ಪಲ್ಸರ್ 150 ಬೈಕ್ ಬುಕ್ ಮಾಡಿದ್ರೆ ರಣವೀರ್ ಸಿಂಗ್ ಭೇಟಿಯಾಗೋ ಅವಕಾಶ!

Published : Feb 03, 2019, 09:22 AM IST
ಪಲ್ಸರ್ 150 ಬೈಕ್ ಬುಕ್ ಮಾಡಿದ್ರೆ ರಣವೀರ್ ಸಿಂಗ್ ಭೇಟಿಯಾಗೋ ಅವಕಾಶ!

ಸಾರಾಂಶ

ಗ್ರಾಹಕರಿಗೆ ಬಾಲಿವುಡ್ ಸ್ಟಾರ್ ನಟನನ್ನ ಭೇಟಿಯಾಗಿ ಮಾತುಕತೆ ನಡೆಸಲು ಬಜಾಜ್ ಅವಕಾಶ ಕಲ್ಲಲಿಸಿದೆ.  ಬಜಾಜ್ ಪಲ್ಸರ್ 150 ಸ್ಪೆಷಲ್ ಎಡಿಶನ್ ಬೈಕ್ ಬುಕ್ ಮಾಡಿದರೆ ಬಾಲಿವುಡ್ ನಟ ರಣವೀರ್ ಸಿಂಗ ಭೇಟಿ ಮಾಡೋ ಅವಕಾಶ ಸಿಗಲಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.  

ಮುಂಬೈ(ಫೆ.03): ಬಜಾಜ್ ಕಂಪನಿಯ ಪಾಪ್ಯುಲರ್ ಬೈಕ್ ಪಲ್ಸರ್ 150 ನಿಯೊನ್ ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾಗಿದೆ. 3 ಕಲರ್‌ಗಳಲ್ಲಿ ನೂತನ ಬೈಕ್ ಲಭ್ಯವಿದೆ. ಎಂಜಿನ್ ಭಾಗದಲ್ಲಿ ಯಾವುದೇ ಬದಲಾವಣೆ ಮಾಡದೇ, ಪೈಂಟ್ಸ್, ಸ್ಟಿಕ್ಕರ್, ಹಾಗೂ ಲುಕ್‌ನಲ್ಲಿ ಬದಲಾವಣೆ ಮಾಡಿ ಬಜಾಜ್ ಪಲ್ಸರ್ 150 ನಿಯೊನ್ ಬೈಕ್ ಬಿಡುಗಡೆಯಾಗಿತ್ತು.

ಇದನ್ನೂ ಓದಿ: ಜನವರಿ 2019ರಲ್ಲಿ ಗರಿಷ್ಠ ಮಾರಾಟವಾದ ಕಾರು ಯಾವುದು?

ಇದೀಗ ಬಜಾಜ್ ಪಲ್ಸಾರ್ 150 ನಿಯೊನ್ ಎಡಿಶನ್ ಬೈಕ್ ಜಾಹೀರಾತಿನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ಫೆಬ್ರವರಿ 11ರೊಳಗೆ ಬಜಾಜ್ ಪಲ್ಸಾರ್ 150 ನಿಯೊನ್ ಎಡಿಶನ್ ಬೈಕ್ ಬುಕ್ ಮಾಡಿದ ಅದೃಷ್ಟವಂತರಿಗೆ ಸ್ಟಾರ್ ನಟ ರಣವೀರ್ ಸಿಂಗ್ ಭೇಟಿ ಮಾಡೋ ಅವಕಾಶವಿದೆ. ಫೆಬ್ರವರಿ 14 ರಂದು ಅದೃಷ್ಟವಂತರು ರಣವೀರ್ ಸಿಂಗ್ ಭೇಟಿಯಾಗೋ ಅವಕಾಶವನ್ನ ಬಜಾಜ್ ಕಲ್ಪಿಸಿದೆ.

ಇದನ್ನೂ ಓದಿ: ರಾಜಧಾನಿಯ ವಾಹನಗಳಿಗೆ ಹೈ ಸೆಕ್ಯೂರಿಟಿ ಪ್ಲೇಟ್-ಕಲರ್ ಕೋಡ್ ಕಡ್ಡಾಯ!

149 ಸಿಸಿ, ಸಿಂಗಲ್ ಸಿಲಿಂಡರ್, 14 ಬಿಹೆಚ್‌ಪಿ, 8000 ಆರ್‌ಪಿಎಂ, 13.4nm ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಗೇರ್ ಬಾಕ್ಸ್, ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಕೂಡ ಹೊಂದಿದೆ. ನೂತನ ಪಲ್ಸರ್ ಕ್ಲಾಸಿಕ್ ಬೆಲೆ 64,998 ರೂಪಾಯಿ(ಎಕ್ಸ ಶೋ ರೂಂ). ಪೆಟ್ರೋಲ್ ಟ್ಯಾಂಕ್ ಮೇಲಿನ ಪಲ್ಸಾರ್ ಲೋಗೋ, ವೀಲ್ಹ್ ರಿಮ್ಸ್, ಸೆಂಟ್ರಲ್ ಪ್ಯಾನಲ್ ಹಾಗೂ 150 ಡೆಕಾಲ್ ಬಣ್ಣದಲ್ಲಿ ಬದಲಾವಣೆ ಮಾಡಲಾಗಿದೆ. 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ