ಬೆಂಟ್ಲಿ ಬೆಂಟೆಯಾಗ to ಬೆಂಝ್: ದುಬೈ ಪೊಲೀಸರ ದುಬಾರಿ 'ಕಾರು'ಬಾರು!

By Web Desk  |  First Published Apr 23, 2019, 9:01 PM IST

ವಿಶ್ವದ ಇತರ ಯಾವುದೇ ಪೊಲೀಸರಿಗೆ ಹೊಲೀಸಿದರೆ ದುಬೈ ಪೊಲೀಸರು ಭಿನ್ನ. ಕಾರಣ ದುಬೈ ಪೊಲೀಸರು ಅತ್ಯುಂತ ದುಬಾರಿ ಕಾರುಗಳನ್ನೇ ಬಳಸುತ್ತಾರೆ. ಇಲ್ಲಿದೆ ದುಬೈ ಪೊಲೀಸರ ದುಬಾರಿ ಕಾರು ಬಾರು ವಿಡಿಯೋ


ದುಬೈ (ಏ.23): ದುಬೈ ಪೊಲೀಸರ ಬಳಿ ವಿಶ್ವದಲ್ಲಿರುವ ಬಹುತೇಕ ಎಲ್ಲಾ ದುಬಾರಿ ಕಾರುಗಳಿವೆ. ಹೀಗಾಗಿಯೇ ದುಬೈ ಪೊಲೀಸರು ಇತರ ಪೊಲೀಸರಿಗಿಂತ ಭಿನ್ನ. ದುಬೈ ಪೊಲೀಸರ ಬಳಿ 4 ಕೋಟಿ ಮೌಲ್ಯದ ಬೆಂಟ್ಲಿ ಬೆಂಟೆಯಾಗ ಕಾರಿನಿಂದ ಹಿಡಿದು, BMW,ಮರ್ಸಡೀಸ್ ಬೆಂಝ್, ಆಡಿ, ಪೊರ್ಶೆ, ಮೆಕ್ಲೆರೆನ್ ಸೇರಿದಂತೆ ಎಲ್ಲಾ ದುಬಾರಿ ಕಾರುಗಳಿವೆ. 

ಇದನ್ನೂ ಓದಿ: ಭಾರತೀಯ ಕಾರ್ಪೆಂಟರ್‌ಗೆ ಜಾಕ್‌ಪಾಕ್- ಲಕ್ಕಿ ಡ್ರಾನಲ್ಲಿ ಬಂತು 2 ಕೋಟಿ ಕಾರು!

Tap to resize

Latest Videos

undefined

ದುಬೈ ಪೊಲೀಸರ ಬಳಿ ಇರೋ ದುಬಾರಿ ಕಾರುಗಳ ಪೈಕಿ ಕೆಲ ಕಾರುಗಳನ್ನು ಪ್ರದರ್ಶಿಸಿದ್ದಾರೆ. ಎರಡು BMW i8, ಆಡಿ  R8, ಪೊರ್ಶೆ ಪನಾಮೆರಾ 4S, ಬ್ರೆಬಸ್ G700 ವ್ಯಾಗನ್, ಮರ್ಸಿಡೀಸ್ ಬೆಂಝ್ SLS AMG, ಬೆಂಟ್ಲಿ ಕಾಂಟಿನೆಂಟಲ್ GT, ಬೆಂಟ್ಲಿ ಬೆಂಟೆಯಾಗ, ನಿಸಾನ್ GT-R  ಹಾಗೂ ಮೆಕ್ಲೆರನ್ ಕಾರುಗಳನ್ನು ಪ್ರದರ್ಶಿಸಿದರು.

"

ಇದನ್ನೂ ಓದಿ: ವಿಶ್ವದ ದುಬಾರಿ SUV ಕಾರು ಖರೀದಿಸಿದ ರೋನಾಲ್ಡೋ!

ದುಬೈ ಪೊಲೀಸರು ತಮ್ಮ ಬಳಿ ಇರೋ ಕೆಲವೇ ಕೆಲವೇ ಕಾರುಗಳನ್ನು ಮಾತ್ರ ಪ್ರದರ್ಶಿಸಿದ್ದಾರೆ. ದುಬೈನಲ್ಲಿರುವ ಎಲ್ಲಾ ಪೊಲೀಸ್ ಸ್ಟೇಶನ್‌ಗಳಲ್ಲಿ ದುಬಾರಿ ಕಾರುಗಳಿವೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತಾರೆ. ಇದರ ಜೊತೆ ಹೂವರ್ ಬೈಕ್(ಹಾರುವ ಬೈಕ್) ಕೂಡ ದುಬೈ ಪೊಲೀಸರು ಬಳಸುತ್ತಿದ್ದಾರೆ. 
 

click me!