ಬಹುನಿರೀಕ್ಷಿತ ಲ್ಯಾಂಬೋರ್ಗಿನಿ V10 ಸೂಪರ್ ಕಾರು ಅನಾವರಣಕ್ಕೆ ಕೌಂಟ್‌ಡೌನ್!

By Suvarna News  |  First Published Nov 14, 2020, 5:50 PM IST

ಇಟಾಲಿಯನ್ ಕಾರ್ ಮೇಕರ್ ಲ್ಯಾಂಬೋರ್ಗಿನಿ ಹೊಚ್ಚ ಹೊಸ V10 ಸೂಪರ್ ಕಾರು ಅನಾವರಣ ಮಾಡಲು ಸಜ್ಜಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕವರ್ ಮಾಡಿರುವ ಕಾರಿನ ಫೋಟೋ ಹರಿಬಿಟ್ಟಿರುವ ಲ್ಯಾಂಬೋರ್ಗಿನಿ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ನೂತನ ರೇಸಿಂಗ್ ಕಾರು ಫೆರಾರಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.


ಇಟೆಲಿ(ನ.14): ಸೂಪರ್ ಕಾರುಗಳ ಪೈಕಿ ಲ್ಯಾಂಬೋರ್ಗಿನಿ ಕಾರಿಗೆ ಅಗ್ರಸ್ಥಾನವಿದೆ. ಭಾರತದಲ್ಲಿ ಲ್ಯಾಂಬೋರ್ಗಿನಿ ಕಾರು ಖರೀದಿಸುವವರ ಸಂಖ್ಯೆ ಹೆಚ್ಚಿದೆ. ಇದರಲ್ಲಿ ಬಹುಪಾಲು ಬೆಂಗಳೂರಿನ ಕೊಡುಗೆಯಾಗಿದೆ. ಇದೀಗ ಲ್ಯಾಂಬೋರ್ಗಿನಿ V10 ಸೂಪರ್ ರೇಸಿಂಗ್ ಕಾರು ಅನಾವರಣ ಮಾಡಲು ಸಜ್ಜಾಗಿದೆ. ನವೆಂಬರ್ 18 ರಂದು ಹೊಚ್ಚ ಹೊಸ ಕಾರು ಅನಾವರಣಗೊಳ್ಳಲಿದೆ.

ಕೊರೋನಾ ಸಂಕಷ್ಟದ ನಡುವೆ ಹೊಸ ಮೈಲಿಗಲ್ಲು ಸ್ಥಾಪಿಸಿದ ಲ್ಯಾಂಬೋರ್ಗಿನಿ!

Tap to resize

Latest Videos

undefined

ಅನಾವರಣಕ್ಕೂ ಮುನ್ನ ಲ್ಯಾಂಬೋರ್ಗಿನಿ ಕಾರು ಫೋಟೋ ಬಿಡುಗಡೆ ಮಾಡೋ ಮೂಲಕ ಕುತೂಹಲ ಹೆಚ್ಚಿಸಿದೆ. ಇದರ ಜೊತೆಗೆ ರೇಸ್‌ಟ್ರ್ಯಾಕ್ ರೋಡ್‌ನಿಂದ ತೆಗೆದ ನೈಜ ಘಟನೆ ಎಂಬ ಟ್ಯಾಗ್ ಲೈನ್ ಇದೀಗ ಎಲ್ಲರ ಗಮನಸೆಳೆದಿದೆ.

 

From the racetrack to the road. The new V10 Lamborghini.
We are about to embark on a new, fantastic chapter of our history. Tune in here on November 18, 2020 at 4 PM CET for the official unveiling: https://t.co/WGuv2VFhaI pic.twitter.com/HowVW9dKin

— Lamborghini (@Lamborghini)

ಲ್ಯಾಂಬೋರ್ಗಿನಿ ಉರುಸ್ ಕಾರಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಡ್ರೈವ್!..

ಈಗಾಗಲೇ ಫೆರಾರಿ SF90 ಸ್ಪೈಡರ್ ಕಾರು ಅನಾವರಣಗೊಂಡಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿ ಲ್ಯಾಂಬೋರ್ಗಿನಿ   V10 ಸೂಪರ್ ರೇಸ್‌ಟ್ರ್ಯಾಕರ್ ಕಾರು ಅನಾವರಣಗೊಳ್ಳುತ್ತಿದೆ.  ಸೋಶಿಯಲ್ ಮೀಡಿಯಾ ಪೋಸ್ಟರ್‌ನಲ್ಲಿ ಹೆಡ್‌ಲೈಟ್ ಮಾಹಿತಿ ಲಭ್ಯವಿದೆ. ಮೇಲ್ನೋಟಕ್ಕೆ ಇದು ಹುರಾಕನ್ EVO ಕಾರಿನಲ್ಲಿರುವಂತೆ ರೇರ್ ವೀಲ್ ಡ್ರೈವ್ ಫೀಚರ್ಸ್ ಹೊಂದಿದೆ ಎಂದು ಅಂದಾಜಿಸಲಾಗುತ್ತಿದೆ.

ಇತ್ತೀಚಗೆ ಲ್ಯಾಂಬೋರ್ಗೀನಿ ಹುರಕಾನ್ ಅಪ್‌ಗ್ರೇಡ್ ವರ್ಶನ್ ಬಿಡುಗಡೆ ಮಾಡಿತ್ತು. ಇದೀಗ ಸೂಪರ್ ರೇಸ್ ಟ್ರ್ಯಾಕರ್ ಕಾರಾಗಿರುವ   V10 ಕಾರು ಬಿಡುಗಡೆಗೆ ಸಜ್ಜಾಗಿದೆ. ಈ ಕಾರಿಗೂ ಸಹಜ ರೀತಿಯಲ್ಲೇ ಬೆಂಗಳೂರಿನಲ್ಲಿ ಗರಿಷ್ಠ ಬೇಡಿಕೆ ಬರುವುದರಲ್ಲಿ ಅನುಮಾನವಿಲ್ಲ.

click me!