ಗ್ರಾಹಕರಿಗೆ ಸರ್ವೀಸ್ ಪ್ಯಾಕೇಜ್ ಘೋಷಿಸಿದ ಕಿಯಾ, ಇಲ್ಲಿದೆ ಸೌಲಭ್ಯದ ವಿವರ!

By Suvarna News  |  First Published Nov 14, 2020, 9:15 PM IST

ದೀಪಾವಳಿ ಹಬ್ಬಕ್ಕೆ ಕಿಯಾ ಮೋಟಾರ್ಸ್ ಗ್ರಾಹಕರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಈ ಮೂಲಕ ಗ್ರಾಹಕರ ಕಾರು ಸರ್ವೀಸ್ ಮತ್ತಷ್ಟು ಸುಲಭಗೊಳಿಸಿದೆ. ಈ ಕುರಿತ ಹೆಚ್ಚನ ವಿವರ ಇಲ್ಲಿದೆ.


ಅನಂತಪುರಂ(ನ.14): ಕಿಯಾ ಮೋಟಾರ್ಸ್ ಇಂಡಿಯಾ ಗ್ರಾಹಕರಿಗಾಗಿ ವಿಶೇಷ ಸರ್ವೀಸ್ ಪ್ಯಾಕೇಜ್ ಘೋಷಿಸಿದೆ. ಗ್ರಾಹಕರ ಸುರಕ್ಷತೆ ಹಾಗೂ ಅವರ ಅನುಕೂಲಕ್ಕೆ ತಕ್ಕಂತೆ ಸರ್ವೀಸ್ ಪ್ಯಾಕೇಜ್ ನೀಡುತ್ತಿದೆ. ಈ ಸರ್ವೀಸ್ ಪ್ಯಾಕೇಜ್ ಮೂಲಕ ಗ್ರಾಹಕರಿಗೆ ಪಿಕ್ ಅಪ್ ಹಾಗೂ ಡ್ರಾಪ್ ಸೌಲಭ್ಯ ನೀಡುತ್ತಿದೆ.

ಮತ್ತಷ್ಟು ಆಕರ್ಷಕ, ಹೆಚ್ಚುವರಿ ಫೀಚರ್ಸ್, ಕಿಯಾ ಸೆಲ್ಟೋಸ್ ಆ್ಯನಿವರ್ಸಡಿ ಎಡಿಶನ್ ಕಾರು ಲಾಂಚ್!.

Tap to resize

Latest Videos

undefined

ಕಾರು ಸರ್ವೀಸ್ ಸೇರಿದಂತೆ ಯಾವುದೇ ವಿಚಾರಕ್ಕಾಗಿ ಶೋ ರೂಂ ಅಥವಾ ಸರ್ವೀಸ್ ಸೆಂಟರ್ ತೆರಳಲು ಗ್ರಾಹಕರಿಗೆ ಸರ್ವೀಸ್ ಪ್ಯಾಕೇಜ್ ನೀಡಲಾಗಿದೆ. ಇನ್ನು ಗ್ರಾಹಕರ ಪಿಕ್ ಅಪ್ ಹಾಗೂ ಡ್ರಾಪ್ ಸರ್ವೀಸ್‌ಗೂ ಹಲವು ಮುಂಜಾಗ್ರತ ಕ್ರಮ ಕೈಗೊಂಡಿದೆ. ಗ್ರಾಹಕರನ್ನು ಪಿಕ್ ಅಪ್ ಮಾಡುವ ಮೊದಲೇ ಗ್ರಾಹಕರಿಗೆ ಮೆಸೇಜ್ ರವಾನೆಯಾಗಲಿದೆ.

ಮಾರುತಿ ಬ್ರೆಜಾ, ವೆನ್ಯೂ ಕಾರಿಗೆ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಕಾರು ಬಿಡುಗಡೆ!..

ಸಂದೇಶದಲ್ಲಿ ಪಿಕ್ ಅಪ್ ವಾಹನ, ಡ್ರೈವರ್ ಮೊಬೈಲ್ ಸಂಖ್ಯೆ ಎಲ್ಲಾ ವಿವರ ಲಭ್ಯವಾಗಲಿದೆ. ಇನ್ನು ಪಿಕ್ ಅಪ್ ವಾಹನ ಕೂಡ ಸ್ಯಾನಿಟೈಸ್ ಮಾಡಿ, ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಕಿಯಾ ಹೇಳಿದೆ. ವಿಶೇಷ ಪ್ಯಾಕೇಜ್ ಮೂಲಕ ದೀರ್ಘ ಕಾಲದ ಸರ್ವೀಸ್ ಪ್ಯಾಕೇಜ್ ಕೂಡ ಲಭ್ಯವಿದೆ. 

2 ವರ್ಷ/20,000 ಕಿ.ಮೀ, 3 ವರ್ಷ/30,000 ಕಿ.ಮೀ, 4 ವರ್ಷ /40,000 ಕಿ.ಮೀ ಹಾಗೂ 5 ವರ್ಷ/50,000 ಕಿ,ಮೀ  ಸರ್ವೀಸ್ ಪ್ಯಾಕೇಜ್ ಆಯ್ಕೆ ಕೂಡ ಲಭ್ಯವಿದೆ. ಇದರ ಜೊತೆಗೆ ಪ್ರಿವೆಂಟೀವ್ ಕೇರ್, ಹೈಜೀನ್ ಕೇರ್, ಎಸಿ ಕೇರ್ ಸೇರಿದಂತೆ ನಾಲ್ಕು ಕೇರ್ ಸರ್ವೀಸ್ ಕೂಡ ಲಭ್ಯವಿದೆ.
 

click me!