2030 ರಿಂದ ಪೆಟ್ರೋಲ್, ಡೀಸೆಲ್ ವಾಹನ ಮಾರಾಟ ಸಂಪೂರ್ಣ ನಿಷೇಧಕ್ಕೆ ನಿರ್ಧಾರ!

By Suvarna NewsFirst Published Nov 15, 2020, 6:24 PM IST
Highlights

 ಪೆಟ್ರೋಲ್ ಹಾಗೂ ಡೀಸೆಲ್ ಕಾರು ಮಾರಾಟ ಸಂಪೂರ್ಣ ನಿಷೇಧಿಸಲು ಮಹತ್ವದ ನಿರ್ಧಾರ ಸರ್ಕಾರ ಮುಂದಾಗಿದೆ.. ಮುಂದಿನ 10 ವರ್ಷದಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಮಯ ಮಾಡಲು ರೂಪುರೇಶೆ ತಯಾರಾಗಿದೆ.

ಲಂಡನ್(ನ.15): ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಮಹತ್ವದ ನಿರ್ಧಾರ ಪ್ರಕಟಿಸಲಿದ್ದಾರೆ.. 2030ರ ವೇಳೆಗೆ ಎಲ್ಲಾ ಪೆಟ್ರೋಲ್, ಡೀಸೆಲ್ ವಾಹನ ಮಾರಾಟ ಸಂಪೂರ್ಣ ನಿಷೇಧಿಸಲು ನಿರ್ಧರಿಸಲಾಗಿದೆ. ಮುಂದಿನ ವಾರ ಪ್ರಧಾನಿ ಬೊರಿಸ್ ಮಹತ್ವದ ನಿರ್ಧಾರ ಪ್ರಕಟಿಸಲಿದ್ದಾರೆ. ಇದಕ್ಕೊ ಮೊದಲು 2040ರ ಗಡುವು ನೀಡಲಾಗಿತ್ತು. ಇದನ್ನು 2035ಕ್ಕೆ ಇಳಿಸಲಾಗಿತ್ತು. ಇದೀಗ 2030ಕ್ಕೆ ಸಂಪೂರ್ಣ ಡೀಸೆಲ್ ಹಾಗೂ ಪೆಟ್ರೋಲ್ ವಾಹನ ಮಾರಾಟ ನಿಷೇಧಕ್ಕೆ ನಿರ್ಣಯ ತೆಗೆದುಕೊಳ್ಳಲಾಗಿದೆ.

ಗ್ಲೋಬಲ್ NCAP ಸುರಕ್ಷತಾ ಪರೀಕ್ಷೆ: ಮಾರುತಿ Sಪ್ರೆಸ್ಸೋ ಕಾರಿನ ಸೇಫ್ಟಿ ಬಹಿರಂಗ!.

ಹೆಚ್ಚಾಗುತ್ತಿರುವ  ವಾಯುಮಾಲಿನ್ಯ, ಪರಿಸರ ಮಾಲಿನ್ಯ, ಜಾಗತಿಕ ತಾಪಮಾನ ಸೇರಿದಂತೆ ಹಲವು ಸಮಸ್ಯೆಗಳಿಗೆ ವಾಹನಗಳಿಂದ ಹೊರಸೂಸುವ ಇಂಗಾಲವೇ ಕಾರಣವಾಗುತ್ತಿದೆ. ಹೀಗಾಗಿ ಪೆಟ್ರೋಲ್ ಹಾಗೂ ಡೀಸೆಲ್ ವಾಹನ ನಿಷೇಧ ಅನಿವಾರ್ಯ ಎಂದು ಬೊರಿಸ್ ಜಾನ್ಸನ್ ಹೇಳಿದ್ದಾರೆ. 

3 ಕೋಟಿ ಬೆಲೆಯ ಪೊರ್ಶೆ 911 ಟರ್ಬೋ S ಕಾರು ಸಂಪೂರ್ಣ ಉಚಿತ; ಒಂದೇ ಕಂಡೀಷನ್!

ಪರಿಸರ ನೀತಿ ಮುಂದಿನ ವಾರ ಪ್ರಕಟಗೊಳ್ಳಲಿದೆ. ಇದರ ಅನುಸಾರ ದಿನಾಂಕ ನಿಗದಿ ಮಾಡಲಿದ್ದೇವೆ ಎಂದು ಜಾನ್ಸನ್ ಹೇಳಿದ್ದಾರೆ. ಹೈಬ್ರಿಡ್ ಕಾರು, ಎಲೆಕ್ಟ್ರಿಕ್ ಕಾರಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ಮೂಲಕ ಪರಿಸರಕ್ಕೆ ಪೂರಕವಾದ ಮಾದರಿಯನ್ನು ಬ್ರಿಟನ್ ಅನುಸರಿಸಲಿದೆ ಎಂದು ಜಾನ್ಸನ್ ಹೇಳಿದ್ದಾರೆ.

click me!