್ ವಾರೆಂಟಿಯನ್ನು ಕ್ವಿಡ್ ನೀಡುತ್ತಿದೆ. ಇದರ ಜೊತೆಗೆ ಡೀಲರ್‌ಗಳು ನೀಡುವ ಹೆಚ್ಚುವರಿ ವಾರೆಂಟಿಯನ್ನು ಪಡೆದುಕೊಳ್ಳಬಹುದು. ಈಗಾಗಲೇ 3.5 ಲಕ್ಷ ಕ್ವಿಡ್ ಕಾರುಗಳು ಮಾರಾಟವಾಗಿರುವುದು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ  ಎಂದು ಕ್ವಿಡ್ ಇಂಡಿಯಾ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ವೆಂಕಟರಾಮ್ ಹೇಳಿದ್ದಾರೆ.

ಕೊರೋನಾ ವೈರಸ್ ಸಂಕಷ್ಟದ ಸಮಯದಲ್ಲಿ ರೆನಾಲ್ಟ್ ಕ್ವಿಡ್ ಈಗ ಖರೀದಿಸಿ, ಬಳಿಕ ಪಾವತಿಸಿ ಸ್ಕೀಮ್ ಜಾರಿ ಮಾಡಿದೆ. ಈ ಯೋಜನೆಯಡಿ ಕಾರು ಖರೀದಿಸುವ ಗ್ರಾಹಕರಿಗ 3 ತಿಂಗಳ EMI ಆರಂಭವಾಗಲಿದೆ.

click me!